ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ರೈತರ ಪ್ರತಿಭಟನೆಗೆ ಕಮಲಾ ಹ್ಯಾರಿಸ್ ಬೆಂಬಲ

|
Google Oneindia Kannada News

ನವದೆಹಲಿ, ಡಿಸೆಂಬರ್ 3: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಸೇರಿದಂತೆ ಅನೇಕ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಟ್ರುಡೋ ಅವರ ಹೇಳಿಕೆ ಅನಪೇಕ್ಷಿತ ಮತ್ತು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಭಾರತದಲ್ಲಿನ ರೈತರ ಪ್ರತಿಭಟನೆಗೆ ಬೆಂಬಲ ನೀಡುವ ವಿಶ್ವ ನಾಯಕರ ಜತೆಗೆ ಸೇರಿಕೊಂಡಿದ್ದಾರೆ ಎಂಬ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Fact Check: ರೈತರಿಗೆ ಪೊಲೀಸರು ಹೊಡೆದೇ ಇಲ್ಲವೇ? ಅವರು ಖಲಿಸ್ತಾನ ಉಗ್ರರೇ?Fact Check: ರೈತರಿಗೆ ಪೊಲೀಸರು ಹೊಡೆದೇ ಇಲ್ಲವೇ? ಅವರು ಖಲಿಸ್ತಾನ ಉಗ್ರರೇ?

ಕಮಲಾ ಹ್ಯಾರಿಸ್ ಮಾಡಿದ್ದಾರೆ ಎನ್ನಲಾದ ಟ್ವೀಟ್‌ನ ಸ್ಕ್ರೀನ್ ಶಾಟ್ ವೈರಲ್ ಆಗಿದೆ. 'ತಮ್ಮ ಜೀವನೋಪಾಯಕ್ಕೆ ಮಾರಕವಾದ ಹೊಸ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಾರತ ಸರ್ಕಾರ ಹತ್ತಿಕ್ಕುತ್ತಿರುವುದನ್ನು ಕಂಡು ನಮಗೆ ಆಘಾತವಾಗಿದೆ. ಜಲಫಿರಂಗಿ ಮತ್ತು ಅಶ್ರುವಾಯುಗಳನ್ನು ಬಳಸುವ ಬದಲು ಭಾರತ ಸರ್ಕಾರವು ರೈತರೊಂದಿಗೆ ಮುಕ್ತ ಮಾತುಕತೆಗೆ ತೊಡಗಬೇಕಾದ ಅಗತ್ಯವಿದೆ' ಎಂದು ಅದರಲ್ಲಿ ಹೇಳಲಾಗಿದೆ.

ಈ ಟ್ವೀಟ್‌ನ ಸ್ಕ್ರೀನ್‌ಶಾಟ್ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಬಳಕೆದಾರ ಅಕಾಲ್ ಸಹಾಯ್ ಟಿವಿ ಎಂಬ ಖಾತೆ, 'ರೈತರ ಪ್ರತಿಭಟನೆಗೆ ಅಮೆರಿಕದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬೆಂಬಲ ನೀಡಿದ್ದಾರೆ. ರೈತರನ್ನು ಬೆಂಬಲಿಸುವ ಜಸ್ಟಿನ್ ಟ್ರುಡೋ ಅವರ ಹೇಳಿಕೆಯಿಂದ ಅಸಮಾಧಾನಗೊಂಡಿದ್ದವರ ಆಲೋಚನೆ ಈಗ ಏನು?' ಎಂದು ಪ್ರಶ್ನಿಸಿತ್ತು. ಮುಂದೆ ಓದಿ.

ಅಮಿತ್ ಮಾಳವೀಯ ಪೋಸ್ಟ್‌ಗೆ 'ಸುಳ್ಳು ಸುದ್ದಿ' ಮುದ್ರೆ ಒತ್ತಿದ ಟ್ವಿಟ್ಟರ್ಅಮಿತ್ ಮಾಳವೀಯ ಪೋಸ್ಟ್‌ಗೆ 'ಸುಳ್ಳು ಸುದ್ದಿ' ಮುದ್ರೆ ಒತ್ತಿದ ಟ್ವಿಟ್ಟರ್

ಜ್ಯಾಕ್ ಹ್ಯಾರಿಸ್ ಟ್ವೀಟ್

ಜ್ಯಾಕ್ ಹ್ಯಾರಿಸ್ ಟ್ವೀಟ್

ಆದರೆ ಈ ರೀತಿ ಕಮಲಾ ಹ್ಯಾರಿಸ್ ಅವರು ಟ್ವೀಟ್ ಮಾಡಿಲ್ಲ. ವಾಸ್ತವವಾಗಿ ಕೆನಡಾದ ಸಂಸದ ಜ್ಯಾಕ್ ಹ್ಯಾರಿಸ್ ಅವರು ಈ ಟ್ವೀಟ್ ಮಾಡಿದ್ದರು. ಆದರೆ ಯಾರೋ ಆ ಟ್ವೀಟ್ ಕಮಲಾ ಹ್ಯಾರಿಸ್ ಮಾಡಿದ್ದಂತೆ ತಿದ್ದಿದ್ದರು. ಇದನ್ನು ನಂಬಿದ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಹಂಚಿಕೊಂಡಿದ್ದಾರೆ.

ಕಮಲಾ ಹ್ಯಾರಿಸ್ ಹೇಳಿಕೆ ನೀಡಿಲ್ಲ

ಕಮಲಾ ಹ್ಯಾರಿಸ್ ಹೇಳಿಕೆ ನೀಡಿಲ್ಲ

ಕಮಲಾ ಹ್ಯಾರಿಸ್ ಅವರ ಟ್ವಿಟ್ಟರ್ ಖಾತೆಯಲ್ಲಿ ಭಾರತದಲ್ಲಿನ ರೈತರ ಪ್ರತಿಭಟನೆಗಳ ಬಗ್ಗೆ ಯಾವುದೇ ಟ್ವೀಟ್ ಕಂಡುಬಂದಿಲ್ಲ. ಹಾಗೆಯೇ ಅವರು ಪ್ರತಿಭಟನೆ ಕುರಿತಾಗಿ ಯಾವುದೇ ಹೇಳಿಕೆ ನೀಡಿರುವ ಕುರಿತು ವಿಶ್ವಾಸನೀಯ ಮಾಧ್ಯಮಗಳಲ್ಲಿ ವರದಿಯಾಗಿಲ್ಲ.

ಅದೇ ದಿನ, ಅದೇ ಸಮಯ

ಅದೇ ದಿನ, ಅದೇ ಸಮಯ

ವೈರಲ್ ಆಗಿರುವ ಕಮಲಾ ಹ್ಯಾರಿಸ್ ಟ್ವೀಟ್‌ನಲ್ಲಿ ದಿನವನ್ನು ನವೆಂಬರ್ 28 ಮತ್ತು ಸಮಯವನ್ನು ರಾತ್ರಿ 12.25 ಎಂದು ತೋರಿಸಲಾಗಿದೆ. ಇದೇ ವೇಳೆಗೆ ಸರಿಯಾಗಿ ಜ್ಯಾಕ್ ಹ್ಯಾರಿಸ್ ಟ್ವೀಟ್ ಮಾಡಿದ್ದರು. ಕಮಲಾ ಹ್ಯಾರಿಸ್ ಅವರು ಜ್ಯಾಕ್ ಹ್ಯಾರಿಸ್ ಅವರ ಟ್ವೀಟ್ ಅನ್ನು ನಕಲು ಮಾಡಿ ಅದೇ ಸಮಯದಲ್ಲಿ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿರಲು ಸಾಧ್ಯವಿಲ್ಲ. ಹೀಗಾಗಿ ಇದು ಜ್ಯಾಕ್ ಹ್ಯಾರಿಸ್ ಮಾಡಿದ ಟ್ವೀಟ್‌ನ ನಕಲು ಎನ್ನುವುದು ಖಚಿತವಾಗಿದೆ.

ರೈತರ ಬಗ್ಗೆ ಕಮಲಾ ಟ್ವೀಟ್

ರೈತರ ಬಗ್ಗೆ ಕಮಲಾ ಟ್ವೀಟ್

ನವೆಂಬರ್ 27ರಂದು ಟ್ವೀಟ್ ಮಾಡಿದ್ದ ಕಮಲಾ ಹ್ಯಾರಿಸ್, 'ನಮ್ಮ ದೇಶದಾದ್ಯಂತ ಲಕ್ಷಾಂತರ ಜನರ ಮೇಜಿನ ಮೇಲೆ ಆಹಾರವನ್ನು ಇರಿಸಲು ಕಠಿಣ ಪರಿಶ್ರಮಪಟ್ಟ ನಮ್ಮ ಕೃಷಿ ಕೆಲಸಗಾರರು ಮತ್ತು ಆಹಾರ ಬ್ಯಾಂಕ್ ಸಿಬ್ಬಂದಿಗೆ ಕೃತಜ್ಞಳಾಗಿದ್ದೇನೆ' ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತದ ಅನೇಕ ಟ್ವಿಟ್ಟರ್ ಬಳಕೆದಾರರು ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳ ಫೋಟೊಗಳನ್ನು ಹಂಚಿಕೊಂಡಿದ್ದರು.

Fact Check

ಕ್ಲೇಮು

ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಸರ್ಕಾರ ನಿಭಾಯಿಸಿದ ರೀತಿಯನ್ನು ಕಮಲಾ ಹ್ಯಾರಿಸ್ ಖಂಡಿಸಿದ್ದಾರೆ.

ಪರಿಸಮಾಪ್ತಿ

ಈ ಟ್ವೀಟ್ ಕೆನಡಾ ಸಂಸದ ಜ್ಯಾಕ್ ಹ್ಯಾರಿಸ್ ಅವರದ್ದಾಗಿದ್ದು, ಕಮಲಾ ಹ್ಯಾರಿಸ್ ಅವರ ಹೆಸರಿನಲ್ಲಿ ಕಾಣುವಂತೆ ತಿದ್ದಲಾಗಿದೆ.

Rating

Half True
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A screenshot of a tweet claiming US Vice president Kamala Harris supported on going protest of farmes in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X