ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೋವಿಡ್ ಲಸಿಕೆ ಪಡೆಯದಂತೆ ಆಫ್ರಿಕನ್ನರಿಗೆ ಒಬಾಮ ಮನವಿ

|
Google Oneindia Kannada News

ನವದೆಹಲಿ, ಜನವರಿ 11: ಅಮೆರಿಕ ಮತ್ತು ಯುರೋಪ್‌ಗಳಿಂದ ಬರುವ ಕೋವಿಡ್ ಲಸಿಕೆಗಳನ್ನು ಪಡೆದುಕೊಳ್ಳದಂತೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಆಫ್ರಿಕನ್ನರಿಗೆ ಮನವಿ ಮಾಡಿದ್ದಾರೆ ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

'ಅಮೆರಿಕ ಮತ್ತು ಯುರೋಪ್‌ಗಳಿಂದ ಬರುವ ಲಸಿಕೆಗಳನ್ನು ಸ್ವೀಕರಿಸದಂತೆ ಆಫ್ರಿಕನ್ನರಿಗೆ ಬರಾಕ್ ಒಬಾಮ ಹೇಳುತ್ತಿದ್ದಾರೆ.

Fact Check: ಕೊರೊನಾ ಲಸಿಕೆ ಪಡೆಯಲು ಹಿರಿಯ ನಾಗರಿಕರು ಯಾವುದೇ ವಿವರ ನೀಡುವ ಅಗತ್ಯವಿಲ್ಲFact Check: ಕೊರೊನಾ ಲಸಿಕೆ ಪಡೆಯಲು ಹಿರಿಯ ನಾಗರಿಕರು ಯಾವುದೇ ವಿವರ ನೀಡುವ ಅಗತ್ಯವಿಲ್ಲ

ಬರಾಕ್ ಒಬಾಮ: ಆಫ್ರಿಕನ್ನರ ಮೇಲೆ ಈ ಬಿಳಿಯ ಜನರು ಮಾಡಲು ಹೊರಟಿರುವ ಈ ಕೆಟ್ಟ ಕ್ರಮದ ಕುರಿತು ನಾನು ಬಹಿರಂಗಪಡಿಸದೆ ಹೋದರೆ ನಾನೂ ಅದರಲ್ಲಿ ಶಾಮೀಲಾದಂತೆ ಆಗುತ್ತದೆ. ಎಷ್ಟಾದರೂ ನಾನು ಅಮೆರಿಕದಲ್ಲಿ ಹುಟ್ಟಿದ್ದರೂ, ನನ್ನದು ಆಫ್ರಿಕನ್ ರಕ್ತ' ಎಂದು ಒಬಾಮ ಹೇಳಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

 Fake News Buster: Did Barack Obama Urge Africans Not To Take Covid Vaccine From US, Europe

ಆಫ್ರಿಕನ್ನರು ಲಸಿಕೆ ಪಡೆದುಕೊಳ್ಳದಂತೆ ಒಬಾಮ ಅವರು ಮನವಿ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇದೇ ರೀತಿಯ ಹೇಳಿಕೆಯನ್ನು ಕಳೆದ ವರ್ಷ ಕೂಡ ಹರಿಬಿಡಲಾಗಿತ್ತು. ಒಬಾಮ ಅವರು ಈ ರೀತಿ ಹೇಳಿಕೆ ನೀಡಿಲ್ಲ. ಅವರು ಲಸಿಕೆಯ ಪರವಾಗಿ ಇದ್ದಾರೆ ಎಂದು ಒಬಾಮ ಅವರ ವಕ್ತಾರೆ ಕೇಟಿ ಹಿಲ್ ತಿಳಿಸಿದ್ದರು.

Fact Check: ಬಿಜೆಪಿಗೆ 35 ಕೋಟಿ ರೂ ಚೆಕ್ ನೀಡಿದ ವಿಜಯ್ ಮಲ್ಯFact Check: ಬಿಜೆಪಿಗೆ 35 ಕೋಟಿ ರೂ ಚೆಕ್ ನೀಡಿದ ವಿಜಯ್ ಮಲ್ಯ

ಮಿಗಿಲಾಗಿ ಕಳೆದ ಡಿಸೆಂಬರ್‌ನಲ್ಲಿ ಟ್ವೀಟ್ ಮಾಡಿದ್ದ ಬರಾಕ್ ಒಬಾಮ, 'ಹಿಂದಿಗಿಂತಲೂ ಅಪಾಯಕಾರಿಯಾಗಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಲಸಿಕೆ ಪಡೆದುಕೊಳ್ಳುವುದು ನಾವು ಮಾಡಬಹುದಾದ ಅತಿ ಮಹತ್ವದ ಸಂಗತಿಯಾಗಿದೆ. ಆದರೆ ವ್ಯಾಪಕವಾಗಿ ಲಸಿಕೆ ಲಭ್ಯವಾಗುವವರೆಗೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವಿಕೆ ವಾಸ್ತವವಾಗಿ ಹೆಚ್ಚು ಜೀವಗಳನ್ನು ಬದುಕಿಸಬಲ್ಲವು. ಜತೆಗೆ ಆರೋಗ್ಯ ಕಾಳಜಿ ಕಾರ್ಯಕರ್ತರ ಮೇಲಿನ ಒತ್ತಡವನ್ನು ತಗ್ಗಿಸಬಲ್ಲದು' ಎಂದು ಹೇಳಿದ್ದರು.

 Fake News Buster: Did Barack Obama Urge Africans Not To Take Covid Vaccine From US, Europe

ಲಸಿಕೆಯು ಅಪಾಯಕಾರಿಯಾಗಿದ್ದು, ಆಫ್ರಿಕನ್ನರ ವಿರುದ್ಧ ಪ್ರಯೋಗಿಸಲು ಬಿಳಿಯ ಜನರು ನಡೆಸಿರುವ ಹುನ್ನಾರ ಎಂದು ಎಲ್ಲಿಯೂ ಒಬಾಮ ಹೇಳಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿನ ಈ ಸುದ್ದಿ ಸುಳ್ಳು.

Fact Check

ಕ್ಲೇಮು

ಕೋವಿಡ್ 19 ಲಸಿಕೆ ಪಡೆದುಕೊಳ್ಳದಂತೆ ಆಫ್ರಿಕನ್ನರಿಗೆ ಒಬಾಮ ಮನವಿ ಮಾಡಿದ್ದಾರೆ.

ಪರಿಸಮಾಪ್ತಿ

ಒಬಾಮ ಅಂತಹ ಹೇಳಿಕೆ ನೀಡಿಲ್ಲ. ಇದನ್ನು ಅವರ ವಕ್ತಾರೆ ಖಚಿತಪಡಿಸಿದ್ದಾರೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A message claiming former US President Barack Obama has urged Africans not to take Covid-19 vaccines from America and Europe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X