ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ರೈತರ ಪ್ರತಿಭಟನೆಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದ ಮಹಿಳೆ

|
Google Oneindia Kannada News

ನವದೆಹಲಿ, ಡಿಸೆಂಬರ್ 3: ಮಹಿಳೆಯೊಬ್ಬರು ಜನರು ತುಂಬಿಕೊಂಡ ಟ್ರ್ಯಾಕ್ಟರ್ ಓಡಿಸುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಹರಿಯಾಣದ ಫೋಟೊವಾಗಿದ್ದು, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಟ್ರ್ಯಾಕ್ಟರ್ ಓಡಿಸುತ್ತಿರುವ ಮಹಿಳೆ ಟಿಕ್ರಿ ಗಡಿಯತ್ತ ಸಾಗುತ್ತಿದ್ದಾರೆ ಎಂದು ಹೇಳಲಾಗಿದೆ.

ಆದರೆ ಇದು ತಪ್ಪುದಾರಿಗೆ ಎಳೆಯುವ ಹೇಳಿಕೆಯಾಗಿದೆ. ಈ ಫೋಟೊದ ಮೂಲವನ್ನು ಹುಡುಕಿ ನೋಡಿದಾಗ 'ಒನ್ ಇಂಡಿಯಾ' ತಂಡಕ್ಕೆ ಇದು 2017ರ ಫೋಟೊ ಎನ್ನುವುದು ಗೊತ್ತಾಗಿದೆ. 2017ರಲ್ಲಿ ಹರಿಯಾಣದಲ್ಲಿ ಜಾಟ್ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಫೋಟೊವನ್ನು ತೆಗೆಯಲಾಗಿತ್ತು.

Fact Check: ರೈತರ ಪ್ರತಿಭಟನೆಗೆ ಕಮಲಾ ಹ್ಯಾರಿಸ್ ಬೆಂಬಲFact Check: ರೈತರ ಪ್ರತಿಭಟನೆಗೆ ಕಮಲಾ ಹ್ಯಾರಿಸ್ ಬೆಂಬಲ

2017ರ ಫೆಬ್ರವರಿ 6ರಂದು ರೋಹಟಕ್‌ನಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿದ್ದ ಜಾಟ್ ಸಮುದಾಯದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಾಸಿಯಾ ಗ್ರಾಮಕ್ಕೆ ಜಾಟ್ ಸಮುದಾಯದ ಮಹಿಳಾ ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ತೆರಳಿದ್ದರು. ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಜಾಟ್ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದ್ದರು.

Fake News Buster: Image Of Woman Driving Tractor To Farmers Protest Is Old

ಪ್ರಸ್ತುತ ದೆಹಲಿ ಮತ್ತು ಸುತ್ತಮುತ್ತಲು ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಕೂಡ ಭಾರಿ ಸಂಖ್ಯೆಯಲ್ಲಿ ರೈತ ಮಹಿಳೆಯರು ಪಾಲ್ಗೊಂಡಿದ್ದಾರೆ. ಹೀಗಾಗಿ ಜಾಟ್ ಸಮುದಾಯದ ಸುಮಾರು ನಾಲ್ಕು ವರ್ಷಗಳಷ್ಟು ಹಳೆಯದಾದ ಪ್ರತಿಭಟನೆಯ ಫೋಟೊ ಕೂಡ ಇದರೊಂದಿಗೆ ಸುಲಭವಾಗಿ ತಳಕು ಹಾಕಿಕೊಂಡಿದೆ.

Fact Check

ಕ್ಲೇಮು

ರೈತರ ಪ್ರತಿಭಟನೆಗೆ ರೈತ ಮಹಿಳೆಯರು ಟ್ರ್ಯಾಕ್ಟರ್ ಚಲಾಯಿಸಿಕೊಂಡು ತೆರಳುತ್ತಿದ್ದಾರೆ ಎಂದು ಫೋಟೊ ತೋರಿಸಿದೆ.

ಪರಿಸಮಾಪ್ತಿ

ಇದು 2017ರಲ್ಲಿ ತೆಗೆದ ಹಳೆಯ ಫೋಟೊವಾಗಿದ್ದು, ಜಾಟ್ ಪ್ರತಿಭಟನೆಯ ಸಂದರ್ಭದ ಚಿತ್ರ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: An image claiming that of woman driving a tractor heading towards farmers protest, But it was an old image of 2017 Jats protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X