ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಠ್ಮಂಡು ಪಬ್‌ನಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಮಹಿಳೆ ಯಾರು?

|
Google Oneindia Kannada News

ಮೇ 3 ರಂದು ನೈಟ್‌ಕ್ಲಬ್‌ನಂತೆ ಕಾಣುವ ಸ್ಥಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ವಿವಾದವನ್ನೇ ಸೃಷ್ಟಿ ಮಾಡಿದೆ. ಕಾಂಗ್ರೆಸ್ ಪಕ್ಷದ ನಾಯಕನ ಜೊತೆಯಲ್ಲಿದ್ದ ಮಹಿಳೆ ನೇಪಾಳದ ಚೀನಾ ರಾಯಭಾರಿ ಹೌ ಯಾಂಕಿ ಎಂದು ಹೇಳಿಕೊಂಡು ಅನೇಕ ಜನರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಅವರು ನೈಟ್‌ಕ್ಲಬ್‌ನಲ್ಲಿ ಚೀನಾದ ರಾಯಭಾರಿಯನ್ನು ಏಕೆ ಭೇಟಿಯಾದರು ಮತ್ತು ಅವರು ಏನು ಮಾತನಾಡುತ್ತಿದ್ದಾರೆ ಎಂದು ಆಶ್ಚರ್ಯ ಪಡುವ ಮೂಲಕ ಹಲವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ವಿಡಿಯೋದಲ್ಲಿರುವ ಮಹಿಳೆ ರಾಹುಲ್ ಗಾಂಧಿ ನೇಪಾಳದಲ್ಲಿ ಭಾಗವಹಿಸಿದ್ದ ಮದುವೆಯಲ್ಲಿ ವಧುವಿನ ಸ್ನೇಹಿತೆ ಎಂದು ಕಂಡುಹಿಡಿದಿದೆ. ಆಕೆ ಚೀನಾ ರಾಯಭಾರಿ ಹೌ ಯಾಂಕಿ ಅಲ್ಲ ಎಂದು ತಿಳಿದು ಬಂದಿದೆ.

ರಾಹುಲ್ ಗಾಂಧಿ ನೈಟ್‌ಕ್ಲಬ್ ವಿಚಾರ: ಬಿಜೆಪಿಗೆ ಮಹುವಾ ಮೊಯಿತ್ರಾ ಕ್ಲಾಸ್ ರಾಹುಲ್ ಗಾಂಧಿ ನೈಟ್‌ಕ್ಲಬ್ ವಿಚಾರ: ಬಿಜೆಪಿಗೆ ಮಹುವಾ ಮೊಯಿತ್ರಾ ಕ್ಲಾಸ್

ಈ ಬಗ್ಗೆ ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೇವಾಲಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 'ರಾಹುಲ್ ಗಾಂಧಿ ಅವರು ನೇಪಾಳಕ್ಕೆ ಸ್ನೇಹಿತರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಭೇಟಿ ನೀಡಿದ್ದಾರೆ. ಅವರ ಸ್ನೇಹಿತೆ ಪತ್ರಕರ್ತರಾಗಿದ್ದಾರೆ" ಎಂದಿದ್ದಾರೆ.

Fact Check: Rahul Gandhi seen with Chinese diplomat in Kathmandu pub?

ಸುದ್ದಿ ವರದಿಗಳ ಪ್ರಕಾರ, ಕಾಂಗ್ರೆಸ್ ನಾಯಕರು ತಮ್ಮ ಸ್ನೇಹಿತೆ CNN ಇಂಟರ್‌ನ್ಯಾಶನಲ್‌ನ ದೆಹಲಿ ಮೂಲದ ವರದಿಗಾರ್ತಿ ಸುಮ್ನಿಮಾ ಉದಾಸ್ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ಕಠ್ಮಂಡುವಿಗೆ ತೆರಳಿದ್ದಾರೆ. ಅವರು ಮ್ಯಾನ್ಮಾರ್‌ನ ಮಾಜಿ ನೇಪಾಳಿ ರಾಯಭಾರಿ ಭೀಮ್ ಉದಾಸ್ ಅವರ ಪುತ್ರಿ ಎಂದು ಹೇಳಲಾಗುತ್ತಿದೆ. ಕಠ್ಮಂಡು ಪೋಸ್ಟ್ ಪ್ರಕಾರ, ನಿಮಾ ಮಾರ್ಟಿನ್ ಶೆರ್ಪಾ ಅವರೊಂದಿಗೆ ಸುಮ್ನಿಮಾ ಉದಾಸ್ ಅವರ ವಿವಾಹವು ಮೇ 3 ರಂದು ನಡೆಯಿತು. ಮೇ 5 ರಂದು ಆರತಕ್ಷತೆಯನ್ನು ನಿಗದಿಪಡಿಸಲಾಗಿದೆ.

ವೈರಲ್ ಆದ ವಿಡಿಯೋದಲ್ಲಿ ರಾಹುಲ್ ಗಾಂಧಿ ಜೊತೆ ಇರುವ ಮಹಿಳೆ ಯಾರು?

ವಿಡಿಯೊದಲ್ಲಿ ಕಂಡುಬರುವ ನೈಟ್‌ಕ್ಲಬ್, ಕಠ್ಮಂಡುವಿನ ಜನಪ್ರಿಯ ಲಾರ್ಡ್ ಆಫ್ ದಿ ಡ್ರಿಂಕ್ಸ್ ಎಂದು ಸುದ್ದಿ ವರದಿಗಳು ಸೂಚಿಸಿವೆ. ಈ ಕಠ್ಮಂಡುವಿನಲ್ಲಿ ಪಬ್‌ನ ಆಡಳಿತವನ್ನು ಸಂಪರ್ಕಿಸಿದಾಗ, ಮೇ 2 ರಂದು ಐದಾರು ಜನರೊಂದಿಗೆ ಗಾಂಧಿ ಪಬ್‌ಗೆ ಭೇಟಿ ನೀಡಿದ್ದರು ಎಂದು ಲಾರ್ಡ್ ಆಫ್ ದಿ ಡ್ರಿಂಕ್ಸ್‌ನ ಸಿಇಒ ರಾಬಿನ್ ಶ್ರೇಷ್ಠಾ ಫೋನ್ ಕರೆಯಲ್ಲಿ ಖಚಿತಪಡಿಸಿದ್ದಾರೆ. ಅವರ ಭೇಟಿಯ ವೇಳೆ ಗಾಂಧಿ ಅವರೊಂದಿಗೆ ಯಾವುದೇ ಚೀನಾ ರಾಯಭಾರಿ ಇರಲಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.

"ರಾಹುಲ್ ಗಾಂಧಿ ಅವರು ಒಂದೂವರೆ ಗಂಟೆಗಳ ಕಾಲ ಇಲ್ಲಿದ್ದರು. ಅದು ಅವರ ವೈಯಕ್ತಿಕ ಭೇಟಿಯಾಗಿತ್ತು. ಚೀನಾ ರಾಯಭಾರಿ ಕಚೇರಿಯಿಂದ ಯಾರೂ ಅವರೊಂದಿಗೆ ಇರಲಿಲ್ಲ"ಎಂದು ಶ್ರೇಷ್ಠಾ ತಿಳಿಸಿದ್ದಾರೆ.

ಕಠ್ಮಂಡುವಿನ ನೈಟ್‌ಕ್ಲಬ್‌ನಲ್ಲಿ ರಾಹುಲ್ ಗಾಂಧಿ ಪಾರ್ಟಿ: ಬಿಜೆಪಿ ಟೀಕೆ ಕಠ್ಮಂಡುವಿನ ನೈಟ್‌ಕ್ಲಬ್‌ನಲ್ಲಿ ರಾಹುಲ್ ಗಾಂಧಿ ಪಾರ್ಟಿ: ಬಿಜೆಪಿ ಟೀಕೆ

ವೈರಲ್ ವೀಡಿಯೊದಲ್ಲಿ ಗಾಂಧಿಯೊಂದಿಗೆ ಕಾಣಿಸಿಕೊಂಡ ಮಹಿಳೆಯ ಗುರುತನ್ನು ವಿಚಾರಿಸಿದಾಗ, ಅವಳು ವಧುವಿನ ಸ್ನೇಹಿತೆ ಮತ್ತು ಮದುವೆ ಸಮಾರಂಭಕ್ಕೆ ಆಹ್ವಾನಿಸಲ್ಪಟ್ಟಿದ್ದಳು ಎಂದು ಹೇಳಿದರು. "ಅವರು ಚೀನಾದ ರಾಯಭಾರಿಯಾಗಿರಲಿಲ್ಲ" ಎಂದು ಶ್ರೇಷ್ಠಾ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಇದು ವೈಯಕ್ತಿಕ ಭೇಟಿಯಾಗಿರುವುದರಿಂದ, ಅತಿಥಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಶ್ರೇಷ್ಠಾ ಬಯಸಲಿಲ್ಲ.

ಇಂಡಿಯಾ ಟುಡೇ ಕೂಡ ಕಠ್ಮಂಡು ಪೋಸ್ಟ್‌ನ ಹಿರಿಯ ಪತ್ರಕರ್ತ ಅನಿಲ್ ಗಿರಿ ಅವರೊಂದಿಗೆ ವಿಡಿಯೋದಲ್ಲಿರುವ ಮಹಿಳೆಯ ಗುರುತಿನ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದೆ. "ರಾಹುಲ್ ಗಾಂಧಿ ವಧು-ವರರ ಸ್ನೇಹಿತರೊಂದಿಗೆ ಪಬ್‌ನಲ್ಲಿದ್ದರು. ಆದರೆ ರಾಹುಲ್ ಗಾಂಧಿಯೊಂದಿಗಿದ್ದ ಮಹಿಳೆ ಚೀನಾದ ರಾಯಭಾರಿ ಅಲ್ಲ. ಅವಳು ವಧುವಿನ ಸ್ನೇಹಿತೆ ನೇಪಾಳಿ ಮಹಿಳೆ " ಎಂದು ಗಿರಿ ಹೇಳಿದ್ದಾರೆ.

ಇಂಡಿಯಾ ಟುಡೇ ರಾಹುಲ್ ಗಾಂಧಿ ಅವರ ಖಾಸಗಿತನಕ್ಕೆ ಧಕ್ಕೆಯಾಗದಂತೆ ಅವರ ಜೊತೆ ಕಾಣಿಸಿಕೊಂಡ ಮಹಿಳೆಯ ಗುರುತನ್ನು ಮತ್ತಷ್ಟು ಕೆದಕಲಿಲ್ಲ. ದಾಖಲೆಯನ್ನು ನೇರವಾಗಿ ಹೊಂದಿಸಲು ನಾವು ಇಮೇಲ್ ಮೂಲಕ ಕಠ್ಮಂಡುವಿನ ಚೀನಾ ರಾಯಭಾರ ಕಚೇರಿಯನ್ನು ಸಂಪರ್ಕಿಸಲಾಯಿತು. ಅಲ್ಲೂ ಕೂಡ ಚೀನಾ ರಾಯಭಾರಿ ರಾಹುಲ್ ಗಾಂಧಿಯನ್ನು ಇತ್ತೀಚೆಗೆ ಭೇಟಿಯಾಗಿಲ್ಲ ಎನ್ನುವ ವಿಚಾರ ತಿಳಿದು ಬಂದಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ, ವೈರಲ್ ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರು ಚೀನಾದ ರಾಯಭಾರಿಯೊಂದಿಗೆ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಅವರು ಭಾಗವಹಿಸಿದ್ದ ಮದುವೆಯಲ್ಲಿ ವಧುವಿನ ಸ್ನೇಹಿತರೊಂದಿಗೆ ಅವರು ಮಾತನಾಡುತ್ತಿದ್ದರು ಎನ್ನುವುದು ತಿಳಿದು ಬಂದಿದೆ.

Fact Check

ಕ್ಲೇಮು

ಕಠ್ಮಂಡು ಪಬ್‌ನಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಮಹಿಳೆ ನೇಪಾಳದ ಚೀನಾ ರಾಯಭಾರಿ ಹೌ ಯಾಂಕಿ ಎಂದು ವಿಡಿಯೋ ವೈರಲ್

ಪರಿಸಮಾಪ್ತಿ

ನೇಪಾಳಕ್ಕೆ ರಾಹುಲ್ ಗಾಂಧಿ ಸ್ನೇಹಿತರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದು ಕಠ್ಮಂಡು ಪಬ್‌ನಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಮಹಿಳೆ ವಧುವಿನ ಸ್ನೇಹಿತೆ ಎಂದು ಸ್ಪಷ್ಟವಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Many people shared the video on Twitter and Facebook with the claim that the woman accompanying the Congress party leader was Hou Yanqi, the Chinese Ambassador to Nepal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X