ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ರೈತ ತಂದೆಯ ಭೇಟಿಗಾಗಿ ದೆಹಲಿ ಗಡಿಗೆ ಯೋಧ ಧಾವಿಸಿದ್ದು ನಿಜವೇ?

|
Google Oneindia Kannada News

ನವದೆಹಲಿ, ಫೆಬ್ರವರಿ 8: ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಸುತ್ತಲೂ ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಯುವ ಸಿಖ್ ಯೋಧನೊಬ್ಬನನ್ನು ವ್ಯಕ್ತಿಯೊಬ್ಬರು ಆಲಂಗಿಸುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳಿಂದ ವೈರಲ್ ಆಗಿದೆ. ಇದು ರೈತರು ಪ್ರತಿಭಟನೆ ಸ್ಥಳದ ದೃಶ್ಯ ಎಂದು ಹೇಳಲಾಗುತ್ತಿದೆ.

ದೆಹಲಿ ಗಡಿಯಲ್ಲಿ ಸುಮಾರು 75 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತ ತಂದೆಯನ್ನು ಭೇಟಿ ಮಾಡಲು ದೇಶದ ಗಡಿಯಲ್ಲಿ ಕಾವಲು ಕಾಯುತ್ತಿರುವ ಯೋಧ ಧಾವಿಸಿ ಬಂದಿದ್ದ. ಆ ಸಂದರ್ಭದ ಭಾವನಾತ್ಮಕ ಘಟನೆಯ ಚಿತ್ರಣವಿದು ಎಂದು ಈ ಫೋಟೊ ಹಂಚಿಕೊಂಡು ಮಾಹಿತಿ ನೀಡಲಾಗುತ್ತಿದೆ.

Fact Check: ರೈತರ ಪ್ರತಿಭಟನೆ ವೇಳೆ ರಿಲಾಯನ್ಸ್ ಜಿಯೋ ಟವರ್ ಸುಟ್ಟು ಭಸ್ಮ? Fact Check: ರೈತರ ಪ್ರತಿಭಟನೆ ವೇಳೆ ರಿಲಾಯನ್ಸ್ ಜಿಯೋ ಟವರ್ ಸುಟ್ಟು ಭಸ್ಮ?

ಈ ಫೋಟೊದಲ್ಲಿನ ವ್ಯಕ್ತಿಗಳ ಹಿಂದೆ ಇರುವ ಫಲಕದಲ್ಲಿ ಶಿಪ್ಪಿಂಗ್ ಕಂಪೆನಿ ಫೆಡ್‌ಎಕ್ಸ್‌ನ ಚಿತ್ರ ಕಾಣಿಸುತ್ತದೆ. ಅದರಲ್ಲಿ ಇನ್ನೂ ಒಂದು ಫಲಕವಿದ್ದು, ಅದರಲ್ಲಿ 'ಪಾರ್ಕಿಂಗ್ ಬಸ್‌ ಸ್ಟ್ಯಾಂಡ್' ಎಂದು ಬರೆಯಲಾಗಿದೆ. ಈ ಸ್ಥಳ ಇರುವುದು ದೆಹಲಿಯಲ್ಲಿ ಅಲ್ಲ, ಪಂಜಾಬ್‌ನ ಲೂಧಿಯಾನಾದಲ್ಲಿ ಎನ್ನುವುದು ಸ್ಪಷ್ಟವಾಗಿದೆ. ಪಾರ್ಕಿಂಗ್ ಬಸ್ ಸ್ಟ್ಯಾಂಡ್ ಫಲಕದಲ್ಲಿ 'ಲೂಧಿಯಾನಾ' ಎಂದು ಬರೆದಿರುವುದು ಕಾಣಿಸುತ್ತದೆ. ಅದೇ ರೀತಿ ಪಂಜಾಬಿಯಲ್ಲಿ ಬರೆಯ ಇತರೆ ಫಲಕಗಳೂ ಕಾಣಿಸುತ್ತವೆ.

Fake News Buster: This Soldier Did Not Rush To Delhi Border To Meet His Farmer Father

ಹೀಗಾಗಿ ಇದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವಂತೆ ದೆಹಲಿ ಗಡಿಯಲ್ಲಿನ ಫೋಟೊ ಅಲ್ಲ ಎನ್ನುವುದು ಖಚಿತವಾಗಿದೆ. ಆದರೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಪಾದಿಸುತ್ತಿರುವಂತೆ ಪ್ರತಿಭಟನಾನಿರತ ರೈತ ತಂದೆಯನ್ನು ನೋಡಲು ಸೈನಿಕ ಧಾವಿಸಿ ಬಂದಿದ್ದ ನಿಜವೇ ಎನ್ನುವುದು ದೃಢಪಟ್ಟಿಲ್ಲ. ಈ ಫೋಟೊದಲ್ಲಿ ಕಾಣಿಸಿರುವ ಇಬ್ಬರು ಯೋಧರ ಗುರುತು ಸ್ಪಷ್ಟವಾಗಿಲ್ಲ.

Fact Check

ಕ್ಲೇಮು

ಪ್ರತಿಭಟನೆ ನಡೆಸುತ್ತಿರುವ ರೈತ ತಂದೆಯನ್ನು ಭೇಟಿ ಮಾಡಲು ದೆಹಲಿ ಗಡಿಗೆ ಯೋಧ ಧಾವಿಸಿ ಬಂದಿದ್ದಾನೆ.

ಪರಿಸಮಾಪ್ತಿ

ಈ ಚಿತ್ರಗಳು ದೆಹಲಿಯದ್ದಲ್ಲ, ಲೂಧಿಯಾನಾದ್ದು

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A viral image of a soldier claiming he rushed to Delhi border to meet his father who is protesting against farm laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X