ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ನೀಟ್-ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ?

|
Google Oneindia Kannada News

ನವದೆಹಲಿ, ಏಪ್ರಿಲ್ 6: ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನೀಟ್ - ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಿದೆ ಎಂಬ ಸುತ್ತೋಲೆಯೊಂದು ಹರಿದಾಡುತ್ತಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಜತೆಗಿನ ಮಾತುಕತೆಯ ಬಳಿಕ ನೀಟ್-ಪಿಜಿ 2021ರ ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಸರ್ಕಾರದ ಜತೆಗಿನ ಸಮಾಲೋಚನೆ ನಂತರ ಸಿದ್ಧತೆ ನಡೆಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಆದರೆ ಇದು ಸತ್ಯವಲ್ಲ. ರಾಷ್ಟ್ರೀಯ ಪರೀಕ್ಷಾ ಮಂಡಳಿ ಈ ರೀತಿಯ ಯಾವುದೇ ನೋಟಿಸ್‌ಗಳನ್ನು ಬಿಡುಗಡೆ ಮಾಡಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟನೆ ನೀಡಿದೆ.

ಆಗಸ್ಟ್ 1ರಂದು 11 ಭಾಷೆಗಳಲ್ಲಿ ನೀಟ್ ಪರೀಕ್ಷೆ: ವೇಳಾಪಟ್ಟಿ ಪ್ರಕಟಿಸಿದ ಎನ್‌ಟಿಎ ಆಗಸ್ಟ್ 1ರಂದು 11 ಭಾಷೆಗಳಲ್ಲಿ ನೀಟ್ ಪರೀಕ್ಷೆ: ವೇಳಾಪಟ್ಟಿ ಪ್ರಕಟಿಸಿದ ಎನ್‌ಟಿಎ

ಏಪ್ರಿಲ್ 5ರ ದಿನಾಂಕವನ್ನು ನಮೂದಿಸಿರುವ ಈ ಸುತ್ತೋಲೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ನೋಟಿಸ್ ಅನ್ನು ತಿದ್ದಿ ಬದಲಿಸಲಾಗಿದೆ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ತನ್ನ ಫ್ಯಾಕ್ಟ್ ಚೆಕ್ ಖಾತೆಯಲ್ಲಿ ತಿಳಿಸಿದೆ.

Fake News Buster: Morphed Notice Claims NEET-PG 2021 Deferred By NBE Till Further Notice

ಎನ್‌ಎಂಸಿ ಜತೆಗಿನ ಮಾತುಕತೆಯ ಬಳಿಕ ನೀಟ್-ಪಿಜಿ 2021 ಪರೀಕ್ಷೆಗಳನ್ನು ಮುಂದಿನ ಸೂಚನೆಯವರೆಗೆ ಮುಂದೂಡಲಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಆದರೆ ಎನ್‌ಬಿಇ ಈ ರೀತಿಯ ಯಾವುದೇ ನೋಟಿಸ್ ಬಿಡುಗಡೆ ಮಾಡಿಲ್ಲ. ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಕೂಡ ಇದರ ಬಗ್ಗೆ ವಿವರಗಳಿಲ್ಲ. ಏಪ್ರಿಲ್ 5ರಂದು ಎನ್‌ಬಿಇ ಒಂದು ನೋಟಿಸ್ ಬಿಡುಗಡೆ ಮಾಡಿದ್ದು, ಅದು ಭಾರತದ ವಿವಿಧ ಭಾಗಗಳಲ್ಲಿ ಅಂತರ್ಜಾಲ ಸಮಸ್ಯೆಯ ಕಾರಣದಿಂದಾಗಿ ನೀಟ್-ಪಿಜಿ 2021ರ ಪರೀಕ್ಷೆಯ ಅಂತಿಮ ಸಂಪಾದನೆ ಗವಾಕ್ಷಿಯನ್ನು ವಿಸ್ತರಣೆ ಮಾಡಿರುವ ಮಾಹಿತಿಯನ್ನು ಒಳಗೊಂಡಿದೆ.

ಅರ್ಜಿಯಲ್ಲಿ ಅಪ್ಲೋಡ್ ಮಾಡಿದ ಚಿತ್ರಗಳನ್ನು ಸರಿಪಡಿಸಲು ನೀಡಿದ್ದ ಫೈನಲ್ ಎಡಿಟ್ ವಿಂಡೋವನ್ನು ಏಪ್ರಿಲ್ 7ರ ಮಧ್ಯಾಹ್ನ 3 ಗಂಟೆಯವರೆಗೆ ವಿಸ್ತರಿಸಲಾಗಿದೆ.

Fact Check: ಪ್ರಸ್ತುತ ಕೊರೊನಾ ಲಸಿಕೆ ಹೊಸ ರೂಪಾಂತರಿಯನ್ನು ಸೃಷ್ಟಿಸುತ್ತಿದೆಯೇ?Fact Check: ಪ್ರಸ್ತುತ ಕೊರೊನಾ ಲಸಿಕೆ ಹೊಸ ರೂಪಾಂತರಿಯನ್ನು ಸೃಷ್ಟಿಸುತ್ತಿದೆಯೇ?

ನೀಟ್ ಪಿಜಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಏಪ್ರಿಲ್ 12ರಿಂದ ವಿತರಿಸಲಾಗುತ್ತದೆ. ಎನ್‌ಬಿಇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಿದೆ. ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯು ದೇಶಾದ್ಯಂತ ಏಪ್ರಿಲ್ 18ರಂದು ಕಂಪ್ಯೂಟರ್ ಆಧಾರಿತ ವೇದಿಕೆಯಲ್ಲಿ ಮಧ್ಯಾಹ್ನ 2ರಿಂದ ಸಂಜೆ 5.30ರವರೆಗೆ ನಡೆಯಲಿದೆ.

Fact Check

ಕ್ಲೇಮು

ನೀಟ್-ಪಿಜಿ 2021 ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಪರಿಸಮಾಪ್ತಿ

ನೀಟ್-ಪಿಜಿ 2021 ಪರೀಕ್ಷೆಗಳು ನಿಗದಿತ ಸಮಯದಲ್ಲಿಯೇ ನಡೆಯಲಿವೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Morphed notice being shared in social media claims NEET-PG 2021 deferred by NBE till further notice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X