• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಹತ್ರಾಸ್‌ಗೆ ತೆರಳುವಾಗ ರಾಹುಲ್, ಪ್ರಿಯಾಂಕಾ ತಮಾಷೆ ಮಾಡಿ ನಗುತ್ತಿದ್ದರೇ?

|

ನವದೆಹಲಿ, ಅಕ್ಟೋಬರ್ 6: ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಭೇಟಿಗೆ ತೆರಳುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ತಮಾಷೆಯ ಮಾತುಗಳನ್ನಾಡುತ್ತಿದ್ದರು ಎಂದು ಜಾಲತಾಣಗಳಲ್ಲಿ ಅನೇಕ ಬಳಕೆದಾರರು ಆರೋಪಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆದಾರರು ವ್ಯಂಗ್ಯದ ಕಾಮೆಂಟ್‌ಗಳನ್ನು ಹರಿಬಿಡುತ್ತಿದ್ದಾರೆ. ಹಾಸ್ಯ ಚಟಾಕಿಗಳನ್ನು ಹಾರಿಸಿಕೊಂಡು ನಗುತ್ತಿದ್ದ ಕಾಂಗ್ರೆಸ್ ನಾಯಕರು ಹತ್ರಾಸ್ ಘಟನೆಯ ಲಾಭ ಪಡೆದುಕೊಳ್ಳಲು ಮುಖದ ಮೇಲೆ ಬಲವಂತವಾಗಿ ದುಃಖವನ್ನು ತರಿಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ. ಅನೇಕರು ಈ ಫೋಟೊ ಹಾಕಿ, 'ವಿರೋಧಪಕ್ಷದ ಮುಖಂಡರು ತಮ್ಮ ಮುಖದಲ್ಲಿ ಅಪಾರ ದುಃಖವನ್ನು ತಂದುಕೊಂಡು ಹತ್ರಾಸ್‌ಗೆ ತೆರಳುತ್ತಿದ್ದಾರೆ' ಎಂದು ಬರೆದಿದ್ದಾರೆ.

Fact Check: ಸಿಎಂ ಯೋಗಿ ಹತ್ರಾಸ್ ಸಂತ್ರಸ್ತೆಯ ಅಂತ್ಯಕ್ರಿಯೆ ಲೈವ್ ನೋಡಿದ್ರಾ?

ಆದರೆ ಇದು ಸುಳ್ಳು ಆರೋಪವಾಗಿದೆ. ಈ ಫೋಟೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಹಳೆಯ ಫೋಟೊ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇದು 2019ರ ಏಪ್ರಿಲ್‌ನಲ್ಲಿ ಕಾನ್ಪುರ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಭೇಟಿ ಮಾಡಿ, ನಗುತ್ತಾ ಕಾಣಿಸಿಕೊಂಡ ಸಂದರ್ಭದ ಫೋಟೊ.

2019ರ ಲೋಕಸಭೆ ಚುನಾವಣೆಯಲ್ಲಿ ವಿಭಿನ್ನ ಭಾಗಗಳಲ್ಲಿ ಪ್ರಚಾರಕ್ಕೆ ಹೊರಟಿದ್ದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಕಾನ್ಪುರ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದರು. ಆಗ ಅಪ್ಪಿಕೊಂಡು ನಗುತ್ತಾ ಫೋಟೊಗಳಿಗೆ ಪೋಸ್ ನೀಡಿದ್ದರು. ಆಗ ಈ ಫೋಟೊಗಳು ವೈರಲ್ ಆಗಿದ್ದವು.

Fact Check: ನಟಿ ದೀಪಿಕಾ ಪಡುಕೋಣೆ ಟಿ-ಶರ್ಟ್ ಮೇಲೆ ರೈತರ ಪರ ಬರಹ

ಕಾನ್ಪುರದಲ್ಲಿ ಪ್ರಚಾರ ನಡೆಸಿ ರಾಹುಲ್ ಗಾಂಧಿ ಅಮೇಥಿ ಕಡೆ ಹೊರಟಿದ್ದರು. ಆಗ ಬೇರೆ ಸಭೆಯಲ್ಲಿ ಭಾಗವಹಿಸಲು ಕಾನ್ಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಿಯಾಂಕಾ ಗಾಂಧಿ ಎದುರಾಗಿದ್ದರು.

Fact Check

ಕ್ಲೇಮು

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಹತ್ರಾಸ್‌ಗೆ ತೆರಳುವ ವೇಳೆ ತಮಾಷೆ ಮಾಡುತ್ತಿದ್ದರು.

ಪರಿಸಮಾಪ್ತಿ

ಈ ಫೋಟೊ 2019ರ ಏಪ್ರಿಲ್‌ನಲ್ಲಿ ಕಾನ್ಪುರದ ವಿಮಾನ ನಿಲ್ದಾಣದಲ್ಲಿ ತೆಗೆದಿದ್ದು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
Fact Check: Several social media users claimed Rahul and Priyanka Gandhi were joking on their way to meet the Hathras victim's family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X