ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕಾನೂನು ಪದವಿ ಪ್ರವೇಶ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದಕ್ಕೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) 2020ಯನ್ನು ಮುಂದೂಡಲಾಗಿದೆ ಎಂದು ಹೇಳುವ ನೋಟಿಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ಕಾರ್ಯಕಾರಿ ಸಮಿತಿಯು ಆಗಸ್ಟ್ 25ರಂದು ಸಭೆ ನಡೆಸಿದ್ದು, ಸಿಎಲ್‌ಎಟಿಯನ್ನು ಮುಂದೂಡುವ ಬಗ್ಗೆ ಒಮ್ಮತದ ನಿರ್ಣಯ ತೆಗೆದುಕೊಂಡಿದೆ. ಸೆ. 7ರಂದು ನಿಗದಿಯಾಗಿದ್ದ ಸಿಎಲ್‌ಎಟಿ 2020ಯನ್ನು ಮುಂದಿನ ನಿರ್ಧಾರ ಪ್ರಕಟಿಸುವವರೆಗೂ ಮುಂದೂಡಲಾಗಿದೆ ಎಂದು ಆ ನೋಟಿಸ್‌ನಲ್ಲಿ ಹೇಳಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ನೋಟಿಸ್ ಸತ್ಯವಲ್ಲ. ಸೆ. 28ರಂದು ಪರೀಕ್ಷೆಗಳು ನಡೆಯಲಿವೆ ಎಂದು ಸಿಎಲ್‌ಎಟಿ ಸ್ಪಷ್ಟಪಡಿಸಿದೆ.

Fact Check: ಗಾಲ್ವಾನ್ ಕಣಿವೆಯಲ್ಲಿ ಸೈನಿಕರು ಗಣಪತಿ ಹಬ್ಬ ಆಚರಿಸಿದರೇ?Fact Check: ಗಾಲ್ವಾನ್ ಕಣಿವೆಯಲ್ಲಿ ಸೈನಿಕರು ಗಣಪತಿ ಹಬ್ಬ ಆಚರಿಸಿದರೇ?

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ಕಾರ್ಯಕಾರಿ ಸಮಿತಿಯು ಆಗಸ್ಟ್ 27ರಂದು ಸಭೆ ನಡೆಸಿತ್ತು. ಕೋವಿಡ್ 19 ಸೋಂಕಿನ ಭೀತಿಯ ನಡುವೆ ಪರೀಕ್ಷೆ ನಡೆಸಲು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು ಮತ್ತು ದೇಶದ ವಿವಿಧ ರಾಜ್ಯಗಳಲ್ಲಿನ ಪರಿಸ್ಥಿತಿಯ ಪರಾಮರ್ಶೆ ನಡೆಸಲು ಸಭೆ ನಡೆಸಲಾಗಿತ್ತು ಎಂದು ಸಭೆಯ ಬಳಿಕ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ತಿಳಿಸಿದೆ. ಮುಂದೆ ಓದಿ.

ಲಾಕ್‌ಡೌನ್ ಬಗ್ಗೆ ಚರ್ಚೆ

ಲಾಕ್‌ಡೌನ್ ಬಗ್ಗೆ ಚರ್ಚೆ

ಸಭೆಯಲ್ಲಿ ಕಾರ್ಯಕಾರಿ ಸಮಿತಿಯು ದೇಶದ ವಿವಿಧ ಭಾಗಗಳಲ್ಲಿನ ಕೊರೊನಾ ವೈರಸ್ ಸೋಂಕಿನ ಸನ್ನಿವೇಶ ಮತ್ತು ಲಾಕ್‌ಡೌನ್ ಬಗ್ಗೆ ಚರ್ಚಿಸಿತು. ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಸೆ. 7ರಂದು ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಹಾಗೂ ಬಿಹಾರದಲ್ಲಿ ಸೆ. 6ರವರೆಗೂ ಲಾಕ್‌ಡೌನ್ ಮುಂದುವರಿಯುತ್ತಿರುವುದರಿಂದ ಪರೀಕ್ಷಾ ದಿನಾಂಕದ ಬದಲಾವಣೆ ಕುರಿತು ಗಮನ ಹರಿಸಲಾಯಿತು.

ಸೆ. 28ಕ್ಕೆ ಮುಂದೂಡಿಕೆ

ಸೆ. 28ಕ್ಕೆ ಮುಂದೂಡಿಕೆ

ಪದವಿ ಮತ್ತು ಸ್ನಾತಕೋತ್ತರ ಪದವಿ ಅಭ್ಯರ್ಥಿಗಳಿಗೆ 2020ರ ಸೆ. 7ಕ್ಕೆ ಆಯೋಜಿಸಲಾಗಿದ್ದ ಸಿಎಲ್‌ಎಟಿ ಪರೀಕ್ಷೆಗಳನ್ನು ಮುಂದೂಡಿ 28ನೇ ಸೆಪ್ಟೆಂಬರ್‌ನ ಸೋಮವಾರದಂದು ಮಧ್ಯಾಹ್ನ 2-4 ಗಂಟೆಗೆ ನಡೆಸಲು ತೀರ್ಮಾನಿಸಲಾಯಿತು.

Fact Check: ಹುಬ್ಬಳ್ಳಿಯಲ್ಲಿ ಭಯೋತ್ಪಾದಕನ ಬಂಧನದ ಸುದ್ದಿFact Check: ಹುಬ್ಬಳ್ಳಿಯಲ್ಲಿ ಭಯೋತ್ಪಾದಕನ ಬಂಧನದ ಸುದ್ದಿ

ದೆಹಲಿ ಹೈಕೋರ್ಟ್ ಸೂಚನೆ

ದೆಹಲಿ ಹೈಕೋರ್ಟ್ ಸೂಚನೆ

ಸಿಎಲ್‌ಎಟಿ ಪರೀಕ್ಷೆಗಳನ್ನು ಕೋವಿಡ್-19 ಸೋಂಕಿನ ಕಾರಣದಿಂದ ಈ ಹಿಂದೆ ಕೂಡ ಒಮ್ಮೆ ಮುಂದೂಡಲಾಗಿತ್ತು. ದೇಶದ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಪ್ರವೇಶಕ್ಕಾಗಿ ಒಕ್ಕೂಟವು ಕೇಂದ್ರೀಕೃತ ಪರೀಕ್ಷೆಯನ್ನು ನಡೆಸುತ್ತದೆ.

ಸೋಂಕಿನ ಭೀತಿಯ ನಡುವೆ ಪರೀಕ್ಷೆಗೆ ಖುದ್ದು ಹಾಜರಾಗುವ ಅಗತ್ಯವನ್ನು ಪ್ರಶ್ನಿಸಿ ಕಾನೂನು ಪದವೀಧರರೊಬ್ಬರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಎನ್‌ಎಲ್‌ಯು ಒಕ್ಕೂಟಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು.

ಹಲವು ಬಾರಿ ಪರೀಕ್ಷೆ ಮುಂದೂಡಿಕೆ

ಹಲವು ಬಾರಿ ಪರೀಕ್ಷೆ ಮುಂದೂಡಿಕೆ

ಕೋವಿಡ್-19 ಕಾರಣದಿಂದ ಹಲವು ಬಾರಿ ಸಿಎಲ್‌ಎಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಮೇ 24ಕ್ಕೆ ಮುಂದೂಡಲಾಗಿತ್ತು. ಬಳಿಕ ಆಗಸ್ಟ್‌ಗೆ ಮುಂದೂಡಿಕೆಯಾಗಿತ್ತು. ಅದರಿಂದ ಸೆ. 7ಕ್ಕೆ ನಿಗದಿಯಾಗಿತ್ತು. ಈಗ ಸೆ. 28ಕ್ಕೆ ಮುಂದೂಡಲಾಗಿದೆ.

Fact Check

ಕ್ಲೇಮು

ಸಿಎಲ್‌ಎಟಿ 2020 ಪರೀಕ್ಷೆ ಅನಿರ್ದಿಷ್ಟಾವಧಿ ಮುಂದೂಡಿಕೆಯಾಗಿದೆ.

ಪರಿಸಮಾಪ್ತಿ

ಸಿಎಲ್‌ಎಟಿ ಪರಾಮರ್ಶನಾ ಸಭೆ ನಡೆಸಿದ್ದು, ಸೆ. 28ರಂದು ಪರೀಕ್ಷೆ ನಡೆಸಲು ನಿರ್ಧರಿಸಿದೆ.

Rating

Half True
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A notice claiming the Common Law Admission Test (CLAT) has been postoned until further notice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X