ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check ಸಾವಿನ ಸುದ್ದಿ: ಈಗ ಕಪಿಲ್ ದೇವ್ ಸರದಿ

|
Google Oneindia Kannada News

ನವದೆಹಲಿ, ನವೆಂಬರ್ 3: ರಾಜಕಾರಣಿಗಳು, ಸಿನಿಮಾ ರಂಗದವರು ಮತ್ತು ಕ್ರೀಡಾ ಲೋಕದ ಜನಪ್ರಿಯರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅವರ ನಿಧನದ ಬಗ್ಗೆ ಸುಳ್ಳು ಸುದ್ದಿ ಹರಡಿಸುವ ಚಾಳಿ ಮುಂದುವರಿದಿದೆ. ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಳ್ಳುವ ಇಂತಹ ಸುದ್ದಿಗಳನ್ನು ಜನರು ಬೇಗನೆ ನಂಬಿ ಹಂಚಿಕೊಳ್ಳುತ್ತಾರೆ. ಈ ಹುಸಿ ಸಾವಿನ ಸುದ್ದಿಯ ಸಾಲಿಗೆ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಅವರನ್ನೂ ಜನರು ಸೇರಿಸಿಬಿಟ್ಟಿದ್ದಾರೆ.

ಜಾಗತಿಕ ಕ್ರಿಕೆಟ್ ಕಂಡ ದಿಗ್ಗಜ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕಪಿಲ್ ದೇವ್ ಅವರ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿದ್ದರಿಂದ ಪುನಃ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೇಳುವ ಅನೇಕ ಟ್ವೀಟ್‌ಗಳು ಅನಾಮಿಕ ಖಾತೆಗಳಲ್ಲಿ ಹರಿದಾಡುತ್ತಿದೆ.

Fact Check: ಆಸ್ಪಿರಿನ್ ಮಾತ್ರೆಗಳಿಂದ ಕೊರೊನಾ ಸೋಂಕು ದೂರ?Fact Check: ಆಸ್ಪಿರಿನ್ ಮಾತ್ರೆಗಳಿಂದ ಕೊರೊನಾ ಸೋಂಕು ದೂರ?

ಕಳೆದ ತಿಂಗಳು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ 61 ವರ್ಷದ ಕಪಿಲ್, ಕೆಲವು ದಿನಗಳ ಚಿಕಿತ್ಸೆ ನಂತರ ಬಿಡುಗಡೆ ಹೊಂದಿದ್ದರು. ಅವರ ಅಪಧವನಿಯಲ್ಲಿದ್ದ ಬ್ಲಾಕ್ಅನ್ನು ತೆರವುಗೊಳಿಸಿ ಹೃದಯಕ್ಕೆ ಸಹಜ ರಕ್ತಸಂಚಾರ ನಡೆಯುವಂತೆ ಆಂಜಿಯೋಪ್ಲಾಸ್ಟಿ ನಡೆಸಲಾಗಿತ್ತು. ಇದರ ನಂತರ ಅವರು ಆರೋಗ್ಯವಾಗಿದ್ದಾರೆ.

 Fake News On Cricketer Kapil Devs Death Spreads On Social Media

ಕಪಿಲ್ ದೇವ್ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿರುವುದರ ಬಗ್ಗೆ 1983ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಮಾಜಿ ಕ್ರಿಕೆಟಿಗ ಮದನ್ ಲಾಲ್, ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನಮ್ಮ ಸಹೋದ್ಯೋಗಿಯ ಆರೋಗ್ಯದ ಕುರಿತಾದ ಊಹಾಪೋಹಗಳು ಸಂವೇದನೆ ರಹಿತ ಮತ್ತು ಬೇಜವಾಬ್ದಾರಿಯುತ. ನಮ್ಮ ಸ್ನೇಹಿತ ಕಪಿಲ್ ದೇವ್ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ. ಪ್ರತಿದಿನ ಅವರ ಆರೋಗ್ಯ ಉತ್ತಮವಾಗುತ್ತಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಒತ್ತಡದಲ್ಲಿ ಅವರ ಕುಟುಂಬವಿದೆ. ದಯವಿಟ್ಟು ಸಂವೇದನೆ ಉಳಿಸಿಕೊಳ್ಳೋಣ' ಎಂದು ಅವರು ಟ್ವೀಟ್ ಮಾಡಿದ್ದಾರೆ.

Fact Check: ಚೀನಾದಿಂದ ಭಾರತದ ಆಮದು ಪ್ರಮಾಣ ಶೇ.27ರಷ್ಟು ಹೆಚ್ಚಳ?Fact Check: ಚೀನಾದಿಂದ ಭಾರತದ ಆಮದು ಪ್ರಮಾಣ ಶೇ.27ರಷ್ಟು ಹೆಚ್ಚಳ?

ಆಂಜಿಯೋಪ್ಲಾಸ್ಟಿಗೆ ಒಳಗಾದ ವಾರದ ಬಳಿಕ ಕಪಿಲ್ ದೇವ್, ತಾವು ಚೇತರಿಸಿಕೊಂಡಿದ್ದು ಎಲ್ಲರನ್ನೂ ಶೀಘ್ರದಲ್ಲಿಯೇ ಭೇಟಿಯಾಗಲು ಬಯಸಿರುವುದಾಗಿ 1983ರ ವಿಶ್ವಕಪ್ ತಂಡದ ಸಹೋದ್ಯೋಗಿಗಳನ್ನು ಉದ್ದೇಶಿಸಿ ಹೇಳಿದ್ದರು.

Fact Check

ಕ್ಲೇಮು

ಕಪಿಲ್ ದೇವ್ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದು, ಮೃತಪಟ್ಟಿದ್ದಾರೆ.

ಪರಿಸಮಾಪ್ತಿ

ಕಪಿಲ್ ದೇವ್ ಮತ್ತೆ ಆಸ್ಪತ್ರೆಗೆ ದಾಖಲಾಗಿಲ್ಲ, ಅವರು ಚೇತರಿಸಿಕೊಳ್ಳುತ್ತಿದ್ದಾರೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A fake news spread by social media users about the legendary cricketer Kapil Dev's health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X