• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಭಾರತ ಮೂಲದ ವ್ಯಕ್ತಿ ಬೈಡನ್ ರಾಜಕೀಯ ಸಲಹೆಗಾರ

|

ನವದೆಹಲಿ, ನವೆಂಬರ್ 13: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಂದಿದ್ದರೂ ಡೊನಾಲ್ಡ್ ಟ್ರಂಪ್ ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ಅದರ ನಡುವೆಯೇ ಚುನಾಯಿತ ಅಧ್ಯಕ್ಷ ಜೋ ಬೈಡನ್ ತಮ್ಮ ಆಡಳಿತ ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ. ವಿವಿಧ ಟಾಸ್ಕ್ ಫೋರ್ಸ್‌ಗಳು, ವಿವಿಧ ಇಲಾಖೆಗಳ ಅಧಿಕಾರ ಹಸ್ತಾಂತರ ಪ್ರಕ್ರಿಯೆಗಾಗಿ ಅಧಿಕಾರಿಗಳನ್ನು ನೇಮಿಸಿದ್ದಾರೆ. ಇದರಲ್ಲಿ ಭಾರತ ಮೂಲದ ಅನೇಕರು ಇದ್ದಾರೆ.

ಜೋ ಬೈಡನ್ ಮತ್ತು ಅವರ ಪತ್ನಿ ಜಿಲ್ ಬೈಡನ್ ಅವರ ಜತೆಗೆ ಭಾರತ ಮೂಲದ ವ್ಯಕ್ತಿಯೊಬ್ಬರು ಇರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಹ್ಮದ್ ಖಾನ್ ಎಂಬ ಆ ವ್ಯಕ್ತಿಯನ್ನು ಬೈಡನ್ ಅವರು ತಮ್ಮ ರಾಜಕೀಯ ಸಲಹೆಗಾರನನ್ನಾಗಿ ನೇಮಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Fact Check: USA ಅಧ್ಯಕ್ಷರ ಪದಗ್ರಹಣದಲ್ಲಿ ಡಾ.ಮನಮೋಹನ್ ಸಿಂಗ್ ಮುಖ್ಯಅತಿಥಿ

ವಹೀದ್ ಅಹಮದ್ ಎಂಬುವವರು ಈ ಟ್ವೀಟ್ ಮಾಡಿದ್ದು, ಹಿಂದಿಯಲ್ಲಿ ಕ್ಯಾಪ್ಷನ್ ಹಾಕಿದ್ದಾರೆ. 'ಬಿಗ್ ನ್ಯೂಸ್. ಅಮೆರಿಕದ ಹೊಸ ಅಧ್ಯಕ್ಷ ಜೋ ಬೈಡನ್ ಅವರು ಭಾರತ ಮೂಲದ ಅಹ್ಮದ್ ಖಾನ್ ಅವರನ್ನು ತಮ್ಮ ರಾಜಕೀಯ ಸಲಹೆಗಾರನನ್ನಾಗಿ ನೇಮಿಸಿದ್ದಾರೆ. ಅಹ್ಮದ್ ಖಾನ್ ಅವರು ಭಾರತೀಯ ಮತ್ತು ಹೈದರಾಬಾದ್‌ಗೆ ಸೇರಿದವರು ಎನ್ನುವುದು ಗಮನಾರ್ಹ ಸಂಗತಿ. ಇದನ್ನು ತಾರತಮ್ಯ ಇಲ್ಲದ ರಾಜಕೀಯ ಎಂದು ಕರೆಯುತ್ತಾರೆ' ಎಂಬುದಾಗಿ ಬರೆದಿದ್ದಾರೆ.

ಆದರೆ ಈ ಹೇಳಿಕೆ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ. ಜೋ ಬೈಡನ್ ಮತ್ತು ಜಿಲ್ ಬೈಡನ್ ಅವರ ಜತೆ ಈ ಫೋಟೊದಲ್ಲಿ ಇರುವ ವ್ಯಕ್ತಿ ಭಾರತ ಮೂಲದ ಅಹ್ಮದ್ ಖಾನ್ ಎನ್ನುವುದು ನಿಜ. ಆದರೆ, ಅವರನ್ನು ಬೈಡನ್ ಅವರ ರಾಜಕೀಯ ಸಲಹೆಗಾರರನ್ನಾಗಿ ನೇಮಿಸಿಲ್ಲ.

ಭಾರತದಲ್ಲಿದ್ದಾರೆ ಜೋ ಬೈಡನ್ ದೂರದ ಸಂಬಂಧಿಕರು

ಇದೇ ರೀತಿಯ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿಯೂ ಓಡಾಡುತ್ತಿದೆ. ಈ ಫೋಟೊವನ್ನು ಪರಿಶೀಲಿಸಿದಾಗ ವಿವಿಧ ಮಾಧ್ಯಮಗಳಲ್ಲಿ 2015ರಲ್ಲಿಯೇ ಈ ಫೋಟೊ ಪ್ರಕಟಗೊಂಡಿತ್ತು. ವರದಿಗಳ ಪ್ರಕಾರ ಫೋಟೊದಲ್ಲಿರುವುದು ಅಹಮದ್ ಖಾನ್. ಅವರು 2016ರಲ್ಲಿ ಬೈಡನ್ ಅವರ ರಾಜಕೀಯ ಕ್ರಿಯಾ ಸಮಿತಿಯ ಕರಡು ಉಪ ಕಾರ್ಯಕಾರಿ ನಿರ್ದೇಶಕರಾಗಿದ್ದರು. ಜೋ ಬೈಡನ್ ಅವರನ್ನು 2016ರ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಬಿಂಬಿಸಲು ಮಾಡಿದ್ದ ಸಮಿತಿ ಇದಾಗಿತ್ತು.

ಬೈಡನ್ ಅವರು ಚುನಾವಣೆಯಲ್ಲಿ ಗೆದ್ದ ಬಳಿಕ ಅವರಿಗೆ ಅಭಿನಂದನೆ ಸಲ್ಲಿಸಲು ಅಹ್ಮದ್ ಖಾನ್ ಅವರು ನವೆಂಬರ್ 10ರಂದು ಫೇಸ್‌ಬುಕ್‌ನಲ್ಲಿ ಈ ಫೋಟೊವನ್ನು ಹಂಚಿಕೊಂಡಿದ್ದರು. ಆ ಫೋಟೊ ತೆಗೆಸಿಕೊಂಡ ಸಂದರ್ಭವನ್ನು ಅವರು ಬರೆದುಕೊಂಡಿದ್ದರು. ಆದರೆ ಆ ಪೋಸ್ಟ್‌ನಲ್ಲಿ ಅವರು ಬೈಡನ್ ಅವರಿಂದ ಯಾವುದೇ ನೇಮಕವಾದ ಪ್ರಸ್ತಾಪವನ್ನು ಮಾಡಿಲ್ಲ. ಮಾತ್ರವಲ್ಲ, ಮತ್ತೊಂದು ಪೋಸ್ಟ್‌ನಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿರುವ ಈ ಸುದ್ದ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

Fact Check

ಕ್ಲೇಮು

ಜೋ ಬೈಡನ್ ರಾಜಕೀಯ ಸಲಹೆಗಾರರಾಗಿ ಭಾರತ ಮೂಲದ ಅಹ್ಮದ್ ಖಾನ್ ನೇಮಕ

ಪರಿಸಮಾಪ್ತಿ

ಅಹ್ಮದ್ ಖಾನ್ ಅವರನ್ನು ಈವರೆಗೂ ಬೈಡನ್ ಅಂತಹ ಹುದ್ದೆಗೆ ನೇಮಿಸಿಲ್ಲ

Rating

Half True
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
Fact Check: A post claiming Joe Biden has appointend an Indian origin man, Ahmed Khan as his political advisor, is false.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X