ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ರೈತರ ಹೋರಾಟ ಬೆಂಬಲಿಸಿ 25 ಸಾವಿರ ಯೋಧರು ಶೌರ್ಯಚಕ್ರ ಹಿಂದಿರುಗಿಸಿದರೇ?

|
Google Oneindia Kannada News

ನವದೆಹಲಿ, ಡಿಸೆಂಬರ್ 15: ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ 25 ಸಾವಿರ ಸೈನಿಕರು ತಮ್ಮ ಶೌರ್ಯ ಪದಕವನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಪ್ರಜಾಸಕ್ತಿ ಪತ್ರಿಕೆಯಲ್ಲಿ ಈ ಕುರಿತು ಬರೆಯಲಾಗಿದ್ದು, ದೆಹಲಿಯ ಗಡಿಯಲ್ಲಿ ರೈತರು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರಿಗೆ ಬೆಂಬಲ ನೀಡಿರುವ ಯೋಧರು ತಮ್ಮ ಶೌರ್ಯಚಕ್ರ ಪದಕವನ್ನು ವಾಪಸ್ ನೀಡಿದ್ದಾರೆ ಎಂದು ಹೇಳಲಾಗಿದೆ.

 Fact Check: ಮುಕೇಶ್ ಅಂಬಾನಿ ಮೊಮ್ಮಗುವನ್ನು ನೋಡಲು ಮೋದಿ ಆಸ್ಪತ್ರೆಗೆ ಹೋಗಿದ್ದರೇ? Fact Check: ಮುಕೇಶ್ ಅಂಬಾನಿ ಮೊಮ್ಮಗುವನ್ನು ನೋಡಲು ಮೋದಿ ಆಸ್ಪತ್ರೆಗೆ ಹೋಗಿದ್ದರೇ?

ಆದರೆ ಇದು ಸುಳ್ಳು ಸುದ್ದಿಯಾಗಿದ್ದು, ಯೋಧರು ಶೌರ್ಯಚಕ್ರ ಪದಕವನ್ನು ಸರ್ಕಾರಕ್ಕೆ ಹಿಂದಿರುಗಿಸಿಲ್ಲ. 1956 ರಿಂದ 2019ರವರೆಗೆ ಕೇವಲ 2048 ಯೋಧರಿಗೆ ಮಾತ್ರ ಶೌರ್ಯಚಕ್ರ ಲಭ್ಯವಾಗಿದೆ. ಪತ್ರಿಕೆಯಲ್ಲಿ ನೀಡಿರುವ ವರದಿ ಸುಳ್ಳು ಎಂದು ಹೇಳಿದ್ದಾರೆ.

Fact Check: Report Claims 25,000 Indian Army Soldiers Have Returned Shaurya Chakra Medals

ಈ ವರ್ಷದ ಆರಂಭದಲ್ಲಿ ಮೂರು ಬಾಕ್ಸಿಂಗ್ ಲೆಜೆಂಡ್‌ಗಳಾದ ಗುರ್ಬಾಕ್ಸ್ ಸಿಂಗ್ ಸಂಧು, ಕೌರ್ ಸಿಂಗ್ ಹಾಗೂ ಜೈಪಾಲ್ ಸಿಂಗ್ ರೈತರ ಪರವಾಗಿ ಮಾತನಾಡಿದ್ದು, ಅವರ ಪದಕಗಳನ್ನು ಹಿಂದಿರುಗಿಸಿದ್ದಾರೆ.

ಪದ್ಮಶ್ರೀ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಪಡೆದಿದ್ದವರು ರೈತರ ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕರ್ತಾರ್ ಸಿಂಗ್ , ಸಜ್ಜನ್ ಸಿಂಗ್ ಚೀಮಾ, ಹಾಕಿ ಆಟಗಾರ ಅರ್ಜುನ ಪ್ರಶಸ್ತಿ ಪುರಸ್ಕೃತ ರಾಜ್ಬೀರ್ ಕೌರ್ ಕೂಡ ಇದ್ದಾರೆ.

ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್, ಪಿಯೂಷ್ ಗೋಯಲ್, ಕಿರಿಯ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಪ್ರತಿನಿಧಿಗಳ‌ ನಡುವೆ ಈವರೆಗೆ 5 ಸಭೆಗಳು ನಡೆದಿವೆ.

ಅಮಿತ್ ಶಾ ರೈತ ಸಂಘಟನೆಗಳ 13 ಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಆದರೆ ಪ್ರಭಾವಿ ಅಮಿತ್ ಶಾ ಆಗಲಿ, ಇತರೆ ಕೇಂದ್ರ ಸಚಿವರಾಗಲಿ ರೈತರನ್ನು ಮನವೊಲಿಸಲು ಸಫಲರಾಗಿಲ್ಲ.

ಇದರಿಂದ ಮಾತುಕತೆಯಿಂದ ಸಮಸ್ಯೆ ಬಗೆಹರಿಯುವ ಸಾಧ್ಯತೆ ಕ್ಷೀಣಿಸಿದ್ದು ರೈತರು ಪ್ರತಿಭಟನೆ ಮುಂದುವರೆಸುತ್ತಿದ್ದಾರೆ. ದೆಹಲಿ ಚಲೊ, ಹೆದ್ದಾರಿ ತಡೆ, ಟೋಲ್ ಫ್ಲಾಜಾಗಳ ಬಂದ್, ಬಿಜೆಪಿ ನಾಯಕರ ಮನೆ ಮುಂದೆ ಮುಷ್ಕರ, ಭಾರತ್ ಬಂದ್, ಉಪವಾಸ ಸತ್ಯಾಗ್ರಹಗಳೆಲ್ಲವನ್ನೂ ಮಾಡಿರುವ ರೈತರು ಮುಂದೆ ಯಾವ ರೀತಿಯ ಪ್ರತಿಭಟನೆ ನಡೆಸುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ.

Fact Check

ಕ್ಲೇಮು

ರೈತರ ಹೋರಾಟ ಬೆಂಬಲಿಸಿ ಸರ್ಕಾರಕ್ಕೆ ಶೌರ್ಯಚಕ್ರ ಹಿಂದಿರುಗಿಸಿದ 25 ಸಾವಿರ ಯೋಧರು

ಪರಿಸಮಾಪ್ತಿ

1956 ರಿಂದ 2019ರವರೆಗೆ ಕೇವಲ 2048 ಯೋಧರಿಗೆ ಮಾತ್ರ ಶೌರ್ಯಚಕ್ರ ಬಂದಿದೆ. 25 ಸಾವಿರ ಸೈನಿಕರು ಶೌರ್ಯಚಕ್ರ ಹಿಂದಿರುಗಿಸಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
In the wake of farmers’ protest against three farm laws, a Telugu newspaper has claimed that 25 thousand soldiers of the Indian Army have returned their Shaurya Chakra medals. The report in Prajashakti newspaper states that the medals were returned in order to express solidarity with the farmers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X