ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೋವಿಡ್ ರೋಗಿಗಳಿಗೆ ಐಸಿಎಂಆರ್‌ನಿಂದ ಐವರ್ಮೆಕ್ಟಿನ್ ಶಿಫಾರಸು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 12: ಕೋವಿಡ್-19ಅನ್ನು ತಡೆಯಲು ಐವರ್ಮೆಕ್ಟಿನ್ ಔಷಧವನ್ನು ಬಳಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತನ್ನ ಮಾರ್ಗಸೂಚಿಯಲ್ಲಿ ಸಲಹೆ ನೀಡಿದೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಐವರ್ಮೆಕ್ಟಿನ್ ಔಷಧವನ್ನು ಮೂರು ದಶಕಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುತ್ತಿದ್ದು, ತುರಿಗಜ್ಜಿ, ತಲೆ ಹೇನು ಮತ್ತು ಜಂತುಹುಳು ಸಮಸ್ಯೆಗಳ ಚಿಕಿತ್ಸೆಗಾಗಿ ಉಪಯೋಗಿಸಲಾಗುತ್ತಿದೆ.

Fact Check: ಅಂಬಾಲಾದಲ್ಲಿ ರಫೇಲ್ ಜೆಟ್ ಅಪಘಾತದ ಸುದ್ದಿ ಸುಳ್ಳುFact Check: ಅಂಬಾಲಾದಲ್ಲಿ ರಫೇಲ್ ಜೆಟ್ ಅಪಘಾತದ ಸುದ್ದಿ ಸುಳ್ಳು

'ಕೋವಿಡ್-19ಕ್ಕೆ ಐಸಿಎಂಆರ್ 2020ರ ಆಗಸ್ಟ್ 6ರಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ರಾತ್ರಿ ಊಟದ ಎರಡು ಗಂಟೆ ಬಳಿಕ ಮೊದಲ ದಿನ, ಏಳನೇ ದಿನ ಹಾಗೂ 30ನೇ ದಿನ ಐವರ್ಮೆಕ್ಟಿನ್ 12 ಎಂಜಿ ತೆಗೆದುಕೊಳ್ಳಬೇಕು. ಕೊರೊನಾ ವೈರಸ್ ಪಿಡುಗು ದೂರವಾಗುವವರೆಗೂ ಪ್ರತಿ 30 ದಿನ 12 ಎಂಜಿಯ ಒಂದು ಮಾತ್ರೆ ತೆಗೆದುಕೊಳ್ಳಬೇಕು.

Fake News: ICMR Not Recommended Ivermectin For Covid-19 Patients

ಹೆಚ್ಚು ಸಮಸ್ಯೆಯುಳ್ಳ ಜನರು ಮತ್ತು ಮುಂಚೂಣಿ ಆರೋಗ್ಯ ಕಾರ್ಯಕರ್ತರು ಇದನ್ನು ತೆಗೆದುಕೊಳ್ಳಬೇಕು. ಇದು ಶೇ 80-90ರಷ್ಟು ರೋಗ ಹಾಗೂ ಮರಣದ ತೀವ್ರತೆಯನ್ನು ತಗ್ಗಿಸುತ್ತದೆ. ಕೋವಿಡ್ ಪಾಸಿಟಿವ್ ಬಂದಿದ್ದು ರೋಗ ಲಕ್ಷಣಗಳಿಲ್ಲ ಮತ್ತು ಲಘು ಲಕ್ಷಣಗಳಿರುವವರು ಐವರ್ಮೆಕ್ಟಿನ್ ಅನ್ನು ಮೂರು ದಿನ 12 ಎಂಜಿ ಜತೆಗೆ, ಡಾಕ್ಸಿಸೈಕ್ಲೈನ್ (100) ಅನ್ನು ಎರಡರಂತೆ ಐದು ದಿನ ತೆಗೆದುಕೊಳ್ಳಬೇಕು ಎಂದು ಫೇಸ್‌ಬುಕ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.

ಆದರೆ ಐಸಿಎಂಆರ್ ಮಾರ್ಗಸೂಚಿಗಳನ್ನು ಪರಿಶೀಲಿಸಿದಾಗ ಇಂತಹ ಯಾವುದೇ ಸೂಚನೆ ನೀಡಿರದೆ ಇರುವುದು ಗಮನಕ್ಕೆ ಬರುತ್ತದೆ. ಇದು ಉತ್ತರ ಪ್ರದೇಶ ಸರ್ಕಾರದ ಸುತ್ತೋಲೆಯಾಗಿದ್ದು, ಐಸಿಎಂಆರ್ ಮಾರ್ಗಸೂಚಿ ಎಂದು ತಪ್ಪಾಗಿ ಬಿಂಬಿಸಲಾಗಿದೆ.

Fact Check: ಹೊಸ ಸ್ಟುಡಿಯೋ ಕಟ್ಟಲು ಕಂಗನಾಗೆ ಅಂಬಾನಿಯಿಂದ ಧನ ಸಹಾಯ Fact Check: ಹೊಸ ಸ್ಟುಡಿಯೋ ಕಟ್ಟಲು ಕಂಗನಾಗೆ ಅಂಬಾನಿಯಿಂದ ಧನ ಸಹಾಯ

Recommended Video

ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಪುಟಿನ್ ಮಗಳು ಸಾವು..!? | Oneindia Kannada

ರೋಗ ನಿರೋಧಕವಾಗಿ ಐವರ್ಮೆಕ್ಟಿನ್ ಮಾತ್ರೆಗಳನ್ನು ಲಕ್ಷಣ ರಹಿತ ಹಾಗೂ ಲಘು ಲಕ್ಷಣವಿರುವ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸುವಂತೆ ಆಗಸ್ಟ್‌ನಲ್ಲಿ ಉತ್ತರ ಪ್ರದೇಶ ಸರ್ಕಾರ ಸುತ್ತೋಲೆ ಹೊರಡಿಸಿತ್ತು.

Fact Check

ಕ್ಲೇಮು

ಕೋವಿಡ್ ರೋಗಿಗಳಿಗೆ ಐವರ್ಮೆಕ್ಟಿನ್ ಮಾತ್ರೆಗಳನ್ನು ನೀಡುವಂತೆ ಐಸಿಎಂಆರ್ ಶಿಫಾರಸು ಮಾಡಿದೆ.

ಪರಿಸಮಾಪ್ತಿ

ಐಸಿಎಂಆರ್ ಐವರ್ಮೆಕ್ಟಿನ್ ಮಾತ್ರೆಗಳನ್ನು ನೀಡುವಂತೆ ಯಾವುದೇ ಸೂಚನೆ ನೀಡಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A Fake news as ICMR in its guidelines has prescribed the use of Ivermectin drug for COVID-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X