ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಅದಾನಿಗೆ ಸರ್ಕಾರ ರೈಲ್ವೇಸ್‌ಅನ್ನು ಮಾರಾಟ ಮಾಡಿಲ್ಲ

|
Google Oneindia Kannada News

ನವದೆಹಲಿ, ಡಿಸೆಂಬರ್ 28: 'ಅದಾನಿ ರೈಲ್ವೆ' ಎಂದು ಬರೆದಿರುವ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ಒಂದರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲ್ವೇಸ್ ನಮ್ಮ ಖಾಸಗಿ ಸ್ವತ್ತು ಅಲ್ಲ ಎಂದು ಟಿಕೆಟ್‌ನಲ್ಲಿ ಹೇಳಲಾಗಿದೆ. ಪುಣೆ ರೈಲ್ವೆ ನಿಲ್ದಾಣದ ಈ ಟಿಕೆಟ್ ದಿನಾಂಕ, ಸಮಯ ಸೇರಿದಂತೆ ಇತರೆ ಮಾಹಿತಿಗಳನ್ನು ಒಳಗೊಂಡಿದೆ. ಟಿಕೆಟ್ ದರವನ್ನು 50 ರೂ ಎಂದು ನಮೂದಿಸಲಾಗಿದೆ.

ಈ ಟಿಕೆಟ್ ಫೋಟೊವನ್ನು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು ರೈಲ್ವೇಸ್ ಅನ್ನು ಅದಾನಿ ಸಮೂಹಕ್ಕೆ ಮಾರಾಟ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು 5 ರಿಂದ 50ರೂ.ಗೆ ಹೆಚ್ಚಿಸಿದ್ದನ್ನು ಟೀಕಿಸಿ ಆಗಸ್ಟ್‌ನಲ್ಲಿ ಇದೇ ರೀತಿಯ ಟಿಕೆಟ್‌ಅನ್ನು ಹಂಚಿಕೊಂಡಿದ್ದ ನೆಟ್ಟಿಗರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

Fact Check: ರೈಲ್ವೆಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಮಾರಲಾಗುತ್ತದೆಯೇ?Fact Check: ರೈಲ್ವೆಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಮಾರಲಾಗುತ್ತದೆಯೇ?

ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಕಾರಣ ಸಾಮಾಜಿಕ ಅಂತರ ಕಾಪಾಡಲು ಮತ್ತು ನಿಲ್ದಾಣಗಳಲ್ಲಿ ಅನಗತ್ಯ ಜನದಟ್ಟಣೆಯನ್ನು ನಿಯಂತ್ರಿಸಲು ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು ಹೆಚ್ಚಿಸಿರುವುದಾಗಿ ರೈಲ್ವೆ ಇಲಾಖೆ ಆಗಸ್ಟ್‌ನಲ್ಲಿ ಸ್ಪಷ್ಟೀಕರಣ ನೀಡಿತ್ತು.

Fake News Buster: A Viral Picture Claimes Government Of India Has Sold Railways To Adani

ಆಗ ನೆಟ್ಟಿಗರೊಬ್ಬರು ಟಿಕೆಟ್ ದರ ಏರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿ ಟಿಕೆಟ್ ಚಿತ್ರವನ್ನು ಹಂಚಿಕೊಂಡಿದ್ದರು. ಅದಕ್ಕೆ ರೈಲ್ವೆ ಇಲಾಖೆ ವಕ್ತಾರರು ವಿವರಣೆ ನೀಡಿದ್ದರು. ಆದರೆ ಈಗ ಅದೇ ಫೋಟೊವನ್ನು ಎಡಿಟ್ ಮಾಡಿ ಮೇಲ್ಭಾಗದಲ್ಲಿ ಅದಾನಿ ರೈಲ್ವೇಸ್ ಎಂದು ತಿದ್ದಲಾಗಿದೆ. ಟಿಕೆಟ್ ದರ, ಸಮಯ, ದಿನಾಂಕ ಇದೆಲ್ಲವೂ ಈಗ ಹರಿದಾಡುತ್ತಿರುವ ಟಿಕೆಟ್ ಹಳೆಯದು ಮತ್ತು ತಿದ್ದಿರುವುದು ಎನ್ನುವುದು ಸ್ಪಷ್ಟವಾಗಿದೆ.

Fact Check: ಹುಷಾರ್ ! ನಕಲಿ ನೌಕರಿ ಕೊಡಿಸುವ ವಾಟ್ಸಾಪ್ ಸಂದೇಶಕ್ಕೆ ಬಲಿಯಾಗಬೇಡಿFact Check: ಹುಷಾರ್ ! ನಕಲಿ ನೌಕರಿ ಕೊಡಿಸುವ ವಾಟ್ಸಾಪ್ ಸಂದೇಶಕ್ಕೆ ಬಲಿಯಾಗಬೇಡಿ

ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಅದಾನಿ ಉದ್ಯಮವನ್ನು ಎಳೆಯುತ್ತಿರುವುದು ಇದು ಮೊದಲ ಸಲವೇನಲ್ಲ. ಸೆಪ್ಟೆಂಬರ್‌ನಲ್ಲಿ ಕೂಡ ಅದಾನಿ ಎಂದು ಬರೆದಿದ್ದ ರೈಲಿನ ವಿಡಿಯೋವೊಂದು ವೈರಲ್ ಆಗಿತ್ತು. ಆದರೆ ಇದು ಸುಳ್ಳು ಆರೋಪವಾಗಿತ್ತು. ಕೆಲವು ದಿನಗಳ ಹಿಂದೆ ರೈಲೊಂದರ ಮೇಲೆ ಫಾರ್ಚ್ಯೂನ್ ಪ್ರಾಡಕ್ಟ್ಸ್ ಮತ್ತು ಅದಾನಿ ವಿಲ್ಮರ್ ಜಾಹೀರಾತು ಇರುವ ವಿಡಿಯೋ ಕೂಡ ವೈರಲ್ ಆಗಿತ್ತು. ಹರಿದಾಡಿತ್ತು. ಇದರಲ್ಲಿಯೂ ಭಾರತ ಸರ್ಕಾರವು ರೈಲ್ವೇಸ್ ಅನ್ನು ಅದಾನಿಗೆ ಮಾರಾಟ ಮಾಡಿದೆ ಎಂದು ಹೇಳಿತ್ತು.

Fact Check

ಕ್ಲೇಮು

ಪುಣೆಯಲ್ಲಿನ ಪ್ಲಾಟ್‌ಫಾರ್ಮ್ ಟಿಕೆಟ್‌ಗಳಲ್ಲಿ ಅದಾನಿ ರೈಲ್ವೇಸ್ ಎಂದು ಬರೆಯಲಾಗಿದೆ.

ಪರಿಸಮಾಪ್ತಿ

ಇದು ತಿದ್ದಲಾದ ಫೋಟೊ ಮತ್ತು ಅದಾನಿ ರೈಲ್ವೆ ಎಂಬ ಹೆಸರು ಮೂಲ ಚಿತ್ರದಲ್ಲಿ ಇಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: An old picture of Pune plotform ticket claims government of India has sold railways to Adani. But it was a morphed photo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X