ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಪ್ಯಾಂಗಾಂಗ್ ಸಮುದ್ರದ ಭಾರತದ ಭೂಭಾಗದಲ್ಲಿ ಚೀನಾ ಪ್ರವಾಸಿಗರು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 09: ಚೀನಾದ ಪ್ರವಾಸಿಗರು ಪ್ಯಾಂಗಾಂಗ್ ಸಮುದ್ರದ ಭಾರತದ ಭೂಭಾಗದಲ್ಲಿದ್ದಾರೆ ಎನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿತ್ತು.

ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಜಾಮಿ ಎಂಬುವವರು ಕೂಡ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಅದಕ್ಕೆ ಚೀನಾದ ಪ್ರವಾಸಿಗರು ಲಡಾಖ್‌ನ ಪ್ಯಾಂಗಾಂಗ್ ನದಿಯ ಬಳಿ ಇದ್ದಾರೆ ಎಂದು ಶೀರ್ಷಿಕೆ ನೀಡಿದ್ದರು.

ಇನ್ನೂ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹಾಕಿಕೊಂಡಿದ್ದರು. ಭಾರತ ಮತ್ತು ಚೀನಾವು ಸಮುದ್ರವನ್ನು ಹಂಚಿಕೊಂಡಿದೆ. ರಾಷ್ಟ್ರೀಯ ಗಡಿಗಳನ್ನು ಸರೋವರದ ಮೂಲಕ ಕತ್ತರಿಸಿ ಎರಡು ಭಾಗ ಮಾಡಲಾಗಿದೆ.

ಈಗಾಗಲೇ ಲಡಾಖ್‌ನಲ್ಲಿ ಮತ್ತೊಮ್ಮೆ ಚೀನಾ ಹಾಗೂ ಭಾರತದ ನಡುವೆ ಸಂಘರ್ಷಗಳು ನಡೆದಿದೆ. ಈ ಕುರಿತು ಚೀನಾ ರಕ್ಷಣಾ ಸಚಿವರ ಬಳಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತುಕತೆ ನಡೆಸಿದ್ದಾರೆ.

135 ಕಿ.ಮೀ ಉದ್ದದ ಸರೋವರದ 45 ಕಿ.ಮೀ ಉದ್ದದ ಪಶ್ಚಿಮದ ಭಾಗವನ್ನು ಭಾರತ ನಿಯಂತ್ರಿಸಿದರೆ, ಇಳಿದವು ಚೀನಾದ ನಿಯಂತ್ರಣದಲ್ಲಿದೆ.ಇತ್ತೀಚೆಗಷ್ಟೇ ಚೀನಾವು ಪ್ಯಾಂಗಾಂಗ್ ಸರೋವರವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಅನುಮತಿ ನೀಡಿದೆ.

Fake News: Chinese Tourists At Pangong Lake Is Not From Indian Territory

ಹರಿದಾಡುತ್ತಿರುವ ವಿಡಿಯೋ ಪ್ಯಾಂಗಾಂಗ್ ಸಮುದ್ರದ ಚೀನಾದ ಭಾಗದಲ್ಲಿಯೇ ತೆಗೆದಿದ್ದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆ, ಇದು ಭಾರತದ ಭಾಗದಲ್ಲಿ ತೆಗೆದಿರುವ ವಿಡಿಯೋ ಅಲ್ಲ.

Fact Check

ಕ್ಲೇಮು

ಪ್ಯಾಂಗಾಂಗ್ ಸಮುದ್ರದ ಭಾರತದ ಭಾಗದಲ್ಲಿ ಚೀನಾದ ಪ್ರವಾಸಿಗರಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ.

ಪರಿಸಮಾಪ್ತಿ

ಪ್ಯಾಂಗಾಂಗ್ ಸಮುದ್ರದ ಚೀನಾದ ಭಾಗದಲ್ಲಿ ಇತ್ತೀಚೆಗಷ್ಟೇ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗಿದ್ದು, ಪ್ರವಾಸಿಗರು ಚೀನಾದ ಜಾಗದಲ್ಲಿಯೇ ಇದ್ದಾರೆ, ಭಾರತದ ಜಾಗದಲ್ಲಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A video has been shared claiming that Chinese tourists are in Pangong Tso.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X