ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಅಂಬಾಲಾದಲ್ಲಿ ರಫೇಲ್ ಜೆಟ್ ಅಪಘಾತದ ಸುದ್ದಿ ಸುಳ್ಳು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: ಇತ್ತೀಚೆಗಷ್ಟೇ ಫ್ರಾನ್ಸ್‌ನಿಂದ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ರಫೇಲ್ ಜೆಟ್‌ಗಳಲ್ಲಿ ಒಂದು ವಿಮಾನ ಅಂಬಾಲಾ ವಾಯುನೆಲೆ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಗುರುತಿಸಿಕೊಂಡಿರುವ ಇರ್ಮಾಕ್ ದೋಯಾ ಟ್ವೀಟ್ ಒಂದರ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಐಎಎಫ್ ಕೂಡ ಈ ಸುದ್ದಿಯನ್ನು ದೃಢಪಡಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಭಾರತೀಯ ವಾಯುಪಡೆಯದ್ದು ಎನ್ನಲಾದ ಖಾತೆಯನ್ನು ಇರ್ಮಾಕ್ ದೋಯಾ ಹಂಚಿಕೊಂಡಿದ್ದಾರೆ. 'ಬಹಳ ಆಘಾತಕಾರಿ ಸುದ್ದಿ. ಅಭ್ಯಾಸ ನಡೆಸುವ ವೇಳೆ ರಫೇಲ್ ವಿಮಾನವು ತಾಂತ್ರಿಕ ದೋಷದಿಂದ ಅಂಬಾಲಾ ವಾಯು ಪಡೆ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ. ಅದರ ಪೈಲಟ್ ಹುತಾತ್ಮರಾಗಿದ್ದಾರೆ' ಎಂದು ಬರೆದಿದ್ದಾರೆ.

Fact Check: ಹೊಸ ಸ್ಟುಡಿಯೋ ಕಟ್ಟಲು ಕಂಗನಾಗೆ ಅಂಬಾನಿಯಿಂದ ಧನ ಸಹಾಯ Fact Check: ಹೊಸ ಸ್ಟುಡಿಯೋ ಕಟ್ಟಲು ಕಂಗನಾಗೆ ಅಂಬಾನಿಯಿಂದ ಧನ ಸಹಾಯ

ಆದರೆ ವಾಸ್ತವವಾಗಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಅಂಬಾಲಾ ವಾಯುಪಡೆ ನೆಲೆಯಲ್ಲಿ ರಫೇಲ್ ಜೆಟ್‌ಗಳು ಸುರಕ್ಷಿತವಾಗಿವೆ. ಈ ಸುದ್ದಿಯ ಮೂಲವನ್ನು ಹುಡುಕಿದಾಗ ಮುಖ್ಯ ವಾಹಿನಿಯ ಯಾವ ಮಾಧ್ಯಮದಲ್ಲಿಯೂ ಅಂತಹ ವರದಿ ಪ್ರಕಟವಾಗಿಲ್ಲ.

Fake News: Tweet Claim That Rafale Jet Crashed At Ambala Airforce Station Is Fake

ಸುಳ್ಳು ಸುದ್ದಿ ಪ್ರಕಟಿಸಿದಾತ ಹಂಚಿಕೊಂಡಿರುವ ಸ್ಕ್ರೀನ್ ಶಾಟ್‌ನಲ್ಲಿ ಐಎಎಫ್‌ನ ಅಧಿಕೃತ ಟ್ವಿಟ್ಟರ್ ಖಾತೆಯನ್ನೇ ಹೋಲುವಂತಹ ಬಳಕೆದಾರನ ಹೆಸರು ಕಾಣಿಸುತ್ತದೆ. ಆದರೆ ಆ ರೀತಿಯ ಟ್ವೀಟ್‌ಅನ್ನು ಐಎಎಫ್ ಪ್ರಕಟಿಸಿಯೇ ಇಲ್ಲ.

ಸೆ. 4ರಂದು ಬೆಳಿಗ್ಗೆ 11.33ಕ್ಕೆ ಐಎಎಫ್ ರಫೇಲ್ ಅಪಘಾತದ ಸುದ್ದಿ ಹಂಚಿಕೊಂಡಿದೆ ಎಂದು ಟ್ವೀಟ್ ಹೇಳುತ್ತದೆ. ಆದರೆ ಅದರ ಅಧಿಕೃತ ಖಾತೆಯಲ್ಲಿ ಯಾವುದೇ ಅಂತಹ ಘಟನೆಯ ವರದಿ ಇಲ್ಲ. ಅಂದು ಎರಡು ಟ್ವೀಟ್ ಮಾಡಿರುವ ಐಎಎಫ್, ಮರುದಿನವೂ ಅಂತಹ ಯಾವ ಘಟನೆಯ ಸಂಗತಿಯನ್ನೂ ತಿಳಿಸಿಲ್ಲ.

Fact Check: ರಿಯಾ ಚಕ್ರವರ್ತಿ ಪರ ಟ್ವಿಟರ್ ಪೋಸ್ಟ್ ಗಳ ಹಿಂದಿನ ರಹಸ್ಯFact Check: ರಿಯಾ ಚಕ್ರವರ್ತಿ ಪರ ಟ್ವಿಟರ್ ಪೋಸ್ಟ್ ಗಳ ಹಿಂದಿನ ರಹಸ್ಯ

ಐಎಎಫ್ ಟ್ವಿಟ್ಟರ್ ಖಾತೆಯಂತೆಯೇ ಕಾಣಿಸುವಂತೆ ಫೋಟೊಶಾಪ್ ಮಾಡಿ ಈ ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ. ರಫೇಲ್ ಜೆಟ್ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಹಾಗೂ ಕಳವಳ ಸೃಷ್ಟಿಸುವ ಉದ್ದೇಶದಿಂದ ಸುಳ್ಳು ವಿಷಯ ಸೃಷ್ಟಿಸಲಾಗುತ್ತಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತಿಳಿಸಿದೆ.

Fact Check

ಕ್ಲೇಮು

ಅಂಬಾಲಾ ವಾಯುನೆಲೆಯಲ್ಲಿ ರಫೇಲ್ ಯುದ್ಧ ವಿಮಾನ ಅಪಘಾತಕ್ಕೀಡಾಗಿ, ಪೈಲಟ್ ಹುತಾತ್ಮರಾಗಿದ್ದಾರೆ.

ಪರಿಸಮಾಪ್ತಿ

ಅಂತಹ ಯಾವುದೇ ಘಟನೆ ನಡೆದಿಲ್ಲ. ರಫೇಲ್ ಅಪಘಾತದ ಟ್ವೀಟ್ ನಕಲಿ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact check: Tweet claim that Rafale jet crashed at Ambala Airforce station is fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X