ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಮರೀನಾ ಬೀಚ್‌ನಲ್ಲಿ ಪೊಲೀಸ್ ಅಧಿಕಾರಿ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 2: ಮುಸ್ಲಿಂ ಯುವಕರ ಗುಂಪೊಂದು ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರನ್ನು ಥಳಿಸಿದೆ ಎಂದು ಹೇಳಲಾದ ಪೋಸ್ಟ್ ಒಂದು ವಾಟ್ಸಾಪ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿ. ಅಕಿಲನ್ ಎಂಬ ಹೆಸರನ್ನು ಪೊಲೀಸ್ ಸಮವಸ್ತ್ರದ ಮೇಲೆ ಹೊಂದಿರುವ ಗಾಯಗೊಂಡಿರುವ ವ್ಯಕ್ತಿಯೊಬ್ಬರ ಫೋಟೊವನ್ನು ಈ ಪೋಸ್ಟ್ ಜತೆ ಫಾರ್ವರ್ಡ್ ಮಾಡಲಾಗುತ್ತಿದೆ. ಪೊಲೀಸ್ ಸಮವಸ್ತ್ರ ಕೂಡ ರಕ್ತಸಿಕ್ತವಾಗಿದೆ.

'ಮರೀನಾ ಬೀಚ್‌ನಲ್ಲಿ ಮಾದಕ ವಸ್ತುಗಳ ಅಮಲಿನಲ್ಲಿದ್ದ ಮೂವರು ಮುಸ್ಲಿಂ ಯುವಕರು ತಿರುವಲ್ಲಿಕೇನಿ ಪ್ರದೇಶದಲ್ಲಿ ಮಹಿಳೆಯರನ್ನು ಪೀಡಿಸುತ್ತಿದ್ದಾಗ ಅದನ್ನು ತಡೆಯಲು ಪ್ರಯತ್ನಿಸಿದ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಅಖಿಲನ್ ಅವರ ಮೇಲೆ ತೀವ್ರವಾಗಿ ಹಲ್ಲ ನಡೆಸಿದ್ದಾರೆ' ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

Fact Check: ಕಾನೂನು ಪದವಿ ಪ್ರವೇಶ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದಕ್ಕೆ?Fact Check: ಕಾನೂನು ಪದವಿ ಪ್ರವೇಶ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದಕ್ಕೆ?

'ನಿನ್ನೆಯೊಂದೇ ದಿನ ಸಾವಿರಾರು ಮುಸ್ಲಿಮರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಇದು ಭಾರತವೇ ಅಥವಾ ಪಾಕಿಸ್ತಾನವೇ?' ಎಂದೂ ಆ ಸಂದೇಶದಲ್ಲಿ ಪ್ರಶ್ನಿಸಲಾಗಿದೆ.

Fake News: Did A Police Officer Beaten By A Muslim Mob At Marina Beach In Chennai?

ಆದರೆ ಈ ಚಿತ್ರವನ್ನು ಗೂಗಲ್ ಇಮೇಜ್‌ನಲ್ಲಿ ರಿವರ್ಸ್ ಸರ್ಚ್ ಮಾಡಿದರೆ ಅದು ಫೇಸ್‌ಬುಕ್‌ನ ಪುಟವೊಂದನ್ನು ತೋರಿಸುತ್ತದೆ. 'ಐ ಸಪೋರ್ಟ್ ತಮಿಳುನಾಡು ಪೊಲೀಸ್' ಎಂಬ ಹೆಸರಿನ ಫೇಸ್ ಬುಕ್ ಪುಟದಲ್ಲಿ ಇದೇ ಫೋಟೊವನ್ನು 2019ರ ಆಗಸ್ಟ್ 24ರಂದು 'ತಮಿಳುನಾಡು ಪೊಲೀಸ್' ಎಂಬ ಮತ್ತೊಂದು ಪುಟದಿಂದ ಹಂಚಿಕೊಳ್ಳಲಾಗಿತ್ತು.

Fact Check: ಗಾಲ್ವಾನ್ ಕಣಿವೆಯಲ್ಲಿ ಸೈನಿಕರು ಗಣಪತಿ ಹಬ್ಬ ಆಚರಿಸಿದರೇ?Fact Check: ಗಾಲ್ವಾನ್ ಕಣಿವೆಯಲ್ಲಿ ಸೈನಿಕರು ಗಣಪತಿ ಹಬ್ಬ ಆಚರಿಸಿದರೇ?

ಈ ಮೂಲ ಪೋಸ್ಟ್‌ಅನ್ನು 2017ರ ಆಗಸ್ಟ್ 21ರಂದು ಹಂಚಿಕೊಳ್ಳಲಾಗಿತ್ತು. ಇದರಿಂದಾಗಿ ಈ ವಾಟ್ಸಾಪ್ ಪೋಸ್ಟ್‌ಗಳಲ್ಲಿ ಹೇಳುತ್ತಿರುವಂತೆ ಇದು ನಿಜಕ್ಕೂ ಇತ್ತೀಚೆಗೆ ನಡೆದ ಘಟನೆಯಲ್ಲ ಎನ್ನುವುದು ಸ್ಪಷ್ಟ.

ಇದು 2017ರಲ್ಲಿ ನಡೆದ ಘಟನೆಗೆ ಸಂಬಂಧಿಸಿರಬಹುದು ಎಂದು ಆಗ ಪ್ರಕಟಗೊಂಡ ಸುದ್ದಿಗಳನ್ನು ಕೆದಕಿದರೆ, ಮರೀನಾ ಬೀಚ್‌ನಲ್ಲಿ ಗುಂಪೊಂದು ಅಖಿಲನ್ ಎಂಬ ಹೆಸರಿನ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ವರದಿ ಸಿಗುತ್ತದೆ.

Fact Check: ಹುಬ್ಬಳ್ಳಿಯಲ್ಲಿ ಭಯೋತ್ಪಾದಕನ ಬಂಧನದ ಸುದ್ದಿFact Check: ಹುಬ್ಬಳ್ಳಿಯಲ್ಲಿ ಭಯೋತ್ಪಾದಕನ ಬಂಧನದ ಸುದ್ದಿ

2017ರ ಆಗಸ್ಟ್‌ನಲ್ಲಿ ಮರೀನಾ ಬೀಚ್‌ನಲ್ಲಿ ಇಬ್ಬರು ಯುವಕರು ಮದ್ಯ ಸೇವನೆ ಮಾಡುತ್ತಿರುವುದನ್ನು ಪೊಲೀಸ್ ಕಾನ್‌ಸ್ಟೆಬಲ್ ಅಖಿಲನ್ ಕಂಡಿದ್ದರು. ಅಲ್ಲಿಂದ ತೆರಳುವಂತೆ ಆ ಯುವಕರಿಗೆ ಅವರು ಸೂಚಿಸಿದಾಗ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಇದು ಮತ್ತಷ್ಟು ವಿಕೋಪಕ್ಕೆ ತೆರಳಿ ಯುವಕರು ಅಖಿಲನ್ ಅವರೊಂದಿಗೆ ಕೈಕೈ ಮಿಲಾಯಿಸಿದರು. ಅಖಿಲನ್ ಅವರನ್ನು ಹರಿತವಾದ ವಸ್ತುವಿನಿಂದ ಗಾಯಗೊಳಿಸಿದರು. ಅಖಿಲನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಪರಾರಿಯಾಗಿದ್ದವರಲ್ಲಿ ಹರಿ ರಾಮ್ ಎಂಬ ಆರೋಪಿಯನ್ನು ಮರೀನಾ ಬೀಚ್ ಪೊಲೀಸರು ಬಂಧಿಸಿ ಹತ್ಯೆ ಪ್ರಯತ್ನದ ಪ್ರಕರಣ ದಾಖಲಿಸಿದ್ದರು.

Fact Check

ಕ್ಲೇಮು

ಮಾದಕ ವಸ್ತು ಸೇವಿಸಿ ಮಹಿಳೆಯರನ್ನು ಚುಡಾಯಿಸುತ್ತಿದ್ದ ಮುಸ್ಲಿಂ ಯುವಕರ ಗುಂಪಿನಿಂದ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ.

ಪರಿಸಮಾಪ್ತಿ

ಇದು 2017ರ ಆಗಸ್ಟ್‌ನಲ್ಲಿ ಮರೀನಾ ಬೀಚ್‌ನಲ್ಲಿ ಮದ್ಯಸೇವನೆ ಮಾಡುತ್ತಿದ್ದ ಇಬ್ಬರು ಯುವಕರೊಂದಿಗೆ ನಡೆದ ಜಗಳದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಗಾಯಗೊಂಡ ಘಟನೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A Whatsapp post claiming that a police officer was beaten by a mob of Muslim youth in Marina beach, Chennai. But that photo was three years old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X