ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಸರಕಾರದಿಂದ ಪ್ರತಿಯೊಬ್ಬರಿಗೂ 30,628 ರೂ ಸಿಗುವುದು ನಿಜವಾ?

|
Google Oneindia Kannada News

ಕೊರೊನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜನರನ್ನು ದಿಕ್ಕು ತಪ್ಪಿಸುವ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಪ್ರತಿಯೊಬ್ಬ ನಾಗರಿಕರಿಗೆ 30,638 ರೂ.ಯನ್ನು ಸರ್ಕಾರದಿಂದ ನೀಡಲಾಗುತ್ತಿದೆ ಎನ್ನುವ ಸಂದೇಶವೊಂದು ಜನರನ್ನು ದಾರಿ ತಪ್ಪಿಸುತ್ತಿದೆ. ಈ ಸಂದೇಶವನ್ನು ಹಣಕಾಸು ಸಚಿವಾಲಯದ ಮೂಲಕ ಸರ್ಕಾರ ಹಂಚಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ.

Fact check: Is Govt Providing Rs 30,638 for Every Citizen

ಈ ಸಂದೇಶವನ್ನು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಕ್ ಮೂಲಕ ತನಿಖೆ ಮಾಡಿದ್ದು ಈ ಸಂದೇಶವನ್ನು 'ನಕಲಿ' ಎಂದು ಕಂಡುಹಿಡಿದಿದೆ. ಜೊತೆಗೆ ಅಂತಹ ತಪ್ಪು ಮಾಹಿತಿಯ ಬಗ್ಗೆ ಎಚ್ಚರವಹಿಸಲು ನಾಗರಿಕರಿಗೆ ತಿಳಿಸಿದೆ. ಪಿಐಬಿ ಫ್ಯಾಕ್ಟ್ ಚೆಕ್ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ 'ಕೂ'ನಲ್ಲಿ ಯಾವುದೇ ಆರ್ಥಿಕ ಸಹಾಯವನ್ನು ಹಣಕಾಸು ಸಚಿವಾಲಯ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

Fact check: Is Govt Providing Rs 30,638 for Every Citizen

ಇದರ ಬೆನ್ನಲ್ಲೇ ಮತ್ತೊಂದು ತಪ್ಪು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ಸಂದೇಶದ ಪ್ರಕಾರ ದೇಶದಲ್ಲಿನ ನಿರುದ್ಯೋಗಿ ಯುವಕರಿಗೆ 3500ರೂ ಮಾಸಿಕ ಭತ್ಯೆಯನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ ಎನ್ನಲಾಗಿದೆ. ಪಿಐಬಿ ಫ್ಯಾಕ್ಟ್ ಚೆಕ್ ಈ ಸಂದೇಶವನ್ನು ನಕಲಿ ಎಂದು ಘೋಷಿಸಿದೆ. ಜೊತೆಗೆ ಇಂತಹ ನಕಲಿ ಸಂದೇಶಗಳನ್ನು ನಂಬದಿರಲು ವಿನಂತಿಸಿದೆ.

Fact Check

ಕ್ಲೇಮು

ಸರ್ಕಾರದಿಂದ ಪ್ರತಿಯೊಬ್ಬರಿಗೂ 30,638 ರೂ. ಮತ್ತು ನಿರುದ್ಯೋಗಿ ಯುವಕರಿಗೆ 3500ರೂ ಮಾಸಿಕ ಭತ್ಯೆ ನೀಡಲಾಗುತ್ತದೆ.

ಪರಿಸಮಾಪ್ತಿ

ಸರ್ಕಾರದಿಂದ ಪ್ರತಿಯೊಬ್ಬರಿಗೂ 30,638 ರೂ. ಮತ್ತು ನಿರುದ್ಯೋಗಿ ಯುವಕರಿಗೆ 3500ರೂ ಮಾಸಿಕ ಭತ್ಯೆ ನೀಡಲಾಗುತ್ತದೆ ಎನ್ನುವ ಸಂದೇಶ ನಕಲಿ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಕಂಡುಹಿಡಿದಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: There is a message on the social network that Rs 30,638 is being paid by the government for every citizen to alleviate the financial crisis. What is the truth behind this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X