ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಸರ್ಕಾರ 3 ತಿಂಗಳವರೆಗೆ ಉಚಿತ ಇಂಟರ್ನೆಟ್ ನೀಡುತ್ತಿದೆ?

|
Google Oneindia Kannada News

ನವದೆಹಲಿ ಮೇ 06: ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಸಂದೇಶಗಳು ಹರಿದಾಡುತ್ತಲೇ ಇರುತ್ತವೆ. ಅವುಗಳಲ್ಲಿ ಜನರಿಗೆ ನಿಜವಾಗಿಯೂ ತಲುಪಬಹುದಾದಂತಹ ಮಾಹಿತಿಯಾಗಿದ್ದರೆ ಇನ್ನೂ ಕೆಲವು ವೈಯಕ್ತಿ ಲಾಭಕ್ಕಾಗಿ ಹಂಚಿಕೊಂಡ ಸಂದೇಶಗಳಾಗಿರುತ್ತವೆ. ಇದರಿಂದ ಜನ ಮೋಸ ಹೋಗುವುದೇ ಹೆಚ್ಚು.

ಇಂತಹ ಸಂದೇಶಗಳ ಬಗ್ಗೆ ಜನ ಜಾಗೃತರಾಗಿರಬೇಕು. ಇತ್ತೀಚೆಗೆ ಇಂತಹದ್ದೇ ಒಂದು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇನೆಂದರೆ- ಸರ್ಕಾರ 100 ಮಿಲಿಯನ್ ಬಳಕೆದಾರರಿಗೆ ಮೂರು ತಿಂಗಳವರೆಗೆ ಉಚಿತ ಇಂಟರ್ನೆಟ್ ನೀಡುವುದಾಗಿ ವಾಟ್ಸಾಪ್‌ನಲ್ಲಿ ಸಂದೇಶವನ್ನು ಹಂಚಿಕೊಳ್ಳಳಾಗಿದೆ.

Fact check: ಮೋದಿ ಜರ್ಮನ್ ಭೇಟಿ ವೇಳೆ ಚಾನ್ಸೆಲರ್ ಕಚೇರಿಯಲ್ಲಿ ನೆಹರೂ ಫೋಟೋ? Fact check: ಮೋದಿ ಜರ್ಮನ್ ಭೇಟಿ ವೇಳೆ ಚಾನ್ಸೆಲರ್ ಕಚೇರಿಯಲ್ಲಿ ನೆಹರೂ ಫೋಟೋ?

ಈ ಸಂದೇಶವನ್ನು ಲಿಂಕ್‌ನೊಂದಿಗೆ ಹರಿಬಿಡಲಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಲು ತಿಳಿಸಲಾಗಿದೆ. ಆದರೆ ಇದು ಸುಳ್ಳು ಸಂದೇಶವಾಗಿದೆ. ನೀವು ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ರಮುಖ ಡೇಟಾವನ್ನು ಕದಿಯುವ ಸಾಧ್ಯತೆಗಳು ಇವೆ. ಮೂರು ತಿಂಗಳ ಉಚಿತ ಇಂಟರ್ನೆಟ್ ಪ್ರವೇಶವನ್ನು ಪಡೆಯಲು ನಿಮ್ಮ ಮೊಬೈಲ್ ನೆಟ್‌ವರ್ಕ್ ಆಪರೇಟರ್ (ಏರ್‌ಟೆಲ್, ಜಿಯೋ ಅಥವಾ ವೊಡಾಫೋನ್ ಐಡಿಯಾ) ಅನ್ನು ಆಯ್ಕೆ ಮಾಡಲು ವೆಬ್‌ಸೈಟ್ ನಿಮ್ಮನ್ನು ಕೇಳುತ್ತದೆ.

Fact Check: Government Is Offering 100 Million Users Free Internet for Three Months

ನಿಮ್ಮ ನೆಟ್‌ವರ್ಕ್ ಆಪರೇಟರ್ ಅನ್ನು ನೀವು ಆಯ್ಕೆ ಮಾಡಿದ ನಂತರ, ನಿಮ್ಮ ಮೊಬೈಲ್ ಸಂಖ್ಯೆ, ನಿಮ್ಮ ರಾಜ್ಯವನ್ನು ನಮೂದಿಸಲು ಮತ್ತು ಬಯಸಿದ ಇಂಟರ್ನೆಟ್ ಯೋಜನೆಯನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಆ ವಿವರಗಳನ್ನು ನಮೂದಿಸಿದ ನಂತರ, ಕೆಲವು ರೀತಿಯ ಸಾಫ್ಟ್‌ವೇರ್‌ಗೆ ಡೌನ್‌ಲೋಡ್ ಲಿಂಕ್ ಅನ್ನು ನಿಮಗೆ ನೀಡಲಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿದರೆ ಮೂರು ತಿಂಗಳ ಉಚಿತ ಇಂಟರ್ನೆಟ್ ಪ್ರವೇಶವನ್ನು ಪಡೆಯುವುದಿಲ್ಲ.

ಟ್ವಿಟರ್‌ನಲ್ಲಿನ ಈ ನಕಲಿ ಸಂದೇಶದ ಬಗ್ಗೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

ಉಚಿತ ಇಂಟರ್ನೆಟ್ ಪ್ರವೇಶವನ್ನು ಪಡೆಯಲು ನೀವು ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ನಿಮ್ಮನ್ನು ಮೋಸದ ವೆಬ್‌ಸೈಟ್‌ಗೆ ಮರು ನಿರ್ದೇಶಿಸಲಾಗುತ್ತದೆ. ನಂತರ ನಿಮ್ಮ ಕೆಲವು ಪ್ರಮುಖ ವಿವರಗಳನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ನೀವು ಬಲೆಗೆ ಬಿದ್ದರೆ, ನೀವು ಬಹುಶಃ ನಿಮ್ಮ ಡೇಟಾವನ್ನು ಕಳೆದುಕೊಳ್ಳುತ್ತೀರಿ. ಜಿಯೋ ಅಥವಾ ಏರ್‌ಟೆಲ್ ತನ್ನ ಬಳಕೆದಾರರಿಗೆ ಏನನ್ನಾದರೂ ನೀಡಬೇಕಾದರೆ, ಅದನ್ನು ಪರಿಶೀಲಿಸಿದ ಪ್ಲಾಟ್‌ಫಾರ್ಮ್‌ನಿಂದ ಪ್ರಕಟಿಸುತ್ತದೆ ಎಂಬುದನ್ನು ಗಮನಿಸಬೇಕು.

Fact Check: Government Is Offering 100 Million Users Free Internet for Three Months

ಅಂತಹ ಯಾವುದೇ ಪ್ರಕಟಣೆಗಳನ್ನು ನೀವು ನೋಡದ ಹೊರತು ಇಂತಹ ಸಂದೇಶವನ್ನು ನಂಬಬೇಡಿ. ನೀವು WhatsApp ನಲ್ಲಿ ಅಂತಹ ಸಂದೇಶವನ್ನು ಸ್ವೀಕರಿಸಿದರೆ, ದಯವಿಟ್ಟು ಸಂದೇಶದಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ ಸಂದೇಶವನ್ನು ಬೇರೆಯವರಿಗೆ ಫಾರ್ವರ್ಡ್ ಮಾಡಬೇಡಿ. ಅದೊಂದು ಹಗರಣ ಎಂದು ಇನ್ಫಾರ್ಮೇಶನ್ ಬ್ಯೂರೋ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

Fact Check

ಕ್ಲೇಮು

ಸರ್ಕಾರ 100 ಮಿಲಿಯನ್ ಬಳಕೆದಾರರಿಗೆ ಮೂರು ತಿಂಗಳವರೆಗೆ ಉಚಿತ ಇಂಟರ್ನೆಟ್ ನೀಡುವುದಾಗಿ ವಾಟ್ಸಾಪ್‌ನಲ್ಲಿ ಸಂದೇಶವನ್ನು ಹಂಚಿಕೊಳ್ಳಳಾಗಿದೆ.

ಪರಿಸಮಾಪ್ತಿ

ಟ್ವಿಟರ್‌ನಲ್ಲಿನ ಈ ನಕಲಿ ಸಂದೇಶದ ಬಗ್ಗೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact check: message has been shared on WhatsApp that the government is offering 100 million users free internet for three months. What is the truth behind this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X