ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಈ ಭಯಾನಕ ವಿಡಿಯೋ ಶಿವಮೊಗ್ಗದ ಸ್ಫೋಟದ್ದಲ್ಲ

|
Google Oneindia Kannada News

ಬೆಂಗಳೂರು, ಜನವರಿ 22: ಶಿವಮೊಗ್ಗದ ಹೊರವಲಯದ ಅಬ್ಬಲಗೆರೆಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ಡೈನಾಮೈಟ್ ಸ್ಫೋಟಗೊಂಡು ಭಾರಿ ದುರಂತ ಸಂಭವಿಸಿದೆ. ಅದೇ ಸಮಯದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಅನೇಕ ಕಡೆ ಸದ್ದು ಹಾಗೂ ಭೂಮಿ ಕಂಪನದ ಅನುಭವ ಆಗಿದೆ. ಭೂಮಿ ಕಂಪಿಸಿದ ಘಟನೆಗೂ, ಈ ಸ್ಫೋಟಕ್ಕೂ ಸಂಬಂಧವಿದೆಯೇ ಅಥವಾ ಎರಡೂ ಬೇರೆ ಬೇರೆ ಘಟನೆಗಳೇ ಎನ್ನುವುದು ಸ್ಪಷ್ಟವಾಗಿಲ್ಲ.

ಈ ನಡುವೆ ಗುರುವಾರ ರಾತ್ರಿ 10.20ರ ಸುಮಾರಿಗೆ ನಡೆದ ಘಟನೆಯ ಕುರಿತು ಅನೇಕ ಊಹಾಪೋಹಗಳಿಉ ಹರಿದಾಡುತ್ತಿವೆ. ಘಟನೆ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಅಲ್ಲಿನ ಜನತೆ ರಸ್ತೆಗೆ ಓಡಿಬರುವ, ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು, ರಸ್ತೆ ಬಿರುಕು ಬಿಟ್ಟಿರುವ ಫೋಟೊಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಮುಂತಾದ ಕಡೆ ಹರಿದಾಡತೊಡಗಿದವು. ಈ ಫೋಟೊ ಹಾಗೂ ವಿಡಿಯೋಗಳಲ್ಲಿ ಅನೇಕ ನಕಲಿ ವಿಡಿಯೋಗಳು ಕೂಡ ಸೇರಿಕೊಳ್ಳುತ್ತಿವೆ.

ಭೂಕಂಪನದ ಅನುಭವವಾದ ಅರ್ಧಗಂಟೆಯಲ್ಲಿಯೇ ವಾಟ್ಸಾಪ್‌ನಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಇದನ್ನು ಈಗಲೇ ಜನರು ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಭೂಕಂಪನದ ವೇಳೆ ರಸ್ತೆಯೊಂದು ಕಂಪಿಸಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳು ಅಲ್ಲಾಡಿರುವುದು ಮತ್ತು ಭಾರಿ ಸ್ಫೋಟದ ಸದ್ದು ಸೆರೆಯಾದ ಸಿಸಿಟಿವಿ ವಿಡಿಯೋವೊಂದು ವೈರಲ್ ಆಗಿದೆ. ಈ ಬಗ್ಗೆ 'ಒನ್ ಇಂಡಿಯಾ ಕನ್ನಡ' ನಡೆಸಿದ ಫ್ಯಾಕ್ಟ್ ಚೆಕ್ ಪರೀಕ್ಷೆಯಲ್ಲಿ, ಈ ವಿಡಿಯೋದ ಸತ್ಯಾಸತ್ಯತೆ ಬಯಲಾಗಿದೆ. ಮುಂದೆ ಓದಿ.

ಇದು ಭಾರತದ್ದೇ ಅಲ್ಲ

ಇದು ಭಾರತದ್ದೇ ಅಲ್ಲ

ಶಿವಮೊಗ್ಗದಲ್ಲಿ ಸಂಭವಿಸಿದ ಭಯಾನಕ ಸ್ಫೋಟ ಮತ್ತು ಭೂಕಂಪನದ ವಿಡಿಯೋ ಎಂದು ಅನೇಕರು ಇದನ್ನು ಫಾರ್ವರ್ಡ್ ಮಾಡುತ್ತಿದ್ದಾರೆ. ಇದು ಭೀಕರ ಸ್ಫೋಟ ಮತ್ತು ಭೂಮಿ ಕಂಪಿಸಿದ ವಿಡಿಯೋ ಎನ್ನುವುದು ನಿಜ. ಆದರೆ ಇದು ಶಿವಮೊಗ್ಗದಲ್ಲ. ವಾಸ್ತವವಾಗಿ ಭಾರತದ ವಿಡಿಯೋ ಕೂಡ ಅಲ್ಲ. ಹಾಗೆಯೇ ಇದು ಸುಮಾರು ಮೂರು ವರ್ಷಗಳಷ್ಟು ಹಳೆಯದು.

2017ರಲ್ಲಿ ಇರಾನ್‌ನಲ್ಲಿ ಸಂಭವಿಸಿದ ಭೂಕಂಪ

ಈ ಘಟನೆಯ ಮೂಲ ಇರಾನ್. ಇರಾನ್ ರಾಜಧಾನಿ ಟೆಹ್ರಾನ್ ಸಮೀಪದ ಮಲ್ಲಾರ್ಡ್ ಎಂಬಲ್ಲಿ 2017ರ ಡಿಸೆಂಬರ್‌ನಲ್ಲಿ ಸಂಭವಿಸಿದ ರಿಕ್ಟರ್ ಮಾಪನದಲ್ಲಿ 5.2 ತೀವ್ರತೆಯ ಭೂಕಂಪನದ ವೇಳೆ ಕೆಲವು ಸೆಕೆಂಡುಗಳಷ್ಟು ಕಾಲ ಭೂಮಿ ಕಂಪಿಸಿತ್ತು.

ಇರಾನ್‌ನ ಐಆರ್‌ಐಬಿ ಸುದ್ದಿವಾಹಿನಿ

ಇರಾನ್‌ನ ಐಆರ್‌ಐಬಿ ಸುದ್ದಿವಾಹಿನಿ

ಇರಾನ್‌ನ ಐಆರ್‌ಐಬಿ ನ್ಯೂಸ್ (ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್) ಎಂಬ ಸುದ್ದಿ ವಾಹಿನಿ ಈ ವಿಡಿಯೋವನ್ನು ಪ್ರಸಾರ ಮಾಡಿತ್ತು. ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿಯೂ ಈ ವಾಹಿನಿಯ ಲೋಗೋ ಕಾಣಿಸುತ್ತದೆ. ಯೂಟ್ಯೂಬ್‌ನಲ್ಲಿಯೂ ಈ ವಿಡಿಯೋ ಲಭ್ಯವಿದ್ದು, ಸಾರಾ ಸಿ ಎಂಬ ಖಾತೆದಾರರು 2017ರ ಡಿಸೆಂಬರ್ 26ರಂದು 'ಭೂಕಂಪನಕ್ಕೂ ಮುನ್ನ ಕೆಲವು ಸೆಕೆಂಡುಗಳ ಭಯಾನಕ ಸದ್ದು' ಎಂಬ ಶೀರ್ಷಿಕೆಯಡಿ ಅದನ್ನು ಪೋಸ್ಟ್ ಮಾಡಿದ್ದರು.

ಘಟನೆಯ ಸಮಯ ಸ್ಪಷ್ಟ

ಘಟನೆಯ ಸಮಯ ಸ್ಪಷ್ಟ

ಶಿವಮೊಗ್ಗದಲ್ಲಿ ರಾತ್ರಿ 10.20 ಸುಮಾರಿಗೆ ಸ್ಫೋಟ ಹಾಗೂ ಭೂಕಂಪನದ ಅನುಭವವಾಗಿದೆ. ಆದರೆ ಇಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ದಾಖಲಾಗಿರುವುದು ರಾತ್ರಿ 11.27ರ ಸಮಯ. ಐಆರ್‌ಬೈಬಿ ನ್ಯೂಸ್ ಎಂಬ ಲೋಗೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಉರ್ದು ಭಾಷೆಯಲ್ಲಿಯೂ ಹೆಸರು ಕಾಣಿಸುತ್ತದೆ. ಅದು ಕಾಣಿಸದಂತೆ ಲೋಗೋದ ಮೇಲೆ ಸ್ಟಿಕ್ಕರ್ ಒಂದನ್ನು ಅಂಟಿಸಿದ ಮತ್ತೊಂದು ವಿಡಿಯೋವನ್ನು ಕೂಡ ಹರಿಬಿಡಲಾಗಿದೆ. ಹೀಗಾಗಿ ಈ ವಿಡಿಯೋ ಶಿವಮೊಗ್ಗದ್ದಲ್ಲ ಎನ್ನುವುದು ಸ್ಪಷ್ಟವಾಗಿದೆ.

ರಸ್ತೆ ಬಿರುಕು ಶಿವಮೊಗ್ಗದ್ದಲ್ಲ

ರಸ್ತೆ ಬಿರುಕು ಶಿವಮೊಗ್ಗದ್ದಲ್ಲ

ಹಾಗೆಯೇ ಭೂಮಿ ಕಂಪಿಸಿದ ನಂತರ ಗೋಡೆಗಳು, ರಸ್ತೆಗಳು ಬಿರುಕು ಬಿಟ್ಟ ಫೋಟೊಗಳು ಕೂಡ ಹಂಚಿಕೆಯಾಗುತ್ತಿವೆ. ಇದರಲ್ಲಿ ಡಾಂಬರು ರಸ್ತೆಯೊಂದು ಸಾಕಷ್ಟು ಉದ್ದದವರೆಗೂ ಬಿರುಕುಬಿಟ್ಟ ಫೋಟೊ ವೈರಲ್ ಆಗಿದೆ. ಆದರೆ ಈ ಫೋಟೊ ಮುಂಬೈನ ಗ್ರ್ಯಾಂಟ್ ರೋಡ್ ಸ್ಟೇಷನ್‌ನ ಸೇತುವೆಯೊಂದರಲ್ಲಿ ಉಂಟಾದ ಬಿರುಕಿನದ್ದು. 2018ರ ಜುಲೈ 4ರಂದು ಸೇತುವೆ ಬಿರುಕುಬಿಟ್ಟ ಬಗ್ಗೆ ಎನ್‌ಡಿಟಿವಿ ವರದಿ ಪ್ರಕಟಿಸಿತ್ತು. ಆದರೆ ಇದು ಶಿವಮೊಗ್ಗದ ರಸ್ತೆಯ ಬಿರುಕು ಎಂದು ಅನೇಕರು ಫೋಟಿ ಹಂಚಿಕೊಳ್ಳುತ್ತಿದ್ದು, ಕೆಲವು ಸುದ್ದಿವಾಹಿನಿಗಳು ಕೂಡ ಆ ಫೋಟೊ ಬಳಸಿಕೊಂಡಿವೆ.

Fact Check

ಕ್ಲೇಮು

ಈ ವಿಡಿಯೋ ಶಿವಮೊಗ್ಗದ ಭೂಕಂಪನದ ಘಟನೆಯ ಭಯಾನಕ ದೃಶ್ಯ

ಪರಿಸಮಾಪ್ತಿ

ಇದು ಶಿವಮೊಗ್ಗದಲ್ಲಿ ಸಂಭವಿಸಿದ ಘಟನೆಯ ವಿಡಿಯೋವಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A CCTV video of earthquake goes viral after a blast in Shivamogga. This video is not related anywhere to Shivamogga incident and it was captured in Iran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X