ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಜರ್ಮನ್‌ನಲ್ಲಿ ಲಸಿಕೆ ವಿರುದ್ಧ ಸಾಮೂಹಿಕ ಚುಂಬನ ಪ್ರತಿಭಟನೆ?

|
Google Oneindia Kannada News

ಬರ್ಲಿನ್, ಡಿಸೆಂಬರ್ 7: ವಿಶ್ವದೆಲ್ಲೆಡೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಹಲವೆಡೆ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಜರ್ಮನ್‌ನಲ್ಲೂ ಕೊರೊನಾ ನಿಯಂತ್ರಣಕ್ಕೆ ಹಲವಾರು ನಿಯಮಗಳನ್ನು ಜಾರಿಗೆ ತರಲಾಗಿದೆ. ಇಲ್ಲಿ ಕೊರೊನಾ ಲಸಿಕೆ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು ಇತ್ತೀಚಿನ ವರದಿ ಪ್ರಕಾರ, ಜರ್ಮನಿಯಲ್ಲಿ ಸುಮಾರು ಮೂರನೇ ಎರಡರಷ್ಟು ಜನಸಂಖ್ಯೆಯು ಕಡ್ಡಾಯ ಕೋವಿಡ್ ವ್ಯಾಕ್ಸಿನೇಷನ್‌ಗೆ ಬೆಂಬಲವನ್ನು ನೀಡಿದೆ. ಇದೇ ಸಮಯದಲ್ಲಿ ನಿರ್ಬಂಧಗಳ ವಿರುದ್ಧ ಪ್ರತಿಭಟನೆಗಳು ಸಹ ಭುಗಿಲೆದ್ದಿವೆ. ಹೀಗಾಗಿ ಜರ್ಮನಿಯಲ್ಲಿ ವ್ಯಾಕ್ಸಿನ್ ವಿರೋಧಿಗಳು ಪ್ರತಿಭಟನೆ ನಡೆಸುತ್ತಿದೆ ಎಂಬ ಹೇಳಿಕೆ ಮೂಲಕ ಹಲವಾರು ಫೋಟೋಗಳು ವೈರಲ್ ಆಗಿವೆ.

ಈ ಬೆಳವಣಿಗೆಯ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ವೈರಲ್ ಫೋಟೋಗಳಲ್ಲಿ ನೂರಾರು ಜನರು ಪರಸ್ಪರ ಚುಂಬಿಸುವ ಮೂಲಕ ಲಸಿಕೆ ವಿರೋಧ ಪ್ರತಿಭಟನೆಯಲ್ಲಿ ಭಾಗಿಯಾದರು ಎಂಬ ಸಂದೇಶದೊಂದಿಗೆ ಹಂಚಿಕೊಳ್ಳಲಾಗಿದೆ. ಜರ್ಮನ್ ಸುದ್ದಿ ವೆಬ್‌ಸೈಟ್ "ಡಾಯ್ಷ್ ವೆಲ್ಲ" (Deutsche Welle) ನ ಲೇಖನದ ಸ್ಪಷ್ಟ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಇದನ್ನು ಸ್ಥಳೀಯ ಆಡಳಿತ ವಿರೋಧಿಸುತ್ತದೆ ಎಂದು ಹೇಳುವ ಸಂದೇಶಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಆದರೆ ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) "ಡಾಯ್ಷ್ ವೆಲ್ಲ" (Deutsche Welle) ಹೆಸರಿನಲ್ಲಿ ವೈರಲ್ ಆಗಿರುವ ಫೋಟೋವನ್ನು ಫಾರ್ಮ್ ಮಾಡಲಾಗಿದೆ ಎಂದು ಕಂಡುಹಿಡಿದಿದೆ. "Deutsche Welle" ಅಥವಾ ಯಾವುದೇ ಇತರ ಮಾಧ್ಯಮವು ಅಂತಹ ವರದಿಯನ್ನು ಪ್ರಕಟಿಸಿಲ್ಲ.

Kiss goodbye to this morphed image of anti-vaccination protest in Germany

ಅಲ್ಲದೆ, ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ಚಿತ್ರವು ಜರ್ಮನಿಯಲ್ಲಿ ವ್ಯಾಕ್ಸಿನೇಷನ್ ವಿರೋಧಿ ಪ್ರತಿಭಟನೆಯನ್ನು ತೋರಿಸುವುದಿಲ್ಲ. ಬದಲಿಗೆ, ಇದು ಸೆಪ್ಟೆಂಬರ್ 1, 2011 ರಂದು ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆದ 'ವರ್ಲ್ಡ್ ಕಿಸ್ ಮ್ಯಾರಥಾನ್ ಫಾರ್ ಎಜುಕೇಶನ್' ಈವೆಂಟ್‌ನಲ್ಲಿ ಜೋಡಿಗಳು ಚುಂಬಿಸುವುದನ್ನು ತೋರಿಸುತ್ತದೆ.

"Deutsche Welle" ಅಥವಾ ಯಾವುದೇ ಇತರ ಯಾವುದೇ ಸುದ್ದಿ ವೆಬ್‌ಸೈಟ್‌ನಿಂದ ವೈರಲ್ ಸಂದೇಶವನ್ನು ದೃಢೀಕರಿಸುವ ಯಾವುದೇ ವರದಿಯೂ ಕಂಡುಬಂದಿಲ್ಲ. ಆದಾಗ್ಯೂ, ಜರ್ಮನ್ನರ ಒಂದು ವಿಭಾಗವು ಕಡ್ಡಾಯ ವ್ಯಾಕ್ಸಿನೇಷನ್‌ಗಳ ಕಲ್ಪನೆಯಿಂದ ಅತೃಪ್ತಿ ಹೊಂದಿದ್ದು ನಿಜ. ದೇಶದಲ್ಲಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ವಿರೋಧಿ ಲಾಬಿಯಿಂದ ಬೆದರಿಕೆಗಳೂ ಬರುತ್ತಿವೆ.

Kiss goodbye to this morphed image of anti-vaccination protest in Germany

ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ಬಳಸಲಾದ ಚಿತ್ರವನ್ನು ಹುಡುಕಿದಾಗ ವೈರಲ್ ಫೋಟೋವನ್ನು ಸೆಪ್ಟೆಂಬರ್ 2, 2011 ರ ಡಚ್ ಸುದ್ದಿ ವರದಿಯಲ್ಲಿ ಕಾಣಬಹುದು. ಇದರ ಶೀರ್ಷಿಕೆಯ ಪ್ರಕಾರ, ಚಿತ್ರವನ್ನು 2011 ರಲ್ಲಿ ಚಿಲಿಯ ಸ್ಯಾಂಟಿಯಾಗೊದ ಚೌಕದಲ್ಲಿ ಕ್ಲಿಕ್ ಮಾಡಲಾಗಿದೆ. ಇಲ್ಲಿ ಚಿತ್ರವನ್ನು ಯುರೋಪಿಯನ್ ಪ್ರೆಸ್‌ಫೋಟೋ ಏಜೆನ್ಸಿ (ಇಪಿಎ) ಗೆ ನೀಡಿ ಛಾಯಾಗ್ರಾಹಕನ ಹೆಸರನ್ನು ಫೆಲಿಪ್ ಟ್ರೂಬಾ ಎಂದು ಗುರುತಿಸಲಾಗಿದೆ.

ಕೀವರ್ಡ್ ಹುಡುಕಾಟವನ್ನು ಬಳಸಿಕೊಂಡು EPA ಯ ಅಧಿಕೃತ ವೆಬ್‌ಸೈಟ್‌ನಲ್ಲಿ ವೈರಲ್ ಫೋಟೋವನ್ನು ಕಂಡುಕೊಳ್ಳಲಾಯಿತು. ಛಾಯಾಚಿತ್ರದೊಂದಿಗೆ ಇಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ವಿನೂತನ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ದೇಶದಲ್ಲಿ ಉತ್ತಮ ಶಿಕ್ಷಣದ ಅವಕಾಶಗಳಿಗೆ ಒತ್ತಾಯಿಸಿದರು. ಜೊತೆಗೆ "Deutsche Welle" ಸಂಪರ್ಕಿಸಿದಾಗ ವೈರಲ್ ಸಂದೇಶ ತಪ್ಪಾಗಿರುವುದು ದೃಢಪಟ್ಟಿದೆ.

ಹೀಗಾಗಿ ವೈರಲ್ ಸಂದೇಶಕ್ಕೂ ಜರ್ಮನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಜರ್ಮನಿಯಲ್ಲಿ ಲಸಿಕೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವುದಕ್ಕೂ ವೈರಲ್ ಫೋಟೋಗಳಿಗೂ ಯಾವುದೇ ಸಂಬಂಧವಿಲ್ಲ. ಗಮನಿಸಬೇಕಾದ ವಿಷಯವೆಂದರೆ ಕಳೆದ ವರ್ಷ ರಷ್ಯಾದಲ್ಲಿ ಕೆಲವು ಜನರು ಕಿಕ್ಕಿರಿದ ಸುರಂಗಮಾರ್ಗಗಳಲ್ಲಿ ತಮ್ಮರಿಗೆ ಚುಂಬಿಸುವ ಮೂಲಕ ಕೋವಿಡ್ ನಿರ್ಬಂಧಗಳ ವಿರುದ್ಧ ಪ್ರತಿಭಟಿಸಿದರು ಎಂದು ವರದಿಯಾಗಿದೆ.

Fact Check

ಕ್ಲೇಮು

ಜರ್ಮನ್‌ನಲ್ಲಿ ಚುಂಬಿಸುವ ಮೂಲಕ ಲಸಿಕೆ ವಿರುದ್ಧ ಪ್ರತಿಭಟನೆ

ಪರಿಸಮಾಪ್ತಿ

ಜರ್ಮನ್‌ನಲ್ಲಿ 'ವರ್ಲ್ಡ್ ಕಿಸ್ ಮ್ಯಾರಥಾನ್ ಫಾರ್ ಎಜುಕೇಶನ್' ಚುಂಬಿಸುವ ಕಾರ್ಯಕ್ರಮದಲ್ಲಿ ಚುಂಬಿಸುವ ದೃಶ್ಯಗಳನ್ನು ಲಸಿಕೆ ವಿರುದ್ಧ ಪ್ರತಿಭಟನೆಯ ಫೋಟೋಗಳೆಂದು ವೈರಲ್

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
German lawmakers have imposed strict restrictions for the unvaccinated and are even mulling mandatory Covid vaccinations in the wake of rising infections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X