ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ನೈನಿತಾಲ್‌ನ ನಕಲಿ ಫೋಟೋ ಹಂಚಿಕೆ

|
Google Oneindia Kannada News

ನವದೆಹಲಿ, ಮೇ 23: ದೇಶದಲ್ಲಿ ಹಲವು ದೇವಾಲಯಗಳು ಮತ್ತು ಮಸೀದಿಗಳ ವಿವಾದ ಮುಂದುವರಿದಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ದ್ವೇಷ ಹರಡುತ್ತಿದ್ದಾರೆ. ಇದೀಗ ಉತ್ತರಾಖಂಡದ ಗಿರಿಧಾಮ ನೈನಿತಾಲ್ ಬಗ್ಗೆ ಫೇಸ್ ಬುಕ್-ಟ್ವಿಟ್ಟರ್ ನಲ್ಲಿ ಸುಳ್ಳು ಹೇಳಿಕೆ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ಕೋಮುಗಲಭೆಯ ಪ್ರಕರಣ ನಡೆದಿದೆ.

Fact check: Fake photos of Uttarakhand Nainital on social media

ಸಾಮಾಜಿಕ ಮಾಧ್ಯಮದಲ್ಲಿ ಕೊಲಾಜ್ ಅನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಫೋಟೋದ ಮೇಲೆ "ನೈನಿತಾಲ್ 2010" ಎಂದು ಬರೆಯಲಾಗಿದೆ. ಈ ಫೋಟೋದಲ್ಲಿ ಕೆಲವರು ಖಾಲಿ ರಸ್ತೆಯಲ್ಲಿ ನಡೆಯುತ್ತಿರುವುದು ಕಂಡುಬಂದರೆ, ಎರಡನೇ ಫೋಟೋದಲ್ಲಿ "ನೈನಿತಾಲ್ 2022" ಎಂದು ಬರೆಯಲಾಗಿದೆ. ಈ ಫೋಟೋದಲ್ಲಿ ನೂರಾರು ಮುಸ್ಲಿಮರು ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದಾರೆ. ಈ ಫೋಟೋವನ್ನು ಸಾಕಷ್ಟು ಮಂದಿ ಶೇರ್ ಮಾಡಿದ್ದಾರೆ. ಇದರೊಂದಿಗೆ 'ಹಮ್ ದೋ ಹಮಾರೇ ದೋ' ಎಂಬ ಶೀರ್ಷಿಕೆಯನ್ನು ಬರೆಯಲಾಗಿದ್ದು, ಹಿಂದೂ ಕುಟುಂಬಗಳು ಬ್ರೈನ್ ವಾಶ್ ಮಾಡಲಾಗಿದೆ. ಇದು ಕುಟುಂಬ ವ್ಯವಸ್ಥೆಯನ್ನು ದುರ್ಬಲಗೊಳಿಸುವಂತಹ ಸಂದೇಶವಾಗಿದ್ದು, ದಿನದಿಂದ ದಿನಕ್ಕೆ ನಾವು ಅವರಿಂದ ಸೋಲುತ್ತಿದ್ದೇವೆ ಎನ್ನಲಾಗಿದೆ. ಈ ಶೀರ್ಷಿಕೆಯು ಸಂಪೂರ್ಣವಾಗಿ ಮುಸ್ಲಿಂ ಸಮುದಾಯದ ಕಡೆಗೆ ತೋರಿಸುತ್ತಿದೆ. ಮುಸ್ಲೀಂ ಸಮುದಾಯದ ಜನ ಹೆಚ್ಚಾಗುತ್ತಿದ್ದಾರೆ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸೂಚಿಸಲಾಗಿದೆ.

Fact check: Fake photos of Uttarakhand Nainital on social media

ಜನರು ಕೂಡ ಈ ಫೋಟೋವನ್ನು ಸತ್ಯಾಸತ್ಯತೆ ತಿಳಿಯದೆ ವೇಗವಾಗಿ ಶೇರ್ ಮಾಡುತ್ತಿದ್ದಾರೆ. ಇಂಡಿಯಾ ಟುಡೇ ವರದಿ ಪ್ರಕಾರ, ಈ ಫೋಟೋ ನೈನಿತಾಲ್ ಅಲ್ಲ, ಬಾಂಗ್ಲಾದೇಶದ್ದು. ಖಾಲಿ ರಸ್ತೆಯ ಫೋಟೋವನ್ನು 'ಇಂಡಿಯನ್ ಹಾಲಿಡೇಸ್' ಹೆಸರಿನ ವೆಬ್‌ಸೈಟ್ ತೆಗೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಅದರಲ್ಲಿ 'ಅಲ್ಕಾ' ಮತ್ತು 'ಡೊಮಿನೊ' ಎಂಬ ಬೋರ್ಡ್‌ಗಳು ಗೋಚರಿಸಿದ್ದು, ಮೊದಲ ಚಿತ್ರ ನೈನಿತಾಲ್‌ನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಎರಡನೇ ಫೋಟೋವನ್ನು ತನಿಖೆ ಮಾಡಿದಾಗ, ಅದು ಜನವರಿ 24, 2018 ರದ್ದು ಎಂದು ಕಂಡುಬಂದಿದೆ. ಆ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಒಂದು ಕಾರ್ಯಕ್ರಮವಿತ್ತು, ಅದರಲ್ಲಿ ಈ ಜನ ಸೇರಿದ್ದರು. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫೋಟೋಗಳನ್ನು ಶೇರ್ ಮಾಡುವ ಮೂಲಕ ದ್ವೇಷ ಹರಡುತ್ತಿರುವುದು ಸ್ಪಷ್ಟವಾಗಿದೆ.

Fact Check

ಕ್ಲೇಮು

ನೈನಿತಾಲ್‌ ಫೋಟೋವೆಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆ.

ಪರಿಸಮಾಪ್ತಿ

ನೈನಿತಾಲ್‌ನ ನಕಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ದ್ವೇಷವನ್ನು ಹರಡಲಾಗುತ್ತಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Hate being spread by sharing fake photos of Uttarakhand Nainital on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X