• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಭಾರತೀಯ ಸೇನೆ ಮೇಲೆ ಚೀನಾದಿಂದ ಮೈಕ್ರೋವೇವ್ ಶಸ್ತ್ರ ಬಳಕೆ

|

ನವದೆಹಲಿ, ನವೆಂಬರ್ 18: ಚೀನಾದ ಪಿಎಲ್‌ಎ ಸೇನೆಯು ಭಾರತೀಯ ಸೈನಿಕರನ್ನು ಗಡಿ ವಾಸ್ತವ ನಿಯಂತ್ರಣ ರೇಖೆಯಿಂದ ಹಿಮ್ಮೆಟ್ಟಿಸಲು ಮೈಕ್ರೋವೇವ್ ಶಸ್ತ್ರಗಳನ್ನು ಬಳಸಿದ್ದಾರೆ ಎಂದು ವಿವಿಧ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಮಾಧ್ಯಮಗಳ ಜತೆಗೆ ಮಾತನಾಡಿದ ಬೀಜಿಂಗ್‌ನ ರೆನ್‌ಮಿನ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಂಬಂಧಗಳ ಪ್ರೊಫೆಸರ್ ಜಿನ್ ಕಾನ್ರೊಂಗ್, ಎನರ್ಜಿ ವೆಪನ್‌ಗಳನ್ನು ಬಳಸಿ ಆಗಸ್ಟ್ 29ರಂದು ಭಾರತದ ಸೈನಿಕರು ಆಕ್ರಮಿಸಿದ್ದ ಎರಡು ಯುದ್ಧತಂತ್ರ ಪರ್ವತ ಪ್ರದೇಶಗಳನ್ನು ಮೈಕ್ರವೇವ್ ಓವನ್‌ಗಳಾಗಿ ಪರಿವರ್ತಿಸಿದ್ದರು ಎಂದು ಹೇಳಿದ್ದಾರೆ.

Fact Check: ಭಾರತ ಮೂಲದ ವ್ಯಕ್ತಿ ಬೈಡನ್ ರಾಜಕೀಯ ಸಲಹೆಗಾರ

ಈ ಎರಡೂ ಪರ್ವತ ಪ್ರದೇಶಗಳಲ್ಲಿದ್ದ ಭಾರತದ ಸೈನಿಕರು ವಾಂತಿ ಮಾಡಿಕೊಳ್ಳಲು ಆರಂಭಿಸಿ ಅಲ್ಲಿಂದ ಅನಿವಾರ್ಯವಾಗಿ ಹಿಂದಕ್ಕೆ ಸರಿದಿದ್ದರು. ಹೀಗಾಗಿ ಚೀನಾದ ಪಡೆಗಳು ಸಾಂಪ್ರದಾಯಿಕ ಗುಂಡಿನ ಚಕಮಕಿ ನಡೆಸದೆಯೇ ಅವುಗಳನ್ನು ತಮ್ಮ ಮರುವಶಪಡಿಸಿಕೊಳ್ಳಲು ಸಾಧ್ಯವಾಗಿತ್ತು ಎಂದು ತಿಳಿಸಿದ್ದಾರೆ.

ಆದರೆ ಈ ಹೇಳಿಕೆ ಸುಳ್ಳು ಎಂದು ಭಾರತೀಯ ಸೇನೆ ಹೇಳಿದೆ. ಅದು ಸುಳ್ಳು ಮತ್ತು ಹಾಸ್ಯಾಸ್ಪದ ಹೇಳಿಕೆ. ಇದು ಗಡಿಯಲ್ಲಿನ ಮಾನಸಿಕ ಕಾರ್ಯಾಚರಣೆಗಳ ಭಾಗ. ಆಗಸ್ಟ್ 29-30ರಂದು ಪ್ಯಾಂಗೊಂಗ್ ತ್ಸೊ-ಚುಶುಲ್ ದಕ್ಷಿಣ ತೀರದಲ್ಲಿನ ವಿವಿಧ ಕೈಲಾಶ್ ಎತ್ತರದ ಪರ್ವತ ಪ್ರದೇಶಗಳನ್ನು ಭಾರತೀಯ ಪಡೆಗಳು ಆಕ್ರಮಿಸಿಕೊಂಡಿದ್ದರ ಆಘಾತದಿಂದ ಚೀನಾ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

Fact Check: ಡಿಸೆಂಬರ್ 1ರಿಂದ ಮತ್ತೊಂದು ಲಾಕ್‌ಡೌನ್?

ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಇನ್ನೂ ಉದ್ವಿಗ್ನ ವಾತಾವರಣ ಇದೆ. ಗಡಿ ಬಿಕ್ಕಟ್ಟು ಏಳನೇ ತಿಂಗಳಿಗೆ ಕಾಲಿರಿಸಿದೆ. ಎರಡೂ ದೇಶಗಳು ತಮ್ಮ ಪಡೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಸಂಬಂಧ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿವೆ. ಕಳೆದ ವಾರ ಉಭಯ ದೇಶಗಳು ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯತಂತ್ರದ ಬಗ್ಗೆ ಸಕಾರಾತ್ಮಕ ಸುದ್ದಿ ಬಂದಿತ್ತು. ಶೀಘ್ರದಲ್ಲಿಯೇ ಎರಡೂ ದೇಶಗಳ ಸೇನಾ ಕಮಾಂಡರ್‌ಗಳು ಸಭೆ ನಡೆಸಿ ಈ ವಿಚಾರವಾಗಿ ಅಂತಿಮ ನಿರ್ಧಾರಕ್ಕೆ ಬರಲಿವೆ ಎಂದು ಹೇಳಲಾಗಿದೆ.

Fact Check

ಕ್ಲೇಮು

ಭಾರತೀಯ ಸೇನೆ ವಿರುದ್ಧ ಚೀನಾ ಪಿಎಲ್‌ಎ ಮೈಕ್ರೋವೇವ್ ಶಸ್ತ್ರಗಳನ್ನು ಬಳಸಿತ್ತು.

ಪರಿಸಮಾಪ್ತಿ

ಪರಿಸಮಾಪ್ತಿ: ಈ ಹೇಳಿಕೆ ಸುಳ್ಳು ಎಂದು ಭಾರತೀಯ ಸೇನೆ ತಿಳಿಸಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
Fact Check: The Chinese PLA had used microwave arms against Indian soldiers at LAC in August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X