ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಗಾಲ್ವಾನ್ ಕಣಿವೆಯಲ್ಲಿ ಸೈನಿಕರು ಗಣಪತಿ ಹಬ್ಬ ಆಚರಿಸಿದರೇ?

By ವಿಕಾಶ್ ಅಯ್ಯಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 31: ಭಾರತ ಮತ್ತು ಚೀನಾ ನಡುವೆ ಗಡಿ ಭಾಗದಲ್ಲಿ ಉದ್ವಿಗ್ನತೆ ಉಂಟಾಗಿದ್ದ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯ ಯೋಧರು ಇತ್ತೀಚೆಗೆ ಗಣೇಶ ಚತುರ್ಥಿ ಆಚರಣೆ ಮಾಡಿದ್ದರು ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.

'ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಗಣಪತಿ ಬಪ್ಪಾ. ಲಡಾಖ್‌ನಲ್ಲಿರುವ ನಮ್ಮ ಉತ್ಸಾಹಿ ಸೈನಿಕರಿಗೆ ಜೈ ಹಿಂದ್' ಎಂದು ಕ್ಯಾಪ್ಷನ್ ನೀಡಲಾಗಿದೆ. ಭಾರತೀಯ ಸೇನೆಯ ಸೈನಿಕರು ಡ್ರಮ್‌ಗಳನ್ನು ಬಾರಿಸುತ್ತಾ ಅದರ ಲಯಕ್ಕೆ ತಕ್ಕಂತೆ ನರ್ತಿಸುವುದನ್ನು ವಿಡಿಯೋ ತೋರಿಸುತ್ತದೆ. ಈ ವಿಡಿಯೋವನ್ನು ಟ್ವಿಟ್ಟರ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಹಂಚಿಕೊಂಡಿದ್ದು, ಭಾರತೀಯ ಸೈನಿಕರಲ್ಲಿ ಉತ್ಸಾಹ ತುಂಬಿಕೊಂಡಂತೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.

Fact Check: ಹುಬ್ಬಳ್ಳಿಯಲ್ಲಿ ಭಯೋತ್ಪಾದಕನ ಬಂಧನದ ಸುದ್ದಿFact Check: ಹುಬ್ಬಳ್ಳಿಯಲ್ಲಿ ಭಯೋತ್ಪಾದಕನ ಬಂಧನದ ಸುದ್ದಿ

ಇದು ಭಾರತೀಯ ಸೇನೆಯ ಸೈನಿಕರು ಗಣೇಶ ಚತುರ್ಥಿ ಆಚರಿಸಿದ ವಿಡಿಯೋ ಎನ್ನುವುದು ಸತ್ಯ. ಗಾಲ್ವಾನ್ ಕಣಿವೆಯಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿರುವ ಈ ವಿಡಿಯೋ ಈಗಿನದ್ದಲ್ಲ. ಇದು ಶಿಂಗೋ ನದಿ ಕಣಿವೆಯಲ್ಲಿ 2019ರಲ್ಲಿ ಸೆರೆಹಿಡಿಯಲಾಗಿದ್ದ ವಿಡಿಯೋ ಎನ್ನುವುದನ್ನು 'ಒನ್ ಇಂಡಿಯಾ' ನಡೆಸಿದ ಪರಿಶೀಲನೆ ತಿಳಿಸಿದೆ.

 Fake News Buster: Video Of Indian Army Soldiers Celebrate Ganesh Chaturthi At Galwan Valley

ಈ ವಿಡಿಯೋವನ್ನು 2019ರ ಸೆಪ್ಟೆಂಬರ್‌ನಲ್ಲಿ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಲಾಗಿತ್ತು. ಕಾರ್ಗಿಲ್ ಸಮೀಪದ ಶಿಂಗೋ ನದಿ ಕಣಿವೆ ಬಳಿ 2019ರಲ್ಲಿ ಮರಾಠಾ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟ್ ಗಣೇಶ ಚತುರ್ಥಿ ಆಚರಿಸಿದ ಸಂದರ್ಭದಲ್ಲಿ ಚಿತ್ರೀಕರಿಸಲಾದ ವಿಡಿಯೋ ಇದು. ಇಲ್ಲಿಂದ ಗಾಲ್ವಾನ್ ಕಣಿವೆ ಸುಮಾರು 229 ಕಿ.ಮೀ. ದೂರದಲ್ಲಿದೆ.

Fact Check

ಕ್ಲೇಮು

ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರು ಗಣೇಶ ಚತುರ್ಥಿ ಆಚರಿಸಿದರು.

ಪರಿಸಮಾಪ್ತಿ

ಇದು ಶಿಂಗೋ ನದಿ ಕಣಿವೆಯಲ್ಲಿ ಭಾರತೀಯ ಸೈನಿಕರು ಆಚರಿಸಿದ ಗಣೇಶ ಹಬ್ಬದ ಹಳೆಯ ವಿಡಿಯೋ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A video claiming India Army soldiers were celebrating Ganesh Chaturthi at Galwan Valley goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X