ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಸಾಮಾಜಿಕ ಜಾಲತಾಣಗಳ ಬಳಕೆಗೆ ಸರ್ಕಾರಿ ಗುರುತಿನ ಚೀಟಿ ಕಡ್ಡಾಯ?

|
Google Oneindia Kannada News

ನವದೆಹಲಿ,ಮಾರ್ಚ್ 02: ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳಿಗೆ ಸರ್ಕಾರಿ ಗುರುತಿನ ಚೀಟಿಯನ್ನು ಜೋಡಿಸಬೇಕು ಎಂದು ಕೇಂದ್ರ ಸರ್ಕಾರ ಯಾವುದೇ ನಿಯಮವನ್ನು ಮಾಡಿಲ್ಲ.

ಈ ಕುರಿತು ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದು ತಿಳಿದುಬಂದಿದೆ. ದೆಹಲಿ ಹೈಕೋರ್ಟ್ ವಕೀಲ ಪ್ರಶಾಂತ್ ಪಟೇಲ್ ಅವರು ಟ್ವಿಟ್ಟರ್‌ನಲ್ಲಿ ಈ ಕುರಿತು ಸಂದೇಶ ಹರಿಬಿಟ್ಟಿದ್ದರು.

ಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ಕೇಂದ್ರದ ಹೊಸ ಮಾರ್ಗಸೂಚಿಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ಕೇಂದ್ರದ ಹೊಸ ಮಾರ್ಗಸೂಚಿ

ಮುಂದಿನ ಮೂರು ತಿಂಗಳ ಒಳಗೆ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆದಾರರು ಕಡ್ಡಾಯವಾಗಿ ಆಧಾರ್ ಅಥವಾ ಇತರೆ ಸರ್ಕಾರಿ ಗುರುತು ಚೀಟಿಯನ್ನು ಜೋಡಿಸಬೇಕು ಎಂದು ಸರ್ಕಾರ ಆದೇಶಿಸಿದೆ ಎಂದು ಹೇಳಿದ್ದರು.

Fact Check:No, It’s Not Mandatory For Users To Verify Their Social Media Accounts Within 3 Months

ಆದರೆ, ಆ ರೀತಿಯ ಯಾವುದೇ ಆದೇಶ ಸರ್ಕಾರದಿಂದ ಆಗಿಲ್ಲ, ಬದಲಾಗಿ ಸಾಮಾಜಿಕ ಜಾಲತಾಣ ಹಾಗೂ ಒಟಿಟಿಗಳಿಗೆ ನಿಯಮಾವಳಿಗಳನ್ನು ರೂಪಿಸಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಒಂದು ಸಲಹೆಯನ್ನು ನೀಡಿತ್ತು.

ಆ ಪ್ರಕಾರ ಸಾಮಾಜಿಕ ಜಾಲತಾಣಗಳು ತಮ್ಮ ಬಳಕೆದಾರರ ನಿಖರತೆಯನ್ನು ಖಾತ್ರಿಪಡಿಸಿಕೊಳ್ಳಲು ಯಾವುದೇ ನಿಯಮಗಳನ್ನು ಪಾಲಿಸಬಹುದೆಂದು ಸಲಹೆಯನ್ನು ನೀಡಿತ್ತು.

ಆದರೆ, ಇದನ್ನೇ ತಪ್ಪಾಗಿ ಅರ್ಥೈಸಿ ಈ ರೀತಿ ಸುದ್ದಿಯನ್ನು ಹಬ್ಬಿಸಲಾಗಿದೆ. ಹಾಗೆಯೇ ಬಳಕೆದಾರರೇ ಖುದ್ದಾಗಿ ಖಾತ್ರಿಪಡಿಸಲು ಮುಂದಾದರೆ ಅದಕ್ಕೆ ಸಾಮಾಜಿಕ ಜಾಲತಾಣಗಳು ಅವಕಾಶ ನೀಡಬೇಕು ಎಂದು ಸರ್ಕಾರ ಹೇಳಿತ್ತು.

ಕೇಂದ್ರ ಸರ್ಕಾರ ರೂಪಿಸಿರುವ ನೂತನ ನಿಯಮಾವಳಿಗಳಲ್ಲಿ ಬಳಕೆದಾರರ ಖಾತ್ರಿ ಬಗ್ಗೆ ಯಾವುದೇ ಸ್ಪಷ್ಟ ಮಾರ್ಗಸೂಚಿ ಇಲ್ಲದಿದ್ದರೂ ಸಂದೇಶಗಳ ಮೂಲ ಹಾಗೂ ಬಳಕೆದಾರರ ಮಾಹಿತಿ ಬಗ್ಗೆ ಹೆಚ್ಚಿನ ಸ್ಪಷ್ಟತೆ ಹೊಂದಲಾಗಿದೆ.

Fact Check

ಕ್ಲೇಮು

ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಸರ್ಕಾರಿ ಗುರುತಿನ ಚೀಟಿಯನ್ನು 3 ತಿಂಗಳೊಳಗೆ ಪಡೆಯುವುದು ಕಡ್ಡಾಯ

ಪರಿಸಮಾಪ್ತಿ

ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಯಾವುದೇ ಸರ್ಕಾರಿ ಗುರುತಿನ ಚೀಟಿ ಕಡ್ಡಾಯವಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
The Centre on February 25 announced new guidelines in order to regulate social media, online streaming, and digital content platforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X