ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ರೈಲ್ವೆಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಮಾರಲಾಗುತ್ತದೆಯೇ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 7: ಭಾರತೀಯ ರೈಲ್ವೇಸ್‌ಅನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಲಾಗುತ್ತದೆ ಎಂಬ ಸಂದೇಶವೊಂದು ಹರಿದಾಡುತ್ತಿದೆ. ರೈಲ್ವೆಯನ್ನು ಸಂಪೂರ್ಣವಾಗಿ ಮಾರಾಟ ಮಾಡಲಾಗುತ್ತಿದೆ. ಸುಲಭದ ಮಾರಾಟಕ್ಕಾಗಿ ಏಳು ಕಾರ್ಖಾನೆಗಳನ್ನು ವಿಲೀನಗೊಳಿಸಲಾಗಿದೆ. ಜತೆಗೆ ರೈಲ್ವೆ ಇಲಾಖೆಯಲ್ಲಿನ 3.5 ಲಕ್ಷ ಕಾಯಂ ಹುದ್ದೆಗಳಲ್ಲಿನ ನೌಕರರ ಬದಲು ಗುತ್ತಿಗೆ ಕಾರ್ಮಿಕರನ್ನು ನೇಮಿಸಲಾಗುತ್ತದೆ ಎಂದು ಹೇಳಲಾಗಿದೆ.

ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, 'ದೇಶಾಭಿಮಾನಿ' ಎಂಬ ವೆಬ್‌ಸೈಟ್ ಕೂಡ ವಿವರವಾದ ಸುದ್ದಿಯನ್ನು ಪ್ರಕಟಿಸಿದೆ. ಇದರಿಂದ ರೈಲ್ವೆ ಇಲಾಖೆಯ ಉದ್ಯೋಗಿಗಳಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಹುಟ್ಟಿಸಿದೆ. ಆದರೆ ಈ ವರದಿ ದಿಕ್ಕುತಪ್ಪಿಸುವಂತಿದೆ. ಇದು ಸತ್ಯವಲ್ಲ. ವೆಬ್‌ಪೋರ್ಟಲ್‌ನಲ್ಲಿ ಪ್ರಕಟವಾದ ವರದಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳನ್ನು ವಾಸ್ತವಗಳನ್ನು ಮರೆಮಾಚಿ ಸೃಷ್ಟಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Fact Check: ಚೀನಾದ ಸುಖೋಯ್ ಯುದ್ಧ ವಿಮಾನವನ್ನು ಉರುಳಿಸಿದ ತೈವಾನ್Fact Check: ಚೀನಾದ ಸುಖೋಯ್ ಯುದ್ಧ ವಿಮಾನವನ್ನು ಉರುಳಿಸಿದ ತೈವಾನ್

ಇದಲ್ಲದೆ, ರೈಲ್ವೇಸ್ ಹೆಸರನ್ನು ಅದಾನಿ ರೈಲ್ವೇಸ್ ಎಂದು ಬದಲಿಸಲಾಗುತ್ತಿದೆ ಎಂಬ ಪೋಸ್ಟ್‌ಗಳು ಕೂಡ ಹರಿದಾಡುತ್ತಿದೆ. ರೈಲ್ವೆಯ ಹೆಸರನ್ನು ಬದಲಿಸುತ್ತಿರುವ ನಡೆ ಭಯಾನಕವಾಗಿದೆ ಎಂದು ಈ ಪೋಸ್ಟ್ ಹಂಚಿಕೊಂಡಿರುವವರು ಹೇಳಿದ್ದಾರೆ.

Fake News Claiming Indian Railways Will Be Sold And Called Adani Railways

ವಾಸ್ತವವೆಂದರೆ ಅದಾನಿ ಸಮೂಹ ಸೇರಿದಂತೆ 15 ಖಾಸಗಿ ಕಂಪೆನಿಗಳು ದೇಶದಲ್ಲಿ ಕಂಟೇನರ್ ಟ್ರೈನ್‌ಗಳನ್ನು ನಿರ್ವಹಿಸಲು ಪರವಾನಗಿ ಪಡೆದುಕೊಂಡಿವೆ. ಭಾರತೀಯ ರೈಲ್ವೆಯು ಅದಾನಿ ಲಾಜಿಸ್ಟಿಕ್ಸ್ ಸೇರಿದಂತೆ ಖಾಸಗಿ ಕಂಪೆನಿಗಳಿಗೆ ರೈಲ್ವೆ ವ್ಯವಹಾರ ನಡೆಸಲು 2007ರ ಜನವರಿಯಿಂದಲೇ ಅವಕಾಶ ನೀಡಿದೆ.

Fake News Claiming Indian Railways Will Be Sold And Called Adani Railways

Fact Check: ಕಾಂಟ್ಯಾಕ್ಟ್‌ಲೆಸ್ ಥರ್ಮಾಮೀಟರ್‌ಗಳು ಆರೋಗ್ಯಕ್ಕೆ ಹಾನಿಕರವೇ?Fact Check: ಕಾಂಟ್ಯಾಕ್ಟ್‌ಲೆಸ್ ಥರ್ಮಾಮೀಟರ್‌ಗಳು ಆರೋಗ್ಯಕ್ಕೆ ಹಾನಿಕರವೇ?

ಜಿಪಿಡಬ್ಲ್ಯೂಐಸಿ (ಸಾಮಾನ್ಯ ಉದ್ದೇಶದ ರೈಲ್ವೆ ಹೂಡಿಕೆ ಯೋಜನೆ) ಅಡಿ ಅದಾನಿ ಸಮೂಹ ಹಾಗೂ ಟಾಟಾ ಸ್ಟೀಲ್ ಸೇರಿದಂತೆ ಕಂಪೆನಿಗಳು ತಮ್ಮದೇ ರೈಲುಗಳನ್ನು ಹೊಂದಲು ಆರು ಪ್ರಸ್ತಾವಗಳಿಗೆ 2018ರಲ್ಲಿ ಭಾರತೀಯ ರೈಲ್ವೇಸ್ ಅನುಮೋದನೆ ನೀಡಿತ್ತು. ಈ ಯೋಜನೆಯಡಿ ಖನಿಜ ಹಾಗೂ ಕಲ್ಲಿದ್ದಲು ವಿನಂತಹ ಕೆಲವು ಸೀಮಿತ ಸರಕುಗಳನ್ನು ಸಾಗಿಸಲು ಕಂಪೆನಿಗಳಿಗೆ ಅನುಮತಿ ನೀಡಿದೆ. 2018ರವರೆಗೂ ಇವುಗಳನ್ನು ಭಾರತೀಯ ರೈಲ್ವೆಯೇ ಸಂಪೂರ್ಣವಾಗಿ ನಿಯಂತ್ರಿಸುವ ಮತ್ತು ನಿರ್ವಹಣೆ ಮಾಡುವ ಕೆಲಸ ಮಾಡುತ್ತಿತ್ತು.

Fact Check

ಕ್ಲೇಮು

ರೈಲ್ವೇಸ್ ಸಂಪೂರ್ಣ ಖಾಸಗೀಕರಣ ಆಗುತ್ತಿದೆ ಮತ್ತು ಅದಕ್ಕೆ ಅದಾನಿ ರೈಲ್ವೇಸ್ ಎಂಬ ಹೆಸರು ಇಡಲಾಗುತ್ತಿದೆ.

ಪರಿಸಮಾಪ್ತಿ

ರೈಲ್ವೆಯೊಂದಿಗೆ ಖಾಸಗಿ ಸಹಭಾಗಿತ್ವ ಕೆಲವು ವಿಭಾಗಗಳಲ್ಲಿ ಇರಲಿದೆ. ಆದರೆ ಸಂಪೂರ್ಣ ನಿಯಂತ್ರಣ ರೈಲ್ವೆ ಇಲಾಖೆಯದ್ದೇ ಆಗಿರಲಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Some posts claiming Indian Railways will be completely privatised and is will be changed as Adani Railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X