ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: 2000 ರೂಪಾಯಿ ನೋಟುಗಳನ್ನು ಆರ್‌ಬಿಐ ನಿಷೇಧಿಸಿದೆ

|
Google Oneindia Kannada News

ನವದೆಹಲಿ, ಆಗಸ್ಟ್‌ 26: ಎರಡು ಸಾವಿರ ರೂಪಾಯಿ ನೋಟುಗಳ ಜಾರಿಗೆ ಬಂದ ಬಳಿಕ ಅನೇಕ ಬಾರಿ ಅಂತರ್ಜಾಲದಲ್ಲಿ ಹರಿದಾಡಿರುವ ವಿಷಯ ಅಂದರೆ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನ ನಿಷೇಧಿಸಲಾಗಿದೆ ಎಂಬ ಸುದ್ದಿ. ಇಂದು ಮತ್ತೊಮ್ಮೆ ಇದೇ ವಿಷಯ ಎಲ್ಲೆಡೆ ಹರಿದಾಡಿದೆ.

ಹಾಗಿದ್ದರೆ ಎರಡು ಸಾವಿರ ನೋಟುಗಳನ್ನು ನಿಷೇಧಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಈಗಾಗಲೇ ಹಲವಾರು ಪ್ರಶ್ನೆಗಳು ಕೇಳಿ ಬಂದಿವೆ. ಕಳೆದ ವರ್ಷ ಕೂಡ ಇಂತಹದೇ ಪ್ರಶ್ನೆಗಳು ಕೇಳಿಬಂದಿದೆ. ಈ ವಿಷಯದ ಬಗ್ಗೆ ಒನ್‌ಇಂಡಿಯಾ ಹಲವಾರು ಅಧಿಕಾರಿಗಳನ್ನು ಸಂಪರ್ಕಿಸಿದಾಗ, 2,000 ರೂಪಾಯಿ ನೋಟು ನಿಷೇಧಿಸಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

Fact Check: ಭಾರತದಲ್ಲಿ ಚೀನಾ ನಿರ್ಮಿತ ಪ್ಲಾಸ್ಟಿಕ್ ಮೊಟ್ಟೆಗಳ ಮಾರಾಟFact Check: ಭಾರತದಲ್ಲಿ ಚೀನಾ ನಿರ್ಮಿತ ಪ್ಲಾಸ್ಟಿಕ್ ಮೊಟ್ಟೆಗಳ ಮಾರಾಟ

ಹಾಗಿದ್ದರೆ 2,000 ರೂಪಾಯಿ ನೋಟು ನಿರ್ಷೇಧವಾಗಿದೆ ಎಂಬ ಸುದ್ದಿ ಎಲ್ಲಿಂದ ಬಂತು ಎಂಬುದು ಆಶ್ಚರ್ಯ ಮೂಡಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿಯನ್ನು ಅನುಸರಿಸಿ ಈ ಸುಳ್ಳು ಸುದ್ದಿ ಹೊರಬಂದಿದೆ. ಆರ್‌ಬಿಐನ ವಾರ್ಷಿಕ ವರದಿಯು 2019-2020ರಲ್ಲಿ ಒಂದೇ ಒಂದು 2 ಸಾವಿರ ರೂ. ನೋಟುಗಳನ್ನು ಮುದ್ರಿಸಲಾಗಿಲ್ಲ ಎಂದು ಹೇಳಿದೆ.

Fake: Rs 2000 Notes Been Banned By RBI

ಚಲಾವಣೆಯಲ್ಲಿರುವ 2 ಸಾವಿರ ರೂಪಾಯಿ ಕರೆನ್ಸಿ ನೋಟುಗಳ ಸಂಖ್ಯೆ 2018 ರ ಮಾರ್ಚ್ ಅಂತ್ಯದ ವೇಳೆಗೆ 33,632 ಲಕ್ಷಗಳಷ್ಟಿದ್ದು, ಅದು 2019 ರ ಮಾರ್ಚ್ ಅಂತ್ಯದ ವೇಳೆಗೆ 32,910 ಲಕ್ಷ ನೋಟುಗಳಿಗೆ ಇಳಿಕೆಯಾಗಿದೆ ಮತ್ತು 2020ರ ಮಾರ್ಚ್ ಅಂತ್ಯದ ವೇಳೆಗೆ 27,398 ಲಕ್ಷ ನೋಟ್ ಗಳಿಗೆ ತಗ್ಗಿದೆ ಎಂದು ಆರ್‌ಬಿಐ ವಾರ್ಷಿಕ ವರದಿ ವಿವರಿಸಿದೆ.

2020ರ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ನೋಟುಗಳ ಪ್ರಮಾಣ ಶೇಕಡಾ 2.4 ರಷ್ಟಿದ್ದು, 2019 ರ ಮಾರ್ಚ್ ಅಂತ್ಯದ ವೇಳೆಗೆ ಇದು ಶೇ. 3 ಮತ್ತು 2018 ರ ಮಾರ್ಚ್ ಅಂತ್ಯದ ವೇಳೆಗೆ ಶೇ. 3.3 ರಿಂದ ಇಳಿಕೆಯಾಗಿದೆ ಎಂದು ಆರ್‌ಬಿ ಹೇಳಿದೆ.

ಎರಡು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯ ಪ್ರಮಾಣದಲ್ಲೂ ಕೂಡ ಇಳಿಕೆ ಕಂಡಿದ್ದು, ಮಾರ್ಚ್ 2020ರಲ್ಲಿ 22.6ರಷ್ಟಿದ್ದು, ಮಾರ್ಚ್‌ 2019ರಲ್ಲಿ ಶೇ. 31.2 ಮತ್ತು 2018 ಮಾರ್ಚ್‌ನಲ್ಲಿ ಶೇ. 37.3ರಷ್ಟಿತ್ತು.

ಮತ್ತೊಂದೆಡೆ 2018 ರಿಂದ ಚಲಾವಣೆಗೆ ಬಂದ 500 ಹಾಗೂ 200 ರೂಪಾಯಿ ನೋಟ್ ಗಳ ಪ್ರಮಾಣ ಮತ್ತು ಚಲಾವಣೆ ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಏರಿದೆ ಎಂದು ವರದಿ ತಿಳಿಸಿದೆ.

Fact Check

ಕ್ಲೇಮು

2000 ರೂಪಾಯಿ ನೋಟುಗಳನ್ನು ಆರ್‌ಬಿಐ ನಿಷೇಧಿಸಿದೆ

ಪರಿಸಮಾಪ್ತಿ

2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಆರ್‌ಬಿಐ ನಿಷೇಧಿಸಿದೆ ಎಂಬುದು ಶುದ್ಧ ಸುಳ್ಳು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Rs 2000 Notes Been Banned By RBI , But the claim is false.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X