ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಚೀನಾ ವಿಮಾನ ಪತನಗೊಂಡ ವಿಡಿಯೋ ಹಿಂದಿರುವ ಸತ್ಯ

|
Google Oneindia Kannada News

ಚೀನಾದಲ್ಲಿ 133 ಜನ ಪ್ರಯಾಣಿಸುತ್ತಿದ್ದ ವಿಮಾನವೊಂದು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಸೋಮವಾರ (ಮಾರ್ಚ್ 21) ಪತನಗೊಂಡಿದೆ. ಇದು ಸುಮಾರು ಆರು ವರ್ಷ ಹಳೆ ವಿಮಾನವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಯ ಬಳಿಕ ಪರ್ವತದ ಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡುತ್ತಿವೆ. ಈ ದುರಂತದ ವಿಡಿಯೋಗಳು ಎನ್ನಲಾದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ವೈರಲ್ ವಿಡಿಯೋವೊಂದು ತಪ್ಪಾಗಿದೆ ಎಂದು ನ್ಯೂಸ್ಚೆಕರ್ ಕಂಡುಹಿಡಿದಿದೆ.

ಚೀನಾ ಈಸ್ಟರ್ನ್​ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್​ 737-800 ವಿಮಾನ MU5735 ವಿಮಾನ ಟೆಂಗ್ ಕೌಂಟಿಯ ವುಝೌ ನಗರದ ಬಳಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸೇರಿದಂತೆ ಒಟ್ಟು 132 ಜನ ಸಾವನ್ನಪ್ಪಿದ್ದಾರೆ. ವಿಮಾನ ಪತನದ ಬಳಿಕ ಗುಡ್ಡ ಪ್ರದೇಶದಿಂದ ಭಾರೀ ಹೊಗೆ ಏಳುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಆದರೆ ಈ ವಿಡಿಯೋ ಸೋಮವಾರ (ಮಾರ್ಚ್ 21) ಪತನಗೊಂಡ ದುರಂತದಿಂದಾಗಿ ಹಬ್ಬಿದ ಹೊಗೆ ಅಲ್ಲ ಎಂದು ಹೇಳಲಾಗುತ್ತಿದೆ.

@thelnsiderpaper ಎಂಬ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ವಿಮಾನ ಪತನದ ನಂತರ ಪರ್ವತದಲ್ಲಿ ಬೆಂಕಿಯ ವಿಡಿಯೋವೆಂದು ಹೇಳಿಕೊಂಡು ವಿಡಿಯೋ ಶೇರ್ ಮಾಡಿದೆ. 'ಚೀನಾದ #MU735 ವಿಮಾನ ಅಪಘಾತದ ವರದಿಯ ದೃಶ್ಯಗಳು' ಎಂದು ಬರೆಯಲಾಗಿದೆ. ಈ ವಿಡಿಯೋವನ್ನು ಟ್ವೀಟರ್‌ನಲ್ಲಿ 10,000 ಕ್ಕೂ ಹೆಚ್ಚು ಶೇರ್‌ ಮಾಡಲಾಗಿದೆ ಮತ್ತು ಸುಮಾರು 5,000 ಲೈಕ್‌ಗಳನ್ನು ಹೊಂದಿದೆ. ದಕ್ಷಿಣ ಚೀನಾದಲ್ಲಿ ನಡೆದ ವಿಮಾನ ಅಪಘಾತದ ನಂತರದ ಪರಿಣಾಮ ಎಂದು ಹೇಳಿಕೊಂಡು ಹಲವಾರು ಇತರ ಬಳಕೆದಾರರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಜೊತೆಗೆ ಎಐ ಜಜೀರಾ, ನ್ಯೂಸ್ 18, ಹಿಂದೂಸ್ತಾನ್ ಟೈಮ್ಸ್, ಎನ್‌ಡಿಟಿವಿ ಮತ್ತು ರಿಪಬ್ಲಿಕ್ ಇತರ ಹಲವಾರು ಪ್ರಮುಖ ಭಾರತೀಯ ಮಾಧ್ಯಮ ಸಂಸ್ಥೆಗಳು ಸಹ ವೀಡಿಯೊವನ್ನು ಹಂಚಿಕೊಂಡಿದ್ದು ಇದನ್ನು ಕ್ರ್ಯಾಶ್ ಸೈಟ್ ಎಂದು ಗುರುತಿಸಿವೆ.

Fact check: Flight crash in China- What is the truth behind the video?

ವಾಸ್ತವ ಪರಿಶೀಲನೆ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನ್ಯೂಸ್ಚೆಕರ್ @Thelnsiderpaper ಪೋಸ್ಟ್ ಮಾಡಿದ ವಿಡಿಯೋವನ್ನು ವಿಶ್ಲೇಷಿಸಿದೆ. ಅದು ಸಾಮಾನ್ಯ ಕಾಡ್ಗಿಚ್ಚಿನಂತೆ ಕಾಣುತ್ತದೆ. ಇಲ್ಲಿ ವಿಮಾನ ಅಪಘಾತದ ಯಾವುದೇ ಸೂಚನೆಗಳನ್ನು ಗಮನಿಸಲಾಗಿಲ್ಲ. ನಾವು ಕಾಮೆಂಟ್‌ಗಳನ್ನು ಮತ್ತಷ್ಟು ವಿಶ್ಲೇಷಿಸಿದ್ದೇವೆ. ಬೆಂಕಿಯು ಘಟನೆಗೆ ಸಂಬಂಧಿಸಿಲ್ಲ ಮತ್ತು ವೀಡಿಯೊ ಚೀನಾದ ಫ್ಯೂಜಿಯಾನ್‌ನಿಂದ ಎಂದು ಹೇಳಿಕೊಂಡ ಬಳಕೆದಾರರಲ್ಲಿ ಒಬ್ಬರಿಂದ ಕಾಮೆಂಟ್ ಅನ್ನು ಕಂಡುಕೊಂಡಿದ್ದೇವೆ. ನಾವು ವೀಡಿಯೊವನ್ನು ಹೊಂದಿರುವ ಇತರ ಪೋಸ್ಟ್‌ಗಳಲ್ಲಿ ಹೆಚ್ಚಿನ ಕಾಮೆಂಟ್‌ಗಳನ್ನು ನೋಡಿದ್ದೇವೆ. ಚೀನೀ ಭಾಷೆಯಲ್ಲಿ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಕಂಡುಕೊಂಡಿದ್ದೇವೆ. ನ್ಯೂಸ್‌ಚೆಕರ್ ವೀಡಿಯೊದಲ್ಲಿ ಚೀನೀ ಪಠ್ಯವನ್ನು ಅನುವಾದಿಸುತ್ತಿದ್ದು ವೈರಲ್ ಮಾಡಿರುವ ಸಂದೇಶವನ್ನು ತಪ್ಪು ಎಂದು ಹೇಳಿದೆ.

Fact Check

ಕ್ಲೇಮು

ಚೀನಾ ವಿಮಾನ ಪತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.

ಪರಿಸಮಾಪ್ತಿ

ಚೀನಾ ವಿಮಾನ ಪತನದ ವಿಡಿಯೋ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಚೀನಾ ವಿಮಾನಕ್ಕೂ ವೈರಲ್ ವಿಡಿಯೋಕ್ಕು ಸಂಬಂಧವಿಲ್ಲ ಎಂದು ನ್ಯೂಸ್ಚೆಕರ್ ಕಂಡುಹಿಡಿದಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A number of videos, called videos of China's plane crash, have gone viral on the social network. But News checker has discovered that a viral video is wrong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X