ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಗಣರಾಜ್ಯೋತ್ಸವ ಆಚರಿಸದ ಮದರಸಾಗಳು ಬಂದ್ ಎಂದು ಸಿಎಂ ಯೋಗಿ ಹೇಳಿದ್ದು ನಿಜವೇ?

|
Google Oneindia Kannada News

ಲಕ್ನೋ,ಜನವರಿ 22: ಗಣರಾಜ್ಯೋತ್ಸವ ಆಚರಿಸದಿದ್ದರೆ ಉತ್ತರ ಪ್ರದೇಶದಲ್ಲಿರುವ ಎಲ್ಲಾ ಮದರಸಾಗಳನ್ನು ಮುಚ್ಚುತ್ತೇನೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

ಜನವರಿ 26 ರಂದು ರಾಜ್ಯದ ಎಲ್ಲಾ ಮದರಸಾಗಳಲ್ಲಿ ಭಾರತದ ಧ್ವಜವಿರಬೇಕು ಅಥವಾ ರಾಷ್ಟ್ರಗೀತೆ ಹಾಡಬೇಕು ಇಲ್ಲವಾದರೆ ಮದರಸಾಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿತ್ತು.

ಆದರೆ ಈ ಆರೋಪ ಸುಳ್ಳಾಗಿದೆ, 2017 ರಿಂದ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿರುವ ಮದರಸಾಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ, ಉನ್ನತೀಕರಣಗೊಳಿಸುತ್ತಿದ್ದಾರೆ.

Fact Check: No, Yogi Govt Will Not Shut Madrasas That Do Not Celebrate Republic Day

ಪಠ್ಯದಲ್ಲಿ ಧಾರ್ಮಿಕ ವಿಷಯಗಳ ಹೊಸ ವಿಷಯಗಳನ್ನು ಅಡಕ ಮಾಡಲು ಮುಂದಾಗಿದ್ದಾರೆ. ಆದರೆ ಮದರಸಾಗಳನ್ನು ಮುಚ್ಚುವಂತಹ ಯಾವುದೇ ಆದೇಶವನ್ನು ಮಾಡಿಲ್ಲ.

ಮದರಸಾಗಳ ಅಭೀವೃದ್ಧಿಗೆ 479 ಕೋಟಿ ರೂ. ಹಣ ಮೀಸಲಿಡಲಾಗಿದೆ. ಮದರಸಾಗಳು ತಮ್ಮ ಮಾಹಿತಿಯನ್ನು ಸರ್ಕಾರಕ್ಕೆ ನೀಡಲು ನಿರಾಕರಿಸಿದರೆ ಅಂತಹ ಮದರಸಾಗಳಿಗೆ ನೀಡಲಾಗಿರುವ ಮಾನ್ಯತೆ ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಮದರಸಾಗಳೇ 2017 ರಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಆಚರಣೆ ಮಾಡುವಂತೆ ತೀರ್ಮಾನ ತೆಗೆದುಕೊಂಡಿದೆ. ಆದರೆ ಸರ್ಕಾರ ಯಾವುದೇ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Fact Check

ಕ್ಲೇಮು

ಗಣರಾಜ್ಯೋತ್ಸವ ಆಚರಿಸದಿದ್ದರೆ ಮದರಸಾಗಳನ್ನು ಮುಚ್ಚುತ್ತೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಪರಿಸಮಾಪ್ತಿ

ಗಣರಾಜ್ಯೋತ್ಸವ ಆಚರಿಸದಿದ್ದರೆ ಮದರಸಾಗಳನ್ನು ಮುಚ್ಚುತ್ತೇವೆ ಎಂದು ಯೋಗಿ ಆದಿತ್ಯನಾಥ್ ಯಾವುದೇ ಸೂಚನೆ ನೀಡಿಲ್ಲ, ಆರೋಪಗಳು ಸುಳ್ಳು

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A viral message on social media claims that the Yogi Adityanath government in Uttar Pradesh will shut down madrasas which do not celebrate Republic Day on January 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X