• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact check: ರಾಜಸ್ಥಾನ ಸರ್ಕಾರ 8 ಮುಸ್ಲಿಮರನ್ನು ಬರಿಗಾಲಲ್ಲಿ ಕರೆದೊಯ್ದಿದ್ದು ಸತ್ಯವೇ?

|
Google Oneindia Kannada News

ಹೊಸದಿಲ್ಲಿ ಮೇ 11: ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆ ಹದಗೆಟ್ಟಿದ್ದು, ಕಳೆದ ಕೆಲವು ದಿನಗಳಿಂದ ಕರೌಲಿ, ಜೋಧಪುರ ಮತ್ತು ಭಿಲ್ವಾರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಶಾಂತಿ ಕಾಪಾಡುವಂತೆ ಪೊಲೀಸ್-ಆಡಳಿತ ಜನತೆಗೆ ಮನವಿ ಮಾಡುತ್ತಿದೆ. ಇದರೊಂದಿಗೆ ವದಂತಿಗಳನ್ನು ಹಬ್ಬಿಸದಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ. ಈ ನಡುವೆ ಮುಸ್ಲಿಂ ವ್ಯಕ್ತಿಯೊಬ್ಬರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಜಸ್ಥಾನ ಸರ್ಕಾರದ ಮೇಲೆ ಯಾವ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ ಎಂಬುದರ ಕುರಿತು ಟ್ವೀಟ್ ಮಾಡಲಾಗಿದೆ.

Fact check: ಫ್ರಾನ್ಸ್‌ ಬೀದಿಯಲ್ಲಿ ಈದ್ ಪ್ರಾರ್ಥನೆ ಹಿಂದಿನ ಸತ್ಯವೇನು?Fact check: ಫ್ರಾನ್ಸ್‌ ಬೀದಿಯಲ್ಲಿ ಈದ್ ಪ್ರಾರ್ಥನೆ ಹಿಂದಿನ ಸತ್ಯವೇನು?

'ಮುಷ್ತಾಕ್ ಅಹ್ಮದ್' ಎಂಬ ಬಳಕೆದಾರರ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ ನಿನ್ನೆ ರಾತ್ರಿ 12 ಗಂಟೆಗೆ ನನ್ನನ್ನು, ನನ್ನ 3 ಮಂದಿ ಗಂಡು ಮಕ್ಕಳು, 1 ಸೋದರಳಿಯ ಮತ್ತು 3 ಅಳಿಯಂದಿರನ್ನು (ಒಟ್ಟು 8 ಮಂದಿ) ಬರಿಗಾಲಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಕರೆದೊಯ್ದಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆಯಲಾಗಿದೆ. ಎಲ್ಲೆಲ್ಲೂ ಮುಸಲ್ಮಾನರನ್ನು ಬೆಂಬಲಿಸುವ ಇಂತಹ ಮುಖ್ಯಮಂತ್ರಿಯನ್ನು ಅಲ್ಲಾಹನು ಪ್ರತಿ ಪ್ರಾಂತ್ಯದಲ್ಲೂ ನೀಡಲಿ. ಕಾಂಗ್ರೆಸ್ ಗೆ ಜಯವಾಗಲಿ' ಎಂದು ಬರೆಯಲಾಗಿದೆ. ಮೇ 5 ರ ಈ ಟ್ವೀಟ್ ಹೆಚ್ಚು ವೈರಲ್ ಆಗುತ್ತಿದೆ.

ಕರೌಲಿ ಹಿಂಸಾಚಾರದಲ್ಲಿ ಮುಷ್ತಾಕ್ ಹೆಸರು

ಮಾಧ್ಯಮ ವರದಿಗಳ ಪ್ರಕಾರ, ಹಿಂದೂ ಹೊಸ ವರ್ಷದಂದು ಕರೌಲಿಯಲ್ಲಿ ಹಿಂಸಾಚಾರ ನಡೆದಿತ್ತು. ಮತ್ಲೂಬ್ ಅಹಮದ್ ಮತ್ತು ಮುಷ್ತಾಕ್ ಅಹಮದ್ ಹೆಸರು ಅದರಲ್ಲಿ ಕಾಣಿಸಿಕೊಂಡಿತ್ತು. ಇದು ಇದೇ ಮುಷ್ತಾಕ್ ಅವರ ಟ್ವೀಟ್ ಎಂದು ಹೇಳಲಾಗುತ್ತಿದ್ದು, ತನಿಖೆ ನಡೆಸಿದಾಗ ಸತ್ಯ ಬೇರೆಯೇ ಆಗಿತ್ತು.

Fact check: Is it true that the Rajasthan government has taken 8 Muslims in barefoot?

ಸತ್ಯ ಏನು?

ಸ್ಕ್ರೀನ್‌ಶಾಟ್‌ನಲ್ಲಿ ನೀಡಲಾದ ಹೆಸರು, ನಾವು ಅದನ್ನು Twitter ನಲ್ಲಿ ಹುಡುಕಿದಾಗ, ಆ Twitter ಹ್ಯಾಂಡಲ್ ಕಂಡುಬಂದಿಲ್ಲ. ಇದಲ್ಲದೇ ಟ್ವೀಟ್ ನಲ್ಲಿ ಬರೆದಿರುವ ಪದಗಳಿಂದ ಮೂಲ ಟ್ವೀಟ್ ಹುಡುಕಲು ಯತ್ನಿಸಿದಾಗ ಅವರೂ ಪತ್ತೆಯಾಗಿಲ್ಲ. ಇದಾದ ನಂತರ ಟ್ವಿಟರ್‌ನ ಇತರ ಟ್ವೀಟ್‌ಗಳೊಂದಿಗೆ ಅದನ್ನು ಕುಡುಕಲು ಪ್ರಯತ್ನಿಸಲಾಗಿದೆ. ಇದು ಇತರ ಟ್ವೀಟ್‌ಗಳ ವಿನ್ಯಾಸಕ್ಕಿಂತ ಭಿನ್ನವಾಗಿದೆ ಎಂದು ತಿಳಿದುಬಂದಿದೆ. ಹೀಗಿರುವಾಗ ಇದನ್ನು ಫೋಟೋಶಾಪ್ ಮೂಲಕ ಎಡಿಟ್ ಮಾಡಿ ಸಿದ್ಧಪಡಿಸಿರುವುದು ಸ್ಪಷ್ಟವಾಗಿದೆ. ಜೋಧ್‌ಪುರ ಪೊಲೀಸರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಹೀಗಾಗಿ ನೀವು ಅಂತಹ ಯಾವುದೇ ತಪ್ಪುದಾರಿಗೆಳೆಯುವ ಟ್ವೀಟ್ ಅನ್ನು ಕಂಡರೆ, ಅದನ್ನು ಪರಿಶೀಲಿಸಿದ ನಂತರ ಅದನ್ನು ಹಂಚಿಕೊಳ್ಳಲು ಸಲಹೆ ನೀಡಲಾಗುತ್ತದೆ.

Fact Check

ಕ್ಲೇಮು

ರಾಜಸ್ಥಾನ ಸರ್ಕಾರ 8 ಮುಸ್ಲಿಮರನ್ನು ಬರಿಗಾಲಲ್ಲಿ ಕರೆದೊಯ್ದಿದ್ದಾರೆ ಎಂದು ಮುಸ್ಲಿ ಮುಷ್ತಾಕ್ ಅಹ್ಮದ್ ಎಂಬ ಬಳಕೆದಾರರ ಟ್ವೀಟ್ ಮಾಡಿದ್ದಾನೆ.

ಪರಿಸಮಾಪ್ತಿ

ಮುಷ್ತಾಕ್ ಅಹ್ಮದ್ ಎಂಬ ಹೆಸರಿನ ಟ್ವೀಟ್ ಬಳಕೆದಾರನ ಖಾತೆಯೇ ಇಲ್ಲ ಎಂದು ಕಂಡುಹಿಡಿಯಲಾಗಿದ್ದು ಈ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ಸ್ಪಷ್ಟವಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
Muslim man's tweet is going viral on the social network while violence erupting in Karauli. Is it true that the Rajasthan government has taken 8 Muslims in barefoot?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X