ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಸಿಖ್ಖರಿಗೆ ಮೋದಿ ಸರ್ಕಾರದ ಸಂಬಂಧ ನೆನಪಿಸಿದ ಐಆರ್‌ಸಿಟಿಸಿ

|
Google Oneindia Kannada News

ನವದೆಹಲಿ, ಡಿಸೆಂಬರ್ 14: ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಯಲ್ಲಿ ಬಹುಪಾಲು ಸಿಖ್ ಸಮುದಾಯ ಮುಂಚೂಣಿಯಲ್ಲಿದೆ. ಸಿಖ್ಖರು ಮತ್ತು ಕೇಂದ್ರ ಸರ್ಕಾರದ ನಡುವಿನ ಬಾಂಧವ್ಯ ಉತ್ತಮವಾಗಿದೆ ಎಂದು ಬಿಂಬಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಕೇಂದ್ರದ ಪರವಾಗಿ ಐಆರ್‌ಸಿಟಿಸಿ (ಇಂಡಿಯನ್ ರೈಲ್ವೇಸ್ ಕೆಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್) ಸಿಖ್ ಸಮುದಾಯವನ್ನು ಇ-ಮೇಲ್ ಮೂಲಕ ತಲುಪುವ ಪ್ರಯತ್ನ ಮಾಡುತ್ತಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕಾಗಿ ಸುಮಾರು ಎರಡು ಕೋಟಿ ಇ-ಮೇಲ್ ಕಳುಹಿಸಲಾಗಿದೆ ಎನ್ನಲಾಗಿದೆ. ಆದರೆ ಇದನ್ನು ಐಆರ್‌ಸಿಟಿಸಿ ನಿರಾಕರಿಸಿದೆ.

ಸಿಖ್ಖರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಂಬಂಧವನ್ನು ಬಿಂಬಿಸುವ ಕೋಟ್ಯಂತರ್ ಇ ಮೇಲ್‌ಗಳನ್ನು 'ಸಿಂಗ್' ಎಂಬ ಸರ್‌ನೇಮ್ ಇರುವವರಿಗೆ ಮತ್ತು ಪಂಜಾಬ್ ಭಾಗದ ಜನರಿಗೆ ಐಆರ್‌ಸಿಟಿಸಿ ರವಾನಿಸಿದೆ ಎಂದು ವರದಿಯಾಗಿತ್ತು. ಆದರೆ ಪ್ರತಿಯೊಬ್ಬರಿಗೂ ಇ-ಮೇಲ್ ಕಳುಹಿಸಲಾಗಿದೆ, ಹಾಗೂ ಇಂತಹ ಚಟುವಟಿಕೆ ಈ ಹಿಂದೆಯೂ ನಡೆದಿದೆ ಎಂದು ಐಆರ್‌ಸಿಟಿಸಿ ಸ್ಪಷ್ಟನೆ ನೀಡಿದೆ.

Fact Check: ರೈತರ ಪ್ರತಿಭಟನೆಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದ ಮಹಿಳೆFact Check: ರೈತರ ಪ್ರತಿಭಟನೆಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದ ಮಹಿಳೆ

'ಐಆರ್‌ಸಿಟಿಸಿ ನೀಡಿರುವ ಹೇಳಿಕೆಯನ್ನು ಸೂಕ್ತವಾಗಿ ಕೋಟ್ ಮಾಡಿಲ್ಲ ಎಂದು ಮಾಹಿತಿ ನೀಡುತ್ತಿದ್ದೇವೆ. ಅಲ್ಲದೆ, ಯಾವುದೇ ನಿರ್ದಿಷ್ಟ ಸಮುದಾಯ ಎಂದಲ್ಲ, ಪ್ರತಿಯೊಬ್ಬರಿಗೂ ಮೇಲ್‌ಗಖನ್ನು ರವಾನಿಸಲಾಗಿದೆ. ಇದು ಮೊದಲ ನಿದರ್ಶನವಲ್ಲ. ಸಾರ್ವಜನಿಕ ಹಿತಾಸಕ್ತಿಗಾಗಿ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಪ್ರಚಾರ ಪಡಿಸಲು ಐಆರ್‌ಸಿಟಿಸಿ ಈ ರೀತಿಯ ಚಟುವಟಿಕೆಗಳನ್ನು ಹಿಂದೆಯೂ ತೆಗೆದುಕೊಂಡಿತ್ತು' ಎಂದು ತಿಳಿಸಿದೆ.

Fake News Buster: IRCTC Sent E Mails To Sikhs On Govts Behalf

ಐಆರ್‌ಸಿಟಿಸಿಯು 'ಸಿಖ್ಖರೊಂದಿಗೆ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ವಿಶೇಷ ಸಂಬಂಧ' ಎಂಬ ಶೀರ್ಷಿಕೆಯ 47 ಪುಟಗಳ ಅಡಕ ಹೊಂದಿರುವ ಮೇಲ್‌ಗಳನ್ನು ಕಳುಹಿಸಿದೆ ಎಂದು ವರದಿಯಾಗಿತ್ತು. ಈ ವರದಿಗಳು ಐಆರ್‌ಸಿಟಿಸಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರಹೇಳಿಕೆಯನ್ನು ಉಲ್ಲೇಖಿಸಿದ್ದವು. ರೈಲ್ವೆ ಟಿಕೆಟ್ ಬುಕ್ಕಿಂಗ್ ವೆಬ್‌ಸೈಟ್‌ನಲ್ಲಿ ತಮ್ಮ ಇ-ಮೇಲ್ ಐಡಿಗಳನ್ನು ನೋಂದಣಿ ಮಾಡಿಸಿದವರಿಗೆ ಸಂಸ್ಥೆಯು ಇ-ಮೇಲ್ ಕಳುಹಿಸಿದೆ ಎಂದು ತಿಳಿಸಿದ್ದರು.

Fact Check: ಪ್ರತಿಭಟನೆ ಮಾಡುತ್ತಿರುವ ರೈತರು ರಾಷ್ಟ್ರಧ್ವಜವನ್ನು ಅವಮಾನಿಸಿದರೇ?Fact Check: ಪ್ರತಿಭಟನೆ ಮಾಡುತ್ತಿರುವ ರೈತರು ರಾಷ್ಟ್ರಧ್ವಜವನ್ನು ಅವಮಾನಿಸಿದರೇ?

ಹಿಂದಿ, ಇಂಗ್ಲಿಷ್ ಮತ್ತು ಪಂಜಾಬಿ ಭಾಷೆಗಳಲ್ಲಿ ಇರುವ 47 ಪುಟಗಳ ಅಡಕವು ಪ್ರಧಾನಿ ಮೋದಿ ಅವರಿಗೆ ಖಾಮಿ ಸೇವಾ ಪ್ರಶಸ್ತಿ ನೀಡಿದ ಉಲ್ಲೇಖದಿಂದ ಆರಂಭವಾಗಿದೆ. ಸಿಖ್ ಸಮುದಾಯದ ಕಲ್ಯಾಣಕ್ಕಾಗಿ ಕರ್ತಾಪುರ ಕಾರಿಡಾರ್, ಜಲಿಯನ್ ವಾಲಾಬಾಗ್ ಸ್ಮಾರಕ ಸೇರಿದಂತೆ ಮೋದಿ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಲಾಗಿದೆ.

Fact Check

ಕ್ಲೇಮು

ಮೋದಿ ಸರ್ಕಾರ ಮತ್ತು ಸಿಖ್ ಸಮುದಾಯದ ಸಂಬಂಧವನ್ನು ಬಿಂಬಿಸುವ ಇ-ಮೇಲ್‌ಅನ್ನು ಐಆರ್‌ಸಿಟಿಸಿ ಸಿಖ್ಖರಿಗೆ ರವಾನಿಸಿದೆ.

ಪರಿಸಮಾಪ್ತಿ

ಐಆರ್‌ಸಿಟಿಸಿಯಲ್ಲಿ ನೋಂದಣಿಯಾದ ಎಲ್ಲ ಇ-ಮೇಲ್‌ ವಿಳಾಸಗಳಿಗೂ ಈ ರೀತಿ ವಿಷಯವನ್ನು ಕಳುಹಿಸಲಾಗಿದೆ.

Rating

Half True
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Several media houses claims IRCTC set e mails to Sikh community highlighting relationship between Modi govt and Sinkh. IRCTC says mail sent to all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X