ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಭಾರತದಲ್ಲಿ ಚೀನಾ ನಿರ್ಮಿತ ಪ್ಲಾಸ್ಟಿಕ್ ಮೊಟ್ಟೆಗಳ ಮಾರಾಟ

|
Google Oneindia Kannada News

ನವದೆಹಲಿ, ಆಗಸ್ಟ್ 26: ಪ್ಲಾಸ್ಟಿಕ್ ಅಕ್ಕಿ ಮತ್ತು ಪ್ಲಾಸ್ಟಿಕ್ ಮೊಟ್ಟೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಒಂದೆರಡು ವರ್ಷದ ಹಿಂದೆ ತಲ್ಲಣ ಸೃಷ್ಟಿಸಿದ್ದವು. ಚೀನಾದಲ್ಲಿ ತಯಾರಾಗುವ ಈ ಪ್ಲಾಸ್ಟಿಕ್ ಅಕ್ಕಿ ಮತ್ತು ಮೊಟ್ಟೆಗಳನ್ನು ಭಾರತದ ಮಾರುಕಟ್ಟೆಯಲ್ಲಿ ಗುಣಮಟ್ಟದ ಉತ್ಪನ್ನಗಳ ಜತೆ ಸೇರಿಸಿ ಮಾರಲಾಗುತ್ತಿದೆ ಎಂಬ ವದಂತಿ ಜೋರಾಗಿತ್ತು. ಪ್ಲಾಸ್ಟಿಕ್ ಅಕ್ಕಿ ಮತ್ತು ಮೊಟ್ಟೆಯ ಗುಣಗಳು ಅದನ್ನು ಕಂಡುಹಿಡಿಯುವ ಬಗೆಗಳ ಕುರಿತು ಅನೇಕ ಚರ್ಚೆಗಳು ನಡೆದಿದ್ದವು.

Recommended Video

ಬಿಡುಗಡೆಯಾಯ್ತು RCB ಹೊಸ ಜೆರ್ಸಿ | Oneindia Kannada

ಈಗ ಭಾರತದಲ್ಲಿ ಪ್ಲಾಸ್ಟಿಕ್ ಮೊಟ್ಟೆಗಳು ಮಾರಾಟವಾಗುತ್ತಿವೆ ಎಂದು ಪ್ರತಿಪಾದಿಸುವ ಹಳೆಯ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿವೆ.

Fact Check: ಇದು ಬೆಂಗಳೂರು ಹಿಂಸಾಚಾರದ ವಿಡಿಯೋ ಅಲ್ಲFact Check: ಇದು ಬೆಂಗಳೂರು ಹಿಂಸಾಚಾರದ ವಿಡಿಯೋ ಅಲ್ಲ

ಚೀನಾದಲ್ಲಿ ಉತ್ಪಾದನೆ ಮಾಡುವ ಪ್ಲಾಸ್ಟಿಕ್ ಮೊಟ್ಟೆಗಳನ್ನು ಭಾರತಕ್ಕೆ ರವಾನಿಸಿ ಮಾರಾಟ ಮಾಡಲಾಗುತ್ತಿದೆ ಎಂದು ವಿಡಿಯೋದಲ್ಲಿ ಹೇಳಲಾಗುತ್ತಿದೆ. ಚೀನಾದೊಂದಿಗೆ ಭಾರತದ ಸಂಘರ್ಷ ತೀವ್ರವಾಗಿರುವ ಸಂದರ್ಭದಲ್ಲಿ ಈ 'ಪ್ಲಾಸ್ಟಿಕ್ ಮೊಟ್ಟೆ'ಯ ವಿಡಿಯೋ ಮತ್ತೆ ಚಾಲ್ತಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಈ ಹಳೆಯ ವಿಡಿಯೋಗಳು ವೈರಲ್ ಆಗಿವೆ. ಮುಂದೆ ಓದಿ...

ಎಫ್‌ಎಸ್‌ಎಸ್‌ಎಐ ದಾಖಲೆ

ಎಫ್‌ಎಸ್‌ಎಸ್‌ಎಐ ದಾಖಲೆ

ಈ ಹೇಳಿಕೆಯನ್ನು ಪ್ರತಿಪಾದಿಸುವ ವಿಡಿಯೋದ ಕುರಿತು 'ಒನ್ ಇಂಡಿಯಾ' ಕೂಲಕಂಷವಾಗಿ ಪರಿಶೀಲಿಸಿದಾಗ ಎಫ್‌ಎಸ್‌ಎಸ್‌ಎಐ ಬಿಡುಗಡೆ ಮಾಡಿರುವ ವಿವರವಾದ ದಾಖಲೆಯೊಂದು ಸಿಕ್ಕಿದೆ. 2018ರಲ್ಲಿ ಈ ದಾಖಲೆಯನ್ನು ಬಿಡುಗಡೆ ಮಾಡಿರುವ ಎಫ್‌ಎಸ್‌ಎಸ್‌ಎಐ (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಪ್ಲಾಸ್ಟಿಕ್ ಮೊಟ್ಟೆಗಳ ಹೇಳಿಕೆ ಶುದ್ಧ ಸುಳ್ಳು ಎಂದು ತಿಳಿಸಿತ್ತು.

ಸುಕ್ಕಾಗಿ ಅಂಟಿಕೊಂಡಿರುತ್ತವೆ

ಸುಕ್ಕಾಗಿ ಅಂಟಿಕೊಂಡಿರುತ್ತವೆ

ಮೊಟ್ಟೆಗಳಲ್ಲಿನ ನೀರಿನ ಅಂಶ ಕಡಿಮೆಯಾದ ಸಂದರ್ಭದಲ್ಲಿ ಅವು ಈ ಸ್ವರೂಪಕ್ಕೆ ಬರುತ್ತವೆ. ಮೊಟ್ಟೆಯ ಬಿಳಿಭಾಗ ಮತ್ತು ಹಳದಿ ಲೋಳೆಯ ಭಾಗಗಳು ಸುಕ್ಕಾಗಿ ಹೋಗಿರುತ್ತವೆ. ನೀರಿನಂಶದ ಕೊರತೆಯಿಂದಾಗಿ ಈ ಎರಡೂ ಭಾಗಗಳು ಸೇರಿಕೊಂಡಿರುತ್ತವೆ. ಇಂತಹ ಮೊಟ್ಟೆಗಳು ಒಡೆದು ಹೋದರೂ ಅದರ ಲೋಳೆಯ ಹಾಗೂ ಬಿಳಿ ಭಾಗಗಳು ಪ್ರತ್ಯೇಕವಾಗುವುದಿಲ್ಲ. ಈ ಕಾರಣದಿಂದಾಗಿ ಇವು ಪ್ಲಾಸ್ಟಿಕ್ ಮೊಟ್ಟೆ ಅಥವಾ ನಕಲಿ ಮೊಟ್ಟೆಗಳಂತೆ ಕಾಣಿಸುತ್ತವೆ.

Fake: ದೀಪಿಕಾ, ರಣವೀರ್ ಜೊತೆ ಇರುವುದು ದಾವೂದ್ ಇಬ್ರಾಹಿಂ ಅಲ್ಲFake: ದೀಪಿಕಾ, ರಣವೀರ್ ಜೊತೆ ಇರುವುದು ದಾವೂದ್ ಇಬ್ರಾಹಿಂ ಅಲ್ಲ

ತೇವಾಂಶ ನಷ್ಟದ ಪರಿಣಾಮ

ತೇವಾಂಶ ನಷ್ಟದ ಪರಿಣಾಮ

ತೇವಾಂಶದ ನಷ್ಟದಿಂದಾಗಿ ಮೊಟ್ಟೆ ಒಣಗಿ ಹೋಗುತ್ತವೆ. ಈ ಕಾರಣದಿಂದ ನೋಡಲು ಕಾಗದದಂತೆ ರಚನೆ ಮತ್ತು ವಿನ್ಯಾಸ ಹೊಂದುತ್ತದೆ. ಥಟ್ಟನೆ ನೋಡಿದಾಗ ಅದು ಪ್ಲಾಸ್ಟಿಕ್‌ನಂತೆಯೇ ಕಾಣಿಸುತ್ತದೆ. ಅಂಟಿಕೊಂಡ ಪದಾರ್ಥಗಳನ್ನು ಬಿಡಿಸುವಾಗ ಮೊಟ್ಟೆಯಲ್ಲಿರುವ ಲೋಳೆ ಅಂಶ ಇಲ್ಲದಿರುವುದರಿಂದ ನಕಲಿ ಮೊಟ್ಟೆ ಎಂಬ ಭಾವ ಮೂಡುತ್ತದೆ. ಇದನ್ನೇ ಎಫ್‌ಎಸ್‌ಎಸ್‌ಎಐ ಕೂಡ ಹೇಳಿದೆ.

ನಕಲಿ ಮೊಟ್ಟೆಯೇ ದುಬಾರಿ

ನಕಲಿ ಮೊಟ್ಟೆಯೇ ದುಬಾರಿ

ಇಡೀ ಮೊಟ್ಟೆಗಳನ್ನು ತಯಾರಿಸಲು ಯಾವುದೇ ತಂತ್ರಜ್ಞಾನ ಅಥವಾ ರಾಸಾಯನಿಕ ಲಭ್ಯವಿಲ್ಲ. ಒಂದು ವೇಳೆ ಲಭ್ಯವಿರುವ ಯಾವುದೇ ತಂತ್ರಜ್ಞಾನ ಮತ್ತು ರಾಸಾಯನಿಕ ಅಂಶಗಳನ್ನು ಬಳಸಿಕೊಂಡು ನೈಜ ಮೊಟ್ಟೆಗಳಂತೆ ಕಾಣುವ ಪ್ಲಾಸ್ಟಿಕ್ ಮೊಟ್ಟೆಗಳನ್ನು ತಯಾರಿಸಿದರೂ ಅದು ನಮಗೆ ಮಾರುಕಟ್ಟೆಯಲ್ಲಿ ಸಹಜವಾಗಿ ಲಭ್ಯವಾಗುವ ಮೊಟ್ಟೆಗಳಿಗಿಂತಲೂ ದುಬಾರಿ. ಅಂದರೆ ನೈಜಮೊಟ್ಟೆಗಳು ಇನ್ನೂ ಕಡಿಮೆ ಬೆಲೆಯಲ್ಲಿಯೇ ಸಿಗುತ್ತವೆ. ಹೀಗಿರುವಾಗ ನಕಲಿ ಮೊಟ್ಟೆಗಳನ್ನು ತಯಾರಿಸುವ ಸಾಹಸಕ್ಕೆ ಯಾರು ಮುಂದಾಗುತ್ತಾರೆ? ಇದರಿಂದಾಗಿ ಪ್ಲಾಸ್ಟಿಕ್ ಮೊಟ್ಟೆ ಅಥವಾ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಯ ಹೇಳಿಕೆಗಳು ವಾಸ್ತವಕ್ಕೆ ದೂರ ಎಂದು ಎಫ್‌ಎಸ್ಎಸ್‌ಎಐ ಹೇಳಿದೆ.

Fact check; ಕೇಂದ್ರ ಗ್ರಾಮೀಣಾಭಿವೃದ್ಧಿ ಕೆಲಸದ ಸುತ್ತೋಲೆ ನಕಲಿFact check; ಕೇಂದ್ರ ಗ್ರಾಮೀಣಾಭಿವೃದ್ಧಿ ಕೆಲಸದ ಸುತ್ತೋಲೆ ನಕಲಿ

Fact Check

ಕ್ಲೇಮು

ಚೀನಾದಲ್ಲಿ ತಯಾರಾದ ಪ್ಲಾಸ್ಟಿಕ್ ಮೊಟ್ಟೆಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ.

ಪರಿಸಮಾಪ್ತಿ

ಇದು ಹಳೆಯ ವಿಡಿಯೋ ಮತ್ತು ನಕಲಿ ಮೊಟ್ಟೆಗಳ ಸುದ್ದಿಯೇ ಶುದ್ಧ ಸುಳ್ಳು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A old video claiming of China made plastic eggs being sold in India goes viral again. But the claim is false.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X