ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಗಿರಿರಾಜ್ ಸಿಂಗ್ ಬಿಹಾರ ಸಿಎಂ ಆಗಲಿ ಎಂದರೇ ಪ್ರಧಾನಿ ಮೋದಿ?

|
Google Oneindia Kannada News

ನವದೆಹಲಿ, ನವೆಂಬರ್ 12: ಬಿಹಾರದ ಬೇಗುಸರೈನ ಬಿಜೆಪಿ ಸಂಸದರಾಗಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರನ್ನು ಬಿಹಾರ ಮುಖ್ಯಮಂತ್ರಿಯನ್ನಾಗಿ ನೇಮಿಸಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಪ್ರಧಾನಿ ಮೋದಿ ಅವರು ನವೆಂಬರ್ 5ರಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ಬಿಹಾರದ ಮುಖ್ಯಮಂತ್ರಿಯನ್ನಾಗಿ ಗಿರಿರಾಜ್ ಸಿಂಗ್ ಅವರನ್ನು ನೇಮಿಸಲು ಮೋದಿ ಇಚ್ಛಿಸಿದ್ದಾರೆ ಎನ್ನಲಾಗಿದೆ.

Fact Check:ಮುಸ್ಲಿಂ ಯುವತಿಯ ಮೇಲೆ ಹಲ್ಲೆ ನಡೆದಿದ್ದು ಫ್ರಾನ್ಸ್‌ನಲ್ಲಿ ಅಲ್ಲFact Check:ಮುಸ್ಲಿಂ ಯುವತಿಯ ಮೇಲೆ ಹಲ್ಲೆ ನಡೆದಿದ್ದು ಫ್ರಾನ್ಸ್‌ನಲ್ಲಿ ಅಲ್ಲ

ಟ್ವಿಟ್ಟರ್, ವಾಟ್ಸಾಪ್‌ಗಳಲ್ಲಿಯೂ ಈ ಪತ್ರ ಹರಿದಾಡುತ್ತಿದೆ. 'ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಬಿಹಾರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದರು. ಗಿರಿರಾಜ್ ಸಿಂಗ್ ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ' ಎಂದು ಟ್ವಿಟ್ಟರ್‌ಗಳಲ್ಲಿನ ಪೋಸ್ಟ್‌ಗಳು ಹೇಳುತ್ತಿವೆ.

 Fake News Buster: Letter Claims PM Modi Wants Giriraj Singh As Chief Minister Of Bihar

'ಭಾರತೀಯ ಜನತಾ ಪಕ್ಷವು ಮಾತ್ರವೇ ಪ್ರಜಾಭುತ್ವದ ನಿಯಮಾವಳಿಗಳನ್ನು ಪಾಲಿಸುವ ಏಕೈಕ ಪಕ್ಷವಾಗಿದೆ. ಮೂವರು ಅಭ್ಯರ್ಥಿಗಳ ಪೈಕಿ ಬಿಹಾರ ಮುಖ್ಯಮಂತ್ರಿಯ ಸ್ಥಾನಕ್ಕೆ ಗಿರಿರಾಜ್ ಸಿಂಗ್ ಅವರಿಗೆ ನನ್ನ ಮತಗಳು. ರಾಮಮಂದಿರದ ಮೈಲುಗಲ್ಲನ್ನು ಕ್ರಮಿಸುವುದರಲ್ಲಿ ಗಿರಿರಾಜ್ ಸಿಂಗ್ ಅವರ ಕೊಡುವೆ ಅಪೂರ್ವ ಮತ್ತು ಗಮನಾರ್ಹವಾಗಿದೆ' ಎಂದು ಪತ್ರದಲ್ಲಿ ಬರೆಯಲಾಗಿದೆ.

Fact Check ಸಾವಿನ ಸುದ್ದಿ: ಈಗ ಕಪಿಲ್ ದೇವ್ ಸರದಿFact Check ಸಾವಿನ ಸುದ್ದಿ: ಈಗ ಕಪಿಲ್ ದೇವ್ ಸರದಿ

ಆದರೆ ಈ ಪತ್ರವು ನಕಲಿ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ. ಇದರಲ್ಲಿನ ಸಹಿ, ಭಾಷೆ, ಶೈಲಿ ಮತ್ತು ಇತರೆ ಸೂಚಕಗಳನ್ನು ಗಮನಿಸಿದಾಗ ಇದು ಪ್ರಧಾನಿ ಮೋದಿ ಅವರು ಬರೆದ ಪತ್ರವಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಈ ಪತ್ರದಲ್ಲಿ ಅನೇಕ ವ್ಯಾಕರಣ ದೋಷಗಳಿವೆ. ಇದರಲ್ಲಿ Mile Stone ಮತ್ತು Extra Ordinary ಎಂದು ಪದಗಳನ್ನು ವಿಭಜಿಸಿ ಬರೆಯಲಾಗಿದೆ.

 Fake News Buster: Letter Claims PM Modi Wants Giriraj Singh As Chief Minister Of Bihar

ಪ್ರಧಾನಿ ಮೋದಿ ಅವರು ಈ ಹಿಂದೆ ಬರೆದ ಪತ್ರಗಳು ವೈರಲ್ ಆಗಿದ್ದವು. ಅದರ ಶೈಲಿಗಳಿಗೂ ಇದಕ್ಕೂ ಬಹಳ ವ್ಯತ್ಯಾಸವಿದೆ. ಅವರ ನೈಜ ಪತ್ರಗಳಲ್ಲಿ ದಿನಾಂಕವು ಹಿಂದಿಯಲ್ಲಿ ಕೂಡ ಇದೆ. ಆದರೆ ಈ ಪತ್ರದಲ್ಲಿ ಇಂಗ್ಲಿಷ್ ಮಾತ್ರ ಬಳಸಲಾಗಿದೆ. ಮೂಲ ಪತ್ರದಲ್ಲಿ ನಾಲ್ಕು ಸಿಂಹಗಳನ್ನು ಒಳಗೊಂಡ ಚಿಹ್ನೆಯು ಚಿನ್ನದ ಬಣ್ಣದ್ದಾಗಿದ್ದರೆ. ಇದರಲ್ಲಿ ಕಪ್ಪು ಮತ್ತು ಬಿಳಿ ಬಣ್ಣದಲ್ಲಿದೆ. ಹಾಗೆಯೇ ಮೋದಿ ಅವರು ತಮ್ಮ ಸಹಿಯಲ್ಲಿ ಬಳಸುವ 'N' ವಿಭಿನ್ನವಾಗಿದೆ.

ಹೀಗಾಗಿ ಈ ಪತ್ರವು ನೈಜವಲ್ಲ, ನಕಲಿ ಎನ್ನುವುದು ಸಾಬೀತಾಗಿದೆ. ಬಿಹಾರದ ಮುಖ್ಯಮಂತ್ರಿಯಾಗಿ ಗಿರಿರಾಜ್ ಸಿಂಗ್ ಅವರ ಆಯ್ಕೆಯನ್ನು ಅನುಮೋದಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪತ್ರ ಬರೆದಿಲ್ಲ.

Fact Check

ಕ್ಲೇಮು

ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ಗಿರಿರಾಜ್ ಸಿಂಗ್ ಹೆಸರು ಶಿಫಾರಸು ಮಾಡಿರುವ ಪ್ರಧಾನಿ ಮೋದಿ.

ಪರಿಸಮಾಪ್ತಿ

ಪ್ರಧಾನಿ ಮೋದಿ ಅಂತಹ ಪತ್ರವನ್ನು ಬರೆದಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A fake letter gone viral in social media claiming PM Narendra Modi wants to Giriraj Singh as Chief Minister of Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X