ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಡಿಸೆಂಬರ್ 1ರಿಂದ ಮತ್ತೊಂದು ಲಾಕ್‌ಡೌನ್?

|
Google Oneindia Kannada News

ನವದೆಹಲಿ, ನವೆಂಬರ್ 13: ಕೊರೊನಾ ವೈರಸ್ ಸೋಂಕು ದೇಶದ ಅನೇಕ ಕಡೆ ನಿಯಂತ್ರಣಕ್ಕೆ ಬರುತ್ತಿದ್ದರೂ, ರಾಜಧಾನಿ ದೆಹಲಿ ಸೇರಿದಂತೆ ಏಕಾಏಕಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ. ಇದರ ಜತೆಗೆ ಕೋವಿಡ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುವುದು ಮುಂದುವರಿದಿದೆ.

Fact Check: USA ಅಧ್ಯಕ್ಷರ ಪದಗ್ರಹಣದಲ್ಲಿ ಡಾ.ಮನಮೋಹನ್ ಸಿಂಗ್ ಮುಖ್ಯಅತಿಥಿFact Check: USA ಅಧ್ಯಕ್ಷರ ಪದಗ್ರಹಣದಲ್ಲಿ ಡಾ.ಮನಮೋಹನ್ ಸಿಂಗ್ ಮುಖ್ಯಅತಿಥಿ

ಕೊರೊನಾ ವೈರಸ್ ಹರಡುವುದನ್ನು ತಡೆಯಲು ಡಿಸೆಂಬರ್ 1ರಿಂದ ದೇಶದಾದ್ಯಂತ ಮತ್ತೊಂದು ಲಾಕ್‌ಡೌನ್ ಜಾರಿಗೆ ಬರಲಿದೆ ಎಂಬ ಟ್ವೀಟ್ ಒಂದು ವ್ಯಾಪಕವಾಗಿ ಹರಿದಾಡುತ್ತಿದೆ. ಈ ರೀತಿಯ ಅನೇಕ ಸುದ್ದಿಗಳು ಈ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದವು. ಡಿಸೆಂಬರ್ 1ರಿಂದ ಲಾಕ್ ಡೌನ್ ಘೋಷಣೆಯಾಗಲಿದೆ ಎಂಬುದು ಸುಳ್ಳು ಮಾಹಿತಿ ಎಂದಿರುವ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ.

Fake News Buster: Twitter User Claims Another Lockdown In India From December 1st

'ಪ್ರಮುಖ ಮಾಧ್ಯಮ ಸಂಸ್ಥೆಯೊಂದು ಪೋಸ್ಟ್ ಮಾಡಿದ್ದೆನ್ನಲಾದ ಟ್ವೀಟ್‌ನಲ್ಲಿ, ದೇಶದಾದ್ಯಂತ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರವು ರಾಷ್ಟ್ರವ್ಯಾಪಿ ಲಾಕ್‌ಡೌನ್‌ಅನ್ನು ಡಿಸೆಂಬರ್ 1ರಿಂದ ಪುನಃ ಜಾರಿಗೊಳಿಸಲಿದೆ. ಪಿಐಬಿ ಫ್ಯಾಕ್ಟ್‌ಚೆಕ್: ಈ ಟ್ವೀಟ್ ಅನ್ನು ತಿದ್ದಲಾಗಿದೆ. ಸರ್ಕಾರ ಅಂತಹ ನಿರ್ಧಾರವನ್ನು ತೆಗೆದುಕೊಂಡಿಲ್ಲ' ಎಂದು ಪಿಐಬಿ ತಿಳಿಸಿದೆ.

Fact Check: ಗಿರಿರಾಜ್ ಸಿಂಗ್ ಬಿಹಾರ ಸಿಎಂ ಆಗಲಿ ಎಂದರೇ ಪ್ರಧಾನಿ ಮೋದಿ?

Fake News Buster: Twitter User Claims Another Lockdown In India From December 1st

'ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ನರೇಂದ್ರ ಮೋದಿ ಅವರು ಮತ್ತೊಂದು ಲಾಕ್‌ಡೌನ್ ತರಲು ಮುಂದಾಗಿದ್ದಾರೆ. ಭಾರತದಲ್ಲಿ ವೇಗವಾಗಿ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಈ ಬಾರಿ ಲಾಕ್‌ಡೌನ್‌ನಲ್ಲಿ ಯಾವುದೇ ಸ್ವಾತಂತ್ರ್ಯ ಇರುವುದಿಲ್ಲ. ಇದು 2020ರ ಡಿ. 1ರಿಂದ ಜಾರಿಯಾಗಲಿದೆ' ಎಂದು ಟ್ವಿಟ್ಟರ್ ಬಳಕೆದಾರರು ಬರೆದಿದ್ದರು.

Fact Check

ಕ್ಲೇಮು

ಡಿಸೆಂಬರ್ 1ರಿಂದ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆ.

ಪರಿಸಮಾಪ್ತಿ

ಡಿ. 1ರಿಂದ ಯಾವುದೇ ಲಾಕ್‌ಡೌನ್ ಜಾರಿಯಾಗುವುದಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A Twitter user claimed government will impose another nationwide lockdown from December 1st. Here is the fact.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X