ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಚೀನಾದ ಸುಖೋಯ್ ಯುದ್ಧ ವಿಮಾನವನ್ನು ಉರುಳಿಸಿದ ತೈವಾನ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 4: ಚೀನಾದ ಸುಖೋಯ್ ಎಸ್‌ಯು-35 ಯುದ್ಧ ವಿಮಾನವನ್ನು ತೈವಾನ್‌ನ ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂಬ ಪ್ರತಿಪಾದನೆಯೊಂದು ತೈವಾನ್‌ನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಆದರೆ ತೈವಾನ್‌ನ ರಕ್ಷಣಾ ಸಚಿವಾಲಯ ನೀಡಿರುವ ಅಧಿಕೃತ ಹೇಳಿಕೆ ಈ ವರದಿಗಳನ್ನು ನಿರಾಕರಿಸಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿನ ಈ ಮಾಹಿತಿ ಸುಳ್ಳು ಮತ್ತು ದುರುದ್ದೇಶಪೂರ್ವಕ ಎಂದು ಆರೋಪಿಸಿದೆ.

ಚೀನಾ ಯುದ್ಧ ವಿಮಾನ ತೈವಾನ್‌ನಲ್ಲಿ ಫಿನಿಶ್..!?ಚೀನಾ ಯುದ್ಧ ವಿಮಾನ ತೈವಾನ್‌ನಲ್ಲಿ ಫಿನಿಶ್..!?

ದಿ ಜೀವಿಶ್ ಪ್ರೆಸ್ ಮಾಡಿರುವ ವರದಿ ಪ್ರಕಾರ, ತೈವಾನ್ ಸ್ಟ್ರೈಟ್ ಮತ್ತು ದಕ್ಷಿಣ ಚೀನಾ ಸಮುದ್ರ ಭಾಗಗಳಲ್ಲಿ ಒಳನುಸುಳಿದ್ದ ವಿಮಾನವು ವಿಯೆಟ್ನಾಂ ಗಡಿ ಸಮೀಪದಲ್ಲಿನ ದಕ್ಷಿಣ ಚೀನಾದ ಸ್ವಾಯತ್ತ ಕರಾವಳಿ ಪ್ರದೇಶ ಗುವಾಂಗ್‌ಕ್ಸಿಯಲ್ಲಿ ಅಪಘಾತಕ್ಕೀಡಾಗಿದೆ.

Fake News: Taiwan Has Not Shot Down Chinas Sukhoi SU-35 Aircraft

ಜೆಟ್ ಒಂದು ಹೊತ್ತಿ ಕಡು ಕಪ್ಪು ಹೊಗೆ ಉಗುಳುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವಿಡಿಯೋ ಚಿತ್ರೀಕರಿಸಿರುವ ಸ್ಥಳ ಯಾವುದು ಎಂದು ಗೊತ್ತಾಗಿಲ್ಲ. ಚೀನಾದ ವಿಮಾನವನ್ನು ತೈವಾನ್ ರಕ್ಷಣಾ ಪಡೆ ಹೊಡೆದು ಉರುಳಿಸಿದ ವಿಡಿಯೋ ಇದು ಎಂದು ಹೇಳಲಾಗಿದೆ. ಆದರೆ ಈ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ಖಚಿತ ಪುರಾವೆಗಳಿಲ್ಲ. ಈ ವರದಿ ಶುದ್ಧ ಸುಳ್ಳು ಎಂದು ಅನೇಕರು ಹೇಳಿದ್ದಾರೆ. ತಾಂತ್ರಿಕ ಸಮಸ್ಯೆಗಳ ಕಾರಣದಿಂದ ವಿಮಾನ ಅಪಘಾತಕ್ಕೀಡಾಗಿದೆ ಎಂದು ಕೆಲವು ಹೇಳಿದ್ದಾರೆ.

Fact Check: ಕಾಂಟ್ಯಾಕ್ಟ್‌ಲೆಸ್ ಥರ್ಮಾಮೀಟರ್‌ಗಳು ಆರೋಗ್ಯಕ್ಕೆ ಹಾನಿಕರವೇ?Fact Check: ಕಾಂಟ್ಯಾಕ್ಟ್‌ಲೆಸ್ ಥರ್ಮಾಮೀಟರ್‌ಗಳು ಆರೋಗ್ಯಕ್ಕೆ ಹಾನಿಕರವೇ?

2015ರ ನವೆಂಬರ್‌ನಲ್ಲಿ ಸಹಿ ಹಾಕಿದ್ದ ಒಪ್ಪಂದದ ಅನ್ವಯ ರಷ್ಯಾವು ಚೀನಾಕ್ಕೆ ಎಸ್‌ಯು-35 ಯುದ್ಧ ವಿಮಾನಗಳನ್ನು ಹಸ್ತಾಂತರಿಸುವ ಕಾರ್ಯವನ್ನು 2019ರಲ್ಲಿ ಪೂರ್ಣಗೊಳಿಸಿತ್ತು. ಇದರಲ್ಲಿ ಒಂದುವಿಮಾನ ಪತನಗೊಂಡಿದೆ.

Fake News: Taiwan Has Not Shot Down Chinas Sukhoi SU-35 Aircraft

ಈ ವಿಮಾನವನ್ನು ತೈವಾನ್ ಹೊಡೆದುರುಳಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವುದು ಉದ್ದೇಶಪೂರ್ವಕವಾಗಿ ಸುಳ್ಳುಗಳನ್ನು ಹರಡುತ್ತಿರುವ ಕೃತ್ಯವಾಗಿದೆ. ಜನರಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವ ಸಲುವಾಗಿ ಇಂತಹ ಹೇಳಿಕೆಗಳನ್ನು ಹರಿಬಿಡಲಾಗಿದೆ ಎಂದು ವಾಯು ಪಡೆ ಖಂಡಿಸಿದೆ.

Fact Check: ಮರೀನಾ ಬೀಚ್‌ನಲ್ಲಿ ಪೊಲೀಸ್ ಅಧಿಕಾರಿ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ?Fact Check: ಮರೀನಾ ಬೀಚ್‌ನಲ್ಲಿ ಪೊಲೀಸ್ ಅಧಿಕಾರಿ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ?

ತೈವಾನ್ ಸ್ಟ್ರೈಟ್ ಪ್ರದೇಶದ ಸುತ್ತಲಿನ ವಾಯು ಭಾಗ ಹಾಗೂ ಸಮುದ್ರದಲ್ಲಿನ ಸ್ಥಿತಿಯನ್ನು ಕೇಂದ್ರ ಕಚೇರಿ ಸೂಕ್ಷ್ಮವಾಗಿ ಗಮನಿಸಲಿದೆ. ಸುಳ್ಳು ಹಾಗೂ ನಕಲಿ ಸುದ್ದಿಗಳು ಹರಡದಂತೆ ತಡೆಯಲು ತಕ್ಷಣವೇ ಸೂಕ್ತ ಮಾಹಿತಿಗಳನ್ನು ನೀಡಲಿದೆ ಎಂದು ಸಚಿವಾಲಯ ಹೇಳಿದೆ.

Fact Check

ಕ್ಲೇಮು

ಚೀನಾದ ಸುಖೋಯ್ ಯುದ್ಧ ವಿಮಾನವನ್ನು ತೈವಾನ್ ಹೊಡೆದುರುಳಿಸಿದೆ.

ಪರಿಸಮಾಪ್ತಿ

ಈ ವರದಿಯನ್ನು ತೈವಾನ್ ರಕ್ಷಣಾ ಸಚಿವಾಲಯ ನಿರಾಕರಿಸಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A social media buzz claims that Taiwan defence system has shot down a Chinese Sukhoi SU-35 fighter plane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X