• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact-Check: ಆನ್ ಲೈನ್ ನುಸುಳುಕೋರರ ಪತ್ತೆಗೆ ವಿಶೇಷ ಸಾಧನ

|
Google Oneindia Kannada News

ನವದೆಹಲಿ, ಮೇ 19: ಜಗತ್ತಿನಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಬಹುತೇಕ ವಲಯಗಳಲ್ಲಿ ಆನ್ ಲೈನ್ ಸಭೆ-ಸಮಾರಂಭಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಆಂತರಿಕ ಸಭೆಗಳಲ್ಲಿ ಕಳ್ಳ ಮಾರ್ಗದಿಂದ ಹಾಜರಾಗುವವರ ಪತ್ತೆಗೆ ವಿಶೇಷ ಗುರುತು ಪತ್ತೆ ಯಂತ್ರವನ್ನು ಸಂಶೋಧಿಸಲಾಗಿದೆ.

ಪಂಜಾಬಿನ ಭಾರತೀಯ ತಾಂತ್ರಿಕ ಸಂಸ್ಥೆ ರೋಪರ್ ಮತ್ತು ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯವು ಸುಳ್ಳು ಗುರುತು ಪತ್ತೆ(FakeBuster) ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಒಂದು ಕಂಪನಿಯ ಆಂತರಿಕ ಸಭೆಗಳಲ್ಲಿ ಮೋಸದಿಂದ ಹಾಜರಾದವರನ್ನು ಈ ಯಂತ್ರದಿಂದ ಗುರುತಿಸಲು ಸಾಧ್ಯವಾಗುತ್ತದೆ. ಈ ಯಂತ್ರದ ಮೂಲಕ ವ್ಯಕ್ತಿಯ ಚಹರೆಯನ್ನು ಬದಲಾಯಿಸಿ ಅಪಹಾಸ್ಯ ಮಾಡುವುದನ್ನು ನಿಯಂತ್ರಿಸಲು ಮತ್ತು ಗುರುತು ಹಿಡಿಯಲು ಸಾಧ್ಯವಾಗುತ್ತದೆ.

Fact Check: ಸೌಮ್ಯ ಕೋವಿಡ್ ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್ ಅಗತ್ಯವಿಲ್ಲವೇ? Fact Check: ಸೌಮ್ಯ ಕೋವಿಡ್ ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್ ಅಗತ್ಯವಿಲ್ಲವೇ?

ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ಬಹುತೇಕ ಕಂಪನಿಗಳು ಆನ್ ಲೈನ್ ಮೂಲಕವೇ ಸಭೆ, ಸಮಾರಂಭ ಮತ್ತು ಚರ್ಚೆಗಳನ್ನು ನಡೆಸುತ್ತಿದ್ದಾರೆ. ಇದನ್ನು ದುರುಪಯೋಗ ಮಾಡಿಕೊಳ್ಳಲು ಕೆಲವರು ಸಂಚು ರೂಪಿಸುತ್ತಿದ್ದಾರೆ. ಕಳ್ಳದಾರಿಯಲ್ಲಿ ಇಂಥ ಸಭೆಗಳಿಗೆ ಹಾಜರಾಗಿ ಅಲ್ಲಿರುವವರ ವಿವರವನ್ನು ತಮ್ಮ ಕುಶಲತೆಯಿಂದ ಬದಲಾಯಿಸಿ ಅಪಹಾಸ್ಯಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಒಂದೊಂದು ಬಾರಿ ಈ ಮಾಹಿತಿಯನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸುವ ಅಪಾಯವೂ ಹೆಚ್ಚಾಗಿದೆ.

ಸುಳ್ಳು ಗುರುತು ಪತ್ತೆ ಸಾಮರ್ಥ್ಯ:

ಒಂದು ವೇಳೆ ನೀವು ನಡೆಸುತ್ತಿರುವ ಆನ್ ಲೈನ್ ಸಭೆಗಳಲ್ಲಿ ನಿಮ್ಮ ಕಂಪನಿಗೆ ಸೇರಿದ ಸಹೋದ್ಯೋಗ ಭಾವಚಿತ್ರವನ್ನು ಬಳಸಿಕೊಂಡು ಬೇರೊಬ್ಬ ವ್ಯಕ್ತಿಯು ಹಾಜರಾಗಿದ್ದರೆ ಅದನ್ನು ಪತ್ತೆ ಮಾಡುವುದಕ್ಕೆ ಇಂಥ ಸುಳ್ಳು ಗುರುತು ಪತ್ತೆ ಯಂತ್ರ ಸಹಕಾರಿ ಆಗಿರುತ್ತದೆ. ಮಾಧ್ಯಮದ ವಿಷಯಗಳನ್ನು ತಮ್ಮ ಕುಶಲತೆ ಜೊತೆ ಅತ್ಯಾಧುನಿಕ ಬೌದ್ಧಿಕ ತಂತ್ರಗಳ ಮೂಲಕ ಬದಲಾಯಿಸಿಕೊಳ್ಳುವವರ ಸಂಖ್ಯೆ ನಾಟಕೀಯವಾಗಿ ಹೆಚ್ಚಾಗಿದೆ. ಈ ಬದಲಾವಣೆ ಸತ್ಯಕ್ಕೆ ಹತ್ತಿರದಲ್ಲಿದ್ದು, ನಕಲಿ ಎಂದು ಗುರುತಿಸಲಾದಷ್ಟು ಸಾಮ್ಯತೆಯನ್ನು ಹೊಂದಿರುತ್ತದೆ ಎಂದು ಡಾ. ಅಭಿನವ್ ಧಲ್ಲಾ ತಿಳಿಸಿದ್ದಾರೆ.

ಸುಳ್ಳು ಗುರುತು ಪತ್ತೆ ಯಂತ್ರವು ಶೇ.90ರಷ್ಟು ನಿಖರತೆಯನ್ನು ಹೊಂದಿರುತ್ತದೆ ಎಂದು ಈ ಯಂತ್ರ ಅಭಿವೃದ್ಧಿಪಡಿಸಿದ ನಾಲ್ವರು ಸದಸ್ಯರ ತಂಡದಲ್ಲೇ ಒಬ್ಬರಾದ ಡಾ. ಅಭಿನವ್ ಧಲ್ಲಾ ಹೇಳಿದ್ದಾರೆ. ಈ ತಂಡದಲ್ಲಿ ಸಹಾಯಕ ಪ್ರೊ.ರಾಮನಾಥನ್ ಸುಬ್ರಮಣಿಯನ್ ಮತ್ತು ಇಬ್ಬರು ವಿದ್ಯಾರ್ಥಿಗಳಾದ ವಿನೀತ್ ಮೆಹ್ತಾ ಮತ್ತು ಪರೂಲ್ ಗುಪ್ತಾ ಸೇರಿದ್ದಾರೆ.

ಸುಳ್ಳು ಸುದ್ದಿ ಹರಡಿಸುವ ಹುನ್ನಾರ:

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವಿಕೆ ಮತ್ತು ವಿಷಯಗಳ ಬದಲಾವಣೆಗೆ ಕೆಲವು ಹುನ್ನಾರ ನಡೆಸುತ್ತಿದ್ದಾರೆ. ವಿಡಿಯೋ ಕಾಲಿಂಗ್ ಸಂದರ್ಭದಲ್ಲಿ ಮುಖಚರ್ಯೆಯನ್ನೇ ಬದಲಾಯಿಸುವ ಮಟ್ಟಕ್ಕೆ ನಕಲು ಮಾಡುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಆನ್ ಲೈನ್ ಪರೀಕ್ಷೆಗಳು ಮತ್ತು ಆನ್ ಲೈನ್ ಮುಖೇನ ನಡೆಯುವ ಉದ್ಯೋಗ ಸಂದರ್ಶನಗಳಲ್ಲಿ ಬೇರೆಯವರ ಮುಖಚರ್ಯೆಯನ್ನೇ ಹೋಲುವಂತೆ ನಕಲು ಮಾಡಲಾಗುತ್ತಿದೆ. ಈ ತಂತ್ರಜ್ಞಾನವನ್ನು ಪತ್ತೆ ಮಾಡುವುದಕ್ಕಾಗಿ ಸುಳ್ಳು ಗುರುತು ಪತ್ತೆ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ.

ಜೂಮ್ ಮತ್ತು ಸ್ಕೈಪ್ ಅಪ್ಲಿಕೇಶನ್‌ಗಳೊಂದಿಗೆ ಪ್ರತ್ಯೇಕವಾಗಿ ಸಾಫ್ಟ್ ವೇರ್ ಅನ್ನು ಪರೀಕ್ಷಿಸಲಾಗಿದೆ. ಆಳವಾದ ನಕಲಿತನವನ್ನು ಗುರುತು ಹಿಡಿಯುವ ಯಂತ್ರವು ಆನ್ ಲೈನ್ ಮತ್ತು ಆಫ್ ಲೈನ್ ವ್ಯವಸ್ಥೆಯಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ. ಈ ಸಾಧನವನ್ನು ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್‌ಟಾಪ್‌ಗಳೊಂದಿಗೆ ಮಾತ್ರ ಕೆಲಸ ಮಾಡಲಿದೆ. ಇದನ್ನು ಮತ್ತಷ್ಟು ಸುಲಭ ಮತ್ತು ಸರಳವಾಗಿ ಮೊಬೈಲ್ ಫೋನುಗಳನ್ನೂ ಕೂಡ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಸಹಾಯಕ ಪ್ರೊ. ಸುಬ್ರಮಣಿಯನ್ ತಿಳಿಸಿದ್ದಾರೆ. ಅಲ್ಲದೇ ತಮ್ಮ ತಂಡವು ನಕಲಿ ಧ್ವನಿಯನ್ನೂ ಸಹ ಪತ್ತೆ ಮಾಡುವ ಬಗ್ಗೆಯೂ ಲಕ್ಷ್ಯ ವಹಿಸಿದೆ ಎಂದು ಹೇಳಿದರು.

ಸಾಫ್ಟ್ ವೇರ್ ವಲಯದಲ್ಲೇ ಮೊದಲ ಸಾಧನ:

ಸುಳ್ಳು ಗುರುತು ಪತ್ತೆ ಯಂತ್ರವು ಸಾಫ್ಟ್ ವೇರ್ ವಲಯದಲ್ಲಿ ಲೈವ್ ವಿಡಿಯೋ ಸಭೆಗಳಲ್ಲಿ ವಂಚಕರ ನುಸುಳುವಿಕೆಯನ್ನು ಕಂಡು ಹಿಡಿಯಲು ಅಭಿವೃದ್ಧಿಪಡಿಸಿದ ಮೊದಲ ಸಾಧನವಾಗಿದೆ ಎಂದು ತಂಡ ಹೇಳಿಕೊಂಡಿದೆ. ಈ ಸಾಧನವನ್ನು ಈಗಾಗಲೇ ಪರೀಕ್ಷೆಗೊಳಪಡಿಸಲಾಗಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

Fact Check

ಕ್ಲೇಮು

ಯಾರಿಗೂ ತಿಳಿಯದ ರೀತಿಯಲ್ಲಿ ಸುಳ್ಳು ಪತ್ತೆದಾರರ ಹಾಜರಿ

ಪರಿಸಮಾಪ್ತಿ

ಈ ರೀತಿ ಸುಳ್ಳು ಪತ್ತೆದಾರಿಕೆಯನ್ನು ಗುರುತಿಸಲಾಗುತ್ತಿದೆ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
The Indian Institute of Technology In Punjab's Ropar Develops Unique Detector FakeBuster To Detect Imposters Attending A Virtual Conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X