ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಬಿಜೆಪಿಗೆ 35 ಕೋಟಿ ರೂ ಚೆಕ್ ನೀಡಿದ ವಿಜಯ್ ಮಲ್ಯ

|
Google Oneindia Kannada News

ನವದೆಹಲಿ, ಜನವರಿ 5: ಆಕ್ಸಿಸ್ ಬ್ಯಾಂಕ್‌ನ ಚೆಕ್ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. 35 ಕೋಟಿ ರೂ ಮೌಲ್ಯದ ಆ ಚೆಕ್ ಅನ್ನು ಉದ್ಯಮಿ ವಿಜಯ್ ಮಲ್ಯ ಬಿಜೆಪಿಗೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಆ ಚೆಕ್‌ನ ಕೆಳಭಾಗದಲ್ಲಿ ಮಲ್ಯ ಅವರ ಸಹಿಯೂ ಕಾಣಿಸುತ್ತದೆ.

ನವೆಂಬರ್ 8, 2016ರ ದಿನಾಂಕವನ್ನು ಚೆಕ್‌ನಲ್ಲಿ ನಮೂದಿಸಲಾಗಿದೆ. ಭಾರತದಿಂದ ಪರಾರಿಯಾಗುವುದಕ್ಕೂ ಮುನ್ನ ವಿಜಯ್ ಮಲ್ಯ ಬಿಜೆಪಿಗೆ 35 ಕೋಟಿ ರೂ ಮೊತ್ತದ ಚೆಕ್ ಬರೆದು ಕೊಟ್ಟಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಆರೋಪಿಸಿದ್ದಾರೆ. 'ಅಗ್ ಬನಿ ಎಂಬ ಫೇಸ್‌ಬುಕ್ ಪುಟದಲ್ಲಿ ಪಂಜಾಬಿ ಕ್ಯಾಪ್ಷನ್ ಜತೆಗೆ ಈ ಫೋಟೊ ಪೋಸ್ಟ್ ಮಾಡಲಾಗಿದೆ. ಅದು 66 ಸಾವಿರಕ್ಕೂ ಅಧಿಕ ಶೇರ್‌ಗಳನ್ನು ಕಂಡಿದೆ.

Fact Check: ಕೇರಳದಲ್ಲಿ ರಿಲಯನ್ಸ್ ಜಿಯೋ ಇಂಟರ್‌ನೆಟ್ ನಿಷೇಧFact Check: ಕೇರಳದಲ್ಲಿ ರಿಲಯನ್ಸ್ ಜಿಯೋ ಇಂಟರ್‌ನೆಟ್ ನಿಷೇಧ

'ರಮಾಜ್ ಪಂಜಾಬ್ ಡಿ' ಎಂಬ ಮತ್ತೊಂದು ಫೇಸ್‌ಬುಕ್ ಪುಟ ಕೂಡ ಈ ಫೋಟೊ ಹಂಚಿಕೊಂಡು ಇದೇ ಆರೋಪವನ್ನು ಮಾಡಿದೆ. ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಈ ಫೋಟೊ ವೈರಲ್ ಆಗಿದೆ. ಆದರೆ ಈ ಫೋಟೊ ನಕಲಿ ಎನ್ನುವುದು ಸಾಬೀತಾಗಿದೆ. ಮುಂದೆ ಓದಿ.

ಮೊದಲೇ ಪರಾರಿಯಾಗಿದ್ದ ಮಲ್ಯ

ಮೊದಲೇ ಪರಾರಿಯಾಗಿದ್ದ ಮಲ್ಯ

ಈ ಚೆಕ್ 2016ರ ನವೆಂಬರ್ 8ರ ದಿನಾಂಕ ಹೊಂದಿದೆ. ಆದರೆ ವಿವಿಧ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂ ಸಾಲ ಪಡೆದು ಮರುಪಾವತಿಸದೆ ವಿಜಯ್ ಮಲ್ಯ ಅವರು 2016ರ ಮಾರ್ಚ್ 2ರಂದೇ ದೇಶದಿಂದ ಪರಾರಿಯಾಗಿದ್ದರು.

ಬಿಜೆಪಿ ಹೆಸರು ತಪ್ಪು

ಬಿಜೆಪಿ ಹೆಸರು ತಪ್ಪು

ಚೆಕ್‌ನಲ್ಲಿ ನಮೂದಿಸಲಾಗಿರುವ ಬಿಜೆಪಿಯ ವಿಸ್ತೃತ ರೂಪ ತಪ್ಪಾಗಿದೆ. ಭಾರತೀಯ ಜನತಾ ಪಾರ್ಟಿ ಎಂದು ಅದರಲ್ಲಿ ಇಲ್ಲ. ಬದಲಾಗಿ 'ಭಾರತೀಯ ಜಂತಾ ಪಾರ್ಟಿ' ಎಂದಾಗಿದೆ. ವಿಜಯ್ ಮಲ್ಯ ಅವರೇ ಬರೆದ ಚೆಕ್ ಇದಾಗಿದ್ದರೆ ಈ ತಪ್ಪು ಇರಲು ಸಾಧ್ಯವಿರುತ್ತಿರಲಿಲ್ಲ.

Fact check: ಸಿಬಿಎಸ್‌ಇ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ?Fact check: ಸಿಬಿಎಸ್‌ಇ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ?

ಕಂಪೆನಿ ಮಾಲೀಕರು ಬೇರೆ

ಕಂಪೆನಿ ಮಾಲೀಕರು ಬೇರೆ

ಚೆಕ್‌ನ ಮಧ್ಯಭಾಗದಲ್ಲಿ ಎರಡು ಉದ್ದ ಗೆರೆಗಳನ್ನು ಚಿಕ್ಕದಾಗಿ ಎಳೆದಿರುವುದು ಕಾಣಿಸುತ್ತದೆ. ಚೆಕ್ ಬರೆಯುವಾಗ ಸಾಮಾನ್ಯವಾಗಿ ಈ ರೀತಿ ಗೆರೆಗಳನ್ನು ಎಳೆಯುವುದಿಲ್ಲ.

ಈ ಚೆಕ್‌ಅನ್ನು ಗ್ಲಾಮರ್ ಸ್ಟೀಲ್ಸ್ ಪ್ರೈ ಲಿಮಿಟೆಡ್ ಪರವಾಗಿ ವಿತರಿಸಲಾಗಿತ್ತು. ಆ ಕಂಪೆನಿಯ ನಿರ್ದೇಶಕರು ಅಮಿತ್ ಕುಮಾರ್ ಸಕ್ಸೇನಾ ಮತ್ತು ಮುಕೇಶ್ ಕುಮಾರ್.

ವಿಜಯ್ ಮಲ್ಯ ಸಹಿ ನಕಲಿ

ವಿಜಯ್ ಮಲ್ಯ ಸಹಿ ನಕಲಿ

ಚೆಕ್‌ನಲ್ಲಿರುವ ವಿಜಯ್ ಮಲ್ಯ ಅವರ ಸಹಿ ಕೂಡ ನಕಲಿ. ಅವರ ಮೂಲ ಸಹಿಗೂ ಚೆಕ್‌ನಲ್ಲಿರುವ ಸಹಿಗೂ ಸಾಕಷ್ಟು ವ್ಯತ್ಯಾಸವಿದೆ. ಮಲ್ಯ ಅವರು 2018ರ ಜೂನ್‌ನಲ್ಲಿ ಮಾಡಿದ್ದ ಟ್ವೀಟ್‌ಗಳಲ್ಲಿ ಅವರ ನೈಜ ಸಹಿಯನ್ನು ನೋಡಬಹುದಾಗಿತ್ತು.

ಎಎಪಿ ಚೆಕ್ ಆರೋಪಕ್ಕೂ ಸಾಮ್ಯತೆ

ಎಎಪಿ ಚೆಕ್ ಆರೋಪಕ್ಕೂ ಸಾಮ್ಯತೆ

ಇದೇ ರೀತಿಯ ಚೆಕ್‌ಗಳನ್ನು ಆಮ್ ಆದ್ಮಿ ಪಕ್ಷಕ್ಕೆ ನೀಡಲಾಗಿತ್ತು ಎಂದು 2017ರ ಮೇ ತಿಂಗಳಲ್ಲಿ ಎಎಪಿ ಮುಖಂಡ ಕಪಿಲ್ ಮಿಶ್ರಾ ಆರೋಪಿಸಿದ್ದರು. ಅದರಲ್ಲಿ ಒಂದು ಆಕ್ಸಿಸ್ ಬ್ಯಾಂಕ್ ಚೆಕ್ ಕೂಡ ಇತ್ತು. ಮಿಶ್ರಾ ಪ್ರದರ್ಶಿಸಿದ್ದ ಚೆಕ್ ಹಾಗೂ ವೈರಲ್ ಆದ ಫೋಟೊಗಳೂ ಒಂದೇ ರೀತಿ ಇದೆ. ಆಮ್ ಆದ್ಮಿ ಪಕ್ಷಕ್ಕೆ ನೀಡಿದ್ದ ಚೆಕ್‌ನಲ್ಲಿ ದಿನಾಂಕ ನಮೂದಾಗಿರಲಿಲ್ಲವಷ್ಟೇ. ಮುಖ್ಯವಾಗಿ 35,00,00,000 ಕೋಟಿ ಎಂದು ಅಕ್ಷರ ಹಾಗೂ ಸಂಖ್ಯೆಗಳಲ್ಲಿ ನಮೂದಿಸಿರುವುದು ಎರಡರಲ್ಲಿಯೂ ಒಂದೇ ರೀತಿ ಇದೆ.

Fact Check

ಕ್ಲೇಮು

ವಿಜಯ್ ಮಲ್ಯ ಅವರು 2016 ನವೆಂಬರ್‌ನಲ್ಲಿ 35 ಕೋಟಿ ರೂ. ಚೆಕ್ ಅನ್ನು ಬಿಜೆಪಿಗೆ ನೀಡಿದ್ದರು.

ಪರಿಸಮಾಪ್ತಿ

ವಿಜಯ್ ಮಲ್ಯ ಬಿಜೆಪಿಗೆ ಚೆಕ್ ನೀಡಿದ್ದರು ಎನ್ನಲಾದ ಚಿತ್ರ ನಕಲಿ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: An image being circulated on social media that Rs 35 crore cheque paid by Vijay Mallya to BJP is fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X