ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಎಲ್ಲ ಆಹಾರ ಉದ್ಯಮಕ್ಕೂ ಎಫ್‌ಎಸ್‌ಎಸ್‌ಎಐ ಪರವಾನಗಿ ಬೇಕೇ?

|
Google Oneindia Kannada News

ನವದೆಹಲಿ, ಅಕ್ಟೋಬರ್ 30: ದೇಶದಲ್ಲಿನ ಎಲ್ಲ ಆಹಾರ ವ್ಯವಹಾರ ಆಪರೇಟರ್‌ಗಳೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಪರವಾನಗಿ ಪಡೆದುಕೊಳ್ಳಬೇಕು ಎಂಬ ಮಾಹಿತಿಯುಳ್ಳ ಹೇಳಿಕೆಯೊಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಆದರೆ ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ (ಪಿಐಬಿ) ಪ್ರಕಾರ ಈ ಹೇಳಿಕೆಯು ಸತ್ಯವಲ್ಲ. ವರ್ಷಕ್ಕೆ 20 ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸುವ ಉದ್ಯಮಗಳು ಮಾತ್ರವೇ ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದುಕೊಳ್ಳಬೇಕು ಎಂದು ಪಿಐಬಿ ಸ್ಪಷ್ಟೀಕರಣ ನೀಡಿದೆ. ಪತ್ರಿಕೆಯು ಪ್ರಕಟಿಸಿರುವ ವರದಿ ತಪ್ಪುದಾರಿಗೆ ಎಳೆಯುವಂತಿದೆ ಎಂದು ತಿಳಿಸಿದೆ.

Fact Check: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ವಿತರಣೆ Fact Check: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ವಿತರಣೆ

ತನ್ನ ಆಹಾರ ಸುರಕ್ಷತೆ ಅಂಗೀಕಾರ ವ್ಯವಸ್ಥೆಯು (ಎಫ್‌ಎಸ್‌ಸಿಎಸ್) ನವೆಂಬರ್ 1ರಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ಎಫ್‌ಎಸ್‌ಎಸ್‌ಎಐ ಕಳೆದ ವಾರ ತಿಳಿಸಿತ್ತು. ಈ ವ್ಯವಸ್ಥೆಯು ತಮಿಳುನಾಡು, ದೆಹಲಿ, ಗುಜರಾತ್, ಒಡಿಶಾ, ಚಂಡೀಗಡ, ಗೋವಾ, ಮಣಿಪುರ, ಪುದುಚೆರಿ ಮತ್ತು ಲಡಾಖ್‌ಗಳಲ್ಲಿ ಜೂನ್‌ನಿಂದ ಕಾರ್ಯಾಚರಣೆ ನಡೆಸುತ್ತಿದೆ. ನವೆಂಬರ್ 1ರಿಂದ ಇದು ಇಡೀ ದೇಶದಾದ್ಯಂತ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸಿದೆ ಎಂದು ಹೇಳಿತ್ತು.

Fake News: Do All Food Business Operators Need To Get FSSAI Licence?

2011ರಿಂದಲೂ ಎಫ್‌ಎಸ್‌ಎಸ್‌ಎಐ ತನ್ನ ಎಫ್‌ಎಲ್‌ಆರ್‌ಎಸ್ (ಆಹಾರ ಪರವಾನಗಿ ಮತ್ತು ನೋಂದಣಿ ವ್ಯವಸ್ಥೆ) ಪರವಾನಗಿ ವ್ಯವಸ್ಥೆಯ ಆತ್ಮ ಎಂದು ಕರೆದುಕೊಂಡಿದೆ. ಎಲ್ಲ ರಾಜ್ಯಗಳಲ್ಲಿಯೂ ಅದು ಕಾರ್ಯ ನಿರ್ವಹಣೆ ಮಾಡುತ್ತಿದ್ದು, 70 ಲಕ್ಷ ಪರವಾನಗಿ/ನೋಂದಣಿಗಳನ್ನು ಇದುವರೆಗೂ ಮಾಡಲಾಗಿದೆ. 40 ಲಕ್ಷಕ್ಕೂ ಅಧಿಕ ಪರವಾನಗಿ/ನೋಂದಾಯಿತರು ಸಕ್ರಿಯವಾಗಿ ವ್ಯವಹರಿಸುತ್ತಿದ್ದಾರೆ.

Fact Check

ಕ್ಲೇಮು

ಎಲ್ಲ ಆಹಾರ ಉದ್ಯಮಗಳೂ ಎಫ್‌ಎಸ್‌ಎಸ್ಎಐ ಪರವಾನಗಿ ಪಡೆದುಕೊಳ್ಳಬೇಕು.

ಪರಿಸಮಾಪ್ತಿ

ಇದು 20 ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸುವ ಉದ್ಯಮಗಳಿಗೆ ಮಾತ್ರ ಅನ್ವಯ

Rating

Half True
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A claim in a newspaper that all food business operators have to get licence from FSSAI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X