ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಲಡಾಖ್‌ನಲ್ಲಿ ಭಾರತದ Mi-17 ಹೆಲಿಕಾಪ್ಟರ್ ಪತನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15 : ಲಡಾಖ್‌ನಲ್ಲಿ Mi-17 ಹೆಲಿಕಾಪ್ಟರ್ ಪತನವಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಆದರೆ ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ ಈ ಕುರಿತು ಸ್ಪಷ್ಟನೆ ನೀಡಿದ್ದು, ಹೆಲಿಕಾಪ್ಟರ್ ಲಡಾಖ್‌ನಲ್ಲಿ ಪತನವಾಗಿರಲಿಲ್ಲ, ಬದಲಾಗಿ 2018ರಲ್ಲಿ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು ಎಂದು ತಿಳಿಸಿದೆ.

ಸುಳ್ಳು ಪೋಸ್ಟ್ ಒಂದು ಭಾನುವಾರ ಹರಿದಾಡಿದ್ದು ಅದರಲ್ಲಿ ಭಾರತದ Mi-17 ಹೆಲಿಕಾಪ್ಟರ್ ಲಡಾಖ್‌ನಲ್ಲಿ ಪತನಗೊಂಡಿತ್ತು ಎಂದು ಹೇಳಲಾಗಿತ್ತು.

Fact Check: ಸೆಪ್ಟೆಂಬರ್ 25ರಿಂದ ದೇಶಾದ್ಯಂತ ಮತ್ತೊಂದು ಲಾಕ್‌ಡೌನ್Fact Check: ಸೆಪ್ಟೆಂಬರ್ 25ರಿಂದ ದೇಶಾದ್ಯಂತ ಮತ್ತೊಂದು ಲಾಕ್‌ಡೌನ್

ಪಿಐಬಿ ಈ ಕುರಿತು ತನಿಖೆ ನಡೆಸಿದ್ದು, ಉತ್ತರಾಖಂಡದ ಕೇದಾರನಾಥದಲ್ಲಿ 2018ರಲ್ಲಿ ಹೆಲಿಕಾಪ್ಟರ್ ಅಪಘಾತ ಸಂಭವಿಸಿತ್ತು ಎಂದು ಹೇಳಿದೆ. ಸಧ್ಯದಲ್ಲಿ ಇಂತಹ ಯಾವುದೇ ಅಪಘಾತಗಳು ಸಂಭವಿಸಿಲ್ಲ.

 PIB Busts Fake News On Mi-17 Helicopter Crash In Ladakh

ಇಂದು ಸಂಸತ್ ಮುಂಗಾರು ಅಧಿವೇಶನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಭಾರತವೂ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಿದೆ. ಚೀನಾವು ಹಳೆಯ ಎಲ್ಲಾ ಒಪ್ಪಂದವನ್ನು ಮುರಿದಿದೆ. ನಾವು ನಮ್ಮ ಗಡಿಯನ್ನು ಕಾಪಾಡಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

Fact Check

ಕ್ಲೇಮು

ಲಡಾಖ್‌ನಲ್ಲಿ ಭಾರತದ Mi-17 ಹೆಲಿಕಾಪ್ಟರ್ ಪತನ

ಪರಿಸಮಾಪ್ತಿ

ಲಡಾಖ್‌ನಲ್ಲಿ ಯಾವುದೇ ಭಾರತದ ಹೆಲಿಕಾಪ್ಟರ್ ಪತನಗೊಂಡಿಲ್ಲ, ಆ ಚಿತ್ರದಲ್ಲಿರುವುದು 2018ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನದ ಚಿತ್ರ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
The Press Information Bureau (PIB) on Tuesday busted a fake tweet posted on Sunday that said that an Indian Mi-17 helicopter crashed in Ladakh. The Fact Check team of the PIB said that the image posted with the tweet was from 2018 in Kedarnath and not from Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X