ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಮುಂದಿನ ತಿಂಗಳೇ 143 ವಸ್ತುಗಳ ಮೇಲಿನ ಜಿಎಸ್‌ಟಿ ಏರಿಕೆ ಆಗುತ್ತಾ?

|
Google Oneindia Kannada News

ನವದೆಹಲಿ, ಏಪ್ರಿಲ್ 26: ದೇಶದಲ್ಲಿ ಯಾವುದೇ ನಿರ್ದಿಷ್ಟ ವಸ್ತುಗಳು ಅಥವಾ ದರಗಳ ಪುನರ್ ರಚನೆ ಕುರಿತು ಜಿಎಸ್‌ಟಿ ಪರಿಷ್ಕರಣೆ ಬಗ್ಗೆ ರಾಜ್ಯಗಳಿಂದ ಯಾವುದೇ ರೀತಿ ಪ್ರತಿಕ್ರಿಯೆಗಳನ್ನು ಕೋರಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಇದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳು ಯಾವುದೇ ಆಧಾರವಿಲ್ಲದ ಸಂಪೂರ್ಣ ಊಹಾಪೋಹ ಎಂದು ತಿಳಿಸಿದೆ.

"143 ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಹೆಚ್ಚಿಸುವ ಸಲಹೆಯ ಕುರಿತು ರಾಜ್ಯಗಳಿಂದ ಪ್ರತಿಕ್ರಿಯೆ ಕೇಳಲಾಗಿದೆ ಎಂದು ಮಾಧ್ಯಮದ ಒಂದು ವಿಭಾಗ ವರದಿ ಮಾಡಿದೆ" ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

Fact check: ವಿದ್ಯಾರ್ಥಿಗಳಿಗೆ ಮೋದಿ ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್?Fact check: ವಿದ್ಯಾರ್ಥಿಗಳಿಗೆ ಮೋದಿ ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್?

"ಭಾರತದಲ್ಲಿ ಒಟ್ಟು 143 ವಸ್ತುಗಳ ಪೈಕಿ ಶೇಕಡಾ 92 ರಷ್ಟನ್ನು ಶೇಕಡಾ 18 ರ ತೆರಿಗೆ ಸ್ಲ್ಯಾಬ್‌ನಿಂದ ಮೇಲಿನ ಶೇಕಡಾ 28 ಸ್ಲ್ಯಾಬ್‌ಗೆ ಬದಲಾಯಿಸಲು ಪ್ರಸ್ತಾಪಿಸಲಾಗಿದೆ" ಎಂದು ಕೆಲವು ಮಾಧ್ಯಮಗಳ ವರದಿ ತಿಳಿಸಿದ್ದವು.

Fact Check: Is govt planning to Hike GST Rates on 143 items next month?

ಯಾವೆಲ್ಲ ವಸ್ತುಗಳ ಮೇಲಿನೆ ಜಿಎಸ್‌ಟಿ ಏರಿಕೆ ಬಗ್ಗೆ ಸುದ್ದಿ:

ದೇಶದಲ್ಲಿ ಒಟ್ಟು 143 ಸರಕುಗಳ ಮೇಲಿನ ಜಿಎಸ್‌ಟಿ ಅನ್ನು ಹೆಚ್ಚಿಸುವ ಬಗ್ಗೆ ವರದಿಗಳು ಪ್ರಸಾರವಾಗಿವೆ. ಈ ಸರಕುಗಳ ಪಟ್ಟಿಯಲ್ಲಿ ಪಾಪಡ್, ಬೆಲ್ಲ, ಪವರ್ ಬ್ಯಾಂಕ್‌, ಕೈಗಡಿಯಾರ, ಸೂಟ್‌ಕೇಸ್‌, ಕೈಚೀಲಗಳು, ಸುಗಂಧ ದ್ರವ್ಯಗಳು ಅಥವಾ ಡಿಯೋಡರೆಂಟ್‌ಗಳು, ಕಲರ್ ಟಿವಿ ಸೆಟ್‌ಗಳು (32 ಇಂಚುಗಳಿಗಿಂತ ಕಡಿಮೆ) ಸೇರಿವೆ. ಇದರ ಜೊತೆಗೆ ಚಾಕೊಲೇಟ್‌ಗಳು, ಚೂಯಿಂಗ್ ಗಮ್‌ಗಳು, ವಾಲ್‌ನಟ್ಸ್, ಕಸ್ಟರ್ಡ್ ಪೌಡರ್, ಆಲ್ಕೊಹಾಲ್ ಯುಕ್ತವಲ್ಲದ ಪಾನೀಯಗಳು, ಸೆರಾಮಿಕ್ ಸಿಂಕ್‌ಗಳು, ವಾಶ್ ಬೇಸಿನ್‌ಗಳು ಸಹ ಪಟ್ಟಿಯಲ್ಲಿವೆ. ಅಲ್ಲದೇ ಕನ್ನಡಕಗಳು, ನ್ನಗಾಗಲ್ಸ್‌ಗಳ ಚೌಕಟ್ಟುಗಳು ಮತ್ತು ಚರ್ಮದ ಉಡುಪುಗಳು ಮತ್ತು ಬಟ್ಟೆ ಪರಿಕರಗಳ ತೆರಿಗೆ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು.

ಜಿಎಸ್‌ಟಿ ಏರಿಕೆ ಬಗ್ಗೆ ಹಣಕಾಸು ಸಚಿವಾಲಯದ ಸ್ಪಷ್ಟನೆ:

"ಕೆಲವು ವರದಿಗಳು ಸರಕುಗಳ ಸಂಖ್ಯೆ ಮತ್ತು ವಿವರಣೆಯನ್ನು ಸಹ ಹೊಂದಿವೆ. ಯಾವುದೇ ನಿರ್ದಿಷ್ಟ ವಸ್ತುಗಳಿಗೆ ಅಥವಾ ದರಗಳನ್ನು ಪುನರ್ರಚಿಸಲು ನಿರ್ದಿಷ್ಟ ಪ್ರಸ್ತಾವನೆಗಳಿಗೆ ಜಿಎಸ್‌ಟಿ ದರಗಳ ಕುರಿತು ರಾಜ್ಯಗಳಿಂದ ಯಾವುದೇ ಪ್ರತಿಕ್ರಿಯೆಯನ್ನು ಕೇಳಲಾಗಿಲ್ಲ. ಅದಕ್ಕೆ ಸಂಬಂಧಿಸಿದ ವರದಿಗಳು ಯಾವುದೇ ಆಧಾರವಿಲ್ಲದೆ ಸಂಪೂರ್ಣವಾಗಿ ಊಹಾಪೋಹಗಳಾಗಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸ್ಪಷ್ಟಪಡಿಸಿದೆ.

Fact Check: Is govt planning to Hike GST Rates on 143 items next month?

ಕೌನ್ಸಿಲ್‌ ಪರಿಗಣನೆಗೆ ವರದಿ ಇನ್ನೂ ಸಲ್ಲಿಕೆಯಾಗಿಲ್ಲ:

ಜಿಎಸ್‌ಟಿ ಕೌನ್ಸಿಲ್ 45ನೇ ಸಭೆಯಲ್ಲಿ ದರಗಳ ತರ್ಕಬದ್ಧತೆಯನ್ನು ಪರಿಶೀಲಿಸಲು ಸಚಿವರ ತಂಡವನ್ನು ರಚಿಸಲಾಗಿತ್ತು. ಈ ಸಚಿವರ ತಂಡದಲ್ಲಿ ಚರ್ಚೆಗಳು ನಡೆಯುತ್ತಿವೆ. 2021ರ ಸೆಪ್ಟೆಂಬರ್‌ನಲ್ಲಿ ಇದನ್ನು ಸ್ಥಾಪಿಸಿದ ಕೂಡಲೇ ಸಚಿವರ ತಂಡದ ಉಲ್ಲೇಖಗಳ ನಿಯಮಗಳ (ToRs) ಕುರಿತು ಸಾಮಾನ್ಯವಾಗಿ ರಾಜ್ಯಗಳ ಅಭಿಪ್ರಾಯಗಳನ್ನು ಕೇಳಲಾಯಿತು. ಗುಂಪಿನ ವರದಿಯನ್ನು ಕೌನ್ಸಿಲ್‌ ಪರಿಗಣನೆಗೆ ಇನ್ನೂ ಸಲ್ಲಿಸಬೇಕಾಗಿದೆ.

Fact Check

ಕ್ಲೇಮು

143 ವಸ್ತುಗಳ ದರಗಳನ್ನು ಹೆಚ್ಚಿಸಲು GST ಕೌನ್ಸಿಲ್ ರಾಜ್ಯಗಳಿಂದ ಅಭಿಪ್ರಾಯ ಕೋರಿದೆ

ಪರಿಸಮಾಪ್ತಿ

ಈ ತೀರ್ಮಾನಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳು ಯಾವುದೇ ಆಧಾರವಿಲ್ಲದೆ ಸಂಪೂರ್ಣವಾಗಿ ಊಹಾಪೋಹಗಳಾಗಿವೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Is central govt planning to Hike GST Rates on 143 items next month. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X