ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ‘ಭಾರತ ಮಾತೆ’ಯಾಗಿದ್ದ ವಿದ್ಯಾರ್ಥಿಗೆ ನಮಾಜ್ ಮಾಡಲು ಒತ್ತಾಯ?

|
Google Oneindia Kannada News

ಲಕ್ನೋ ಆಗಸ್ಟ್ 16: ಸಮಾಜದಲ್ಲಿ ಕೋಮು ಸೌಹಾರ್ದತೆ ಕದಡುವ ಯತ್ನದಲ್ಲಿ ಶಾಲಾ ಮಕ್ಕಳು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ವಿಡಿಯೋವನ್ನು ತಪ್ಪು ಸಂದೇಶದೊಂದಿಗೆ ಪ್ರಸಾರ ಮಾಡಲಾಗುತ್ತಿದೆ. ಲಕ್ನೋ ಪೊಲೀಸರು ಈ ವಿಡಿಯೋ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಲಕ್ನೋದ ಶಿಶು ಭಾರತೀಯ ವಿದ್ಯಾಲಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಶಾಲೆಯಲ್ಲಿ ನಾಟಕವೊಂದರಲ್ಲಿ 'ಭಾರತ ಮಾತೆ' ಆಗಿದ್ದ ಬಾಲಕಿಯ ಕಿರೀಟವನ್ನು ತೆಗೆದುಹಾಕಲಾಗಿದೆ. ನಂತರ ನಮಾಜ್ ಮಾಡಲು ಕೇಳಲಾಗಿದೆ ಎಂದು ತೋರಿಸಲಾಗುತ್ತಿದೆ.

Fact check: Forced perform Namaz to student who waring Bharat Mata costume

ವಿಷಯ ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು ಈ ವಿಡಿಯೋವನ್ನು ಪರಿಶೀಲಿಸಿದ್ದು, ಶಾಲೆಯಲ್ಲಿ ಮಕ್ಕಳು ನಾಟಕ ಪ್ರದರ್ಶಿಸಿದ್ದು, ಧರ್ಮದ ಹೆಸರಿನಲ್ಲಿ ಜಗಳ ಮಾಡಬೇಡಿ. ಪರಸ್ಪರ ಸೌಹಾರ್ದತೆ ಕಾಪಾಡಿ ಎಂಬ ಸಂದೇಶ ನೀಡುತ್ತಿರುವುದು ಕಂಡು ಬಂದಿದೆ. ಪೊಲೀಸರ ಪ್ರಕಾರ, ಗೊಂದಲ ಮತ್ತು ವೈಷಮ್ಯ ಸೃಷ್ಟಿಸಲು ವಿಡಿಯೊದ ಒಂದು ಭಾಗವನ್ನು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ. ಅಪೂರ್ಣ ವಿಡಿಯೋವನ್ನು ಟ್ವೀಟ್ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

Recommended Video

ವಿದೇಶಿ ಲೀಗ್ ನಲ್ಲಿ ಭಾಗಿಯಾಗ್ತಿರೋ ಧೋನಿಗೆ BCCI ಕೊಡ್ತು ಬಿಗ್ ಶಾಕ್! | OneIndia Kannada

"ಕೋಮು ಸೌಹಾರ್ದತೆಗಾಗಿ ಚಿಕ್ಕ ಮಕ್ಕಳು ಪ್ರಸ್ತುತಪಡಿಸಿದ ನಾಟಕದ ಸಂಪೂರ್ಣ ವಿಡಿಯೊವನ್ನು ಕೆಲವು ಸಮಾಜ ವಿರೋಧಿಗಳು ತಪ್ಪಾಗಿ ಪ್ರಚಾರ ಮಾಡಿದ್ದಾರೆ ಮತ್ತು ಕೋಮು ದ್ವೇಷವನ್ನು ಹರಡುವ ಕ್ರಿಮಿನಲ್ ಕೃತ್ಯವನ್ನು ಮಾಡಲಾಗಿದೆ. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಲಕ್ನೋ ಪೊಲೀಸರು ಟ್ವೀಟ್ ಮಾಡಿದ್ದಾರೆ.

Fact Check

ಕ್ಲೇಮು

‘ಭಾರತ ಮಾತೆ’ಯಾಗಿದ್ದ ವಿದ್ಯಾರ್ಥಿಗೆ ನಮಾಜ್ ಮಾಡಲು ಒತ್ತಾಯ

ಪರಿಸಮಾಪ್ತಿ

‘ಭಾರತ ಮಾತೆ’ಯಾಗಿದ್ದ ವಿದ್ಯಾರ್ಥಿಗೆ ನಮಾಜ್ ಮಾಡಲು ಒತ್ತಾಯಿಸಲಾಗಿದೆ ಎಂದು ವಿಡಿಯೋ ವೈರಲ್ ಮಾಡಲಾಗಿದೆ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
In an attempt to disrupt communal harmony in society, a video of school children celebrating Independence Day is being circulated with a wrong message.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X