ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಲಸಿಕೆ ಸಂಸ್ಥೆಗಳ ಮನವಿ ತಿರಸ್ಕೃತವಾಗಿಲ್ಲ

|
Google Oneindia Kannada News

ನವದೆಹಲಿ, ಡಿಸೆಂಬರ್ 9: ಕೊರೊನಾ ವೈರಸ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಕೋರಿ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಮತ್ತು ಹೈದರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥೆಗಳು ಸಲ್ಲಿಸಿದ್ದ ಮನವಿಗಳನ್ನು ತಿರಸ್ಕರಿಸಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಯ ಅನುಮತಿ ಮನವಿಯನ್ನು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಪರಿಣತರ ಸಮಿತಿ (ಸಿಡಿಸಿಎಸ್‌ಒ) ಬುಧವಾರ ತಿರಸ್ಕರಿಸಿದೆ. ಈ ಎರಡೂ ಕಂಪೆನಿಗಳು ತಮ್ಮ ಲಸಿಕೆಗಳ ಸುರಕ್ಷತೆ ಹಾಗೂ ಪರಿಣಾಮದ ಬಗ್ಗೆ ಅಸಮರ್ಪಕ ದತ್ತಾಂಶ ಹೊಂದಿವೆ. ಈ ಎರಡೂ ಕಂಪೆನಿಗಳಿಗೆ ಮತ್ತಷ್ಟು ದತ್ತಾಂಶಗಳನ್ನು ಒದಗಿಸುವಂತೆ ಸೂಚಿಸಲಾಗಿದೆ ಎಂದು ಸಮಿತಿ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿತ್ತು.

Fact Check: ಕೊರೊನಾ ಲಸಿಕೆ ಮನುಷ್ಯನ ಡಿಎನ್‌ಎ ಬದಲಾಯಿಸುತ್ತದೆಯೇ?Fact Check: ಕೊರೊನಾ ಲಸಿಕೆ ಮನುಷ್ಯನ ಡಿಎನ್‌ಎ ಬದಲಾಯಿಸುತ್ತದೆಯೇ?

ಆದರೆ ಸೆರಮ್ ಸಂಸ್ಥೆ ಹಾಗೂ ಭಾರತ್ ಬಯೋಟೆಕ್ ಕಂಪೆನಿ ಸಲ್ಲಿಸಿದ್ದ ತುರ್ತು ಬಳಕೆಯ ಮನವಿಯನ್ನು ತಿರಸ್ಕರಿಸಲಾಗಿದೆ ಎಂಬ ವರದಿ ಸತ್ಯಕ್ಕೆ ದೂರವಾಗಿದೆ. ತುರ್ತು ಬಳಕೆಯನ್ನು ಮನವಿಯನ್ನು ಅಂಗೀಕರಿಸಿಲ್ಲ ಎನ್ನುವುದು ಸುಳ್ಳು ಸುದ್ದಿ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟೀಕರಣ ನೀಡಿದೆ.

Fake News Buster: Health Ministry Says It Didnt Rejects Proposal Of Emergency Use Of Vaccines

Fact Check: ಆಸ್ಪಿರಿನ್ ಮಾತ್ರೆಗಳಿಂದ ಕೊರೊನಾ ಸೋಂಕು ದೂರ? Fact Check: ಆಸ್ಪಿರಿನ್ ಮಾತ್ರೆಗಳಿಂದ ಕೊರೊನಾ ಸೋಂಕು ದೂರ?

'ಸೆರಮ್ ಸಂಸ್ಥೆ ಮತ್ತು ಭಾರತ್ ಬಯೋಟೆಕ್ ನೀಡಿದ್ದ ಲಸಿಕೆ ಪ್ರಸ್ತಾವಗಳನ್ನು 'ಸುರಕ್ಷತೆ ಕೊರತೆ' ಮತ್ತು ಅದರ ಪರಿಣಾಮಗಳ ಬಗ್ಗೆ ಅಸಮರ್ಪಕ ದತ್ತಾಂಶದ ಕಾರಣದಿಂದ ಇಂದು ತಿರಸ್ಕರಿಸಲಾಗಿದೆ' ಎಂದು ಎನ್‌ಡಿಟಿವಿಯ ಸುಪರ್ಣಾ ಸಿಂಗ್ ಟ್ವೀಟ್ ಮಾಡಿದ್ದರು.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

Fact Check

ಕ್ಲೇಮು

ಲಸಿಕೆಯ ತುರ್ತು ಬಳಕೆಯ ಮನವಿಗಳು ತಿರಸ್ಕೃತಗೊಂಡಿವೆ.

ಪರಿಸಮಾಪ್ತಿ

ಲಸಿಕೆ ತುರ್ತು ಬಳಕೆಯ ಮನವಿಗಳನ್ನು ತಿರಸ್ಕರಿಸಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Health Ministry has clarified about the news over rejection of proposal by Serum institute and Bharat Biotech for Emergency Use of Vaccines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X