ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಪ್ರತಿಭಟನೆ ಮಾಡುತ್ತಿರುವ ರೈತರು ರಾಷ್ಟ್ರಧ್ವಜವನ್ನು ಅವಮಾನಿಸಿದರೇ?

|
Google Oneindia Kannada News

ನವದೆಹಲಿ, ಡಿಸೆಂಬರ್ 7: ಇಬ್ಬರು ವ್ಯಕ್ತಿಗಳು ಭಾರತದ ರಾಷ್ಟ್ರಧ್ವಜದ ಮೇಲೆ ನಿಂತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೇಸರಿ ಪೇಟ ತೊಟ್ಟ ವ್ಯಕ್ತಿಯೊಬ್ಬ ಕೈಯಲ್ಲಿ ಶೂ ಹಿಡಿದು ನೆಲದ ಮೇಲೆ ಬಿದ್ದಿರುವ ತ್ರಿವರ್ಣ ಧ್ವಜದ ಮೇಲೆ ಇರಿಸಿರುವುದು ಈ ಫೋಟೊದಲ್ಲಿ ಕಾಣಿಸುತ್ತದೆ.

'ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದು ರೈತರ ಚಳವಳಿ ಎನಿಸಿದರೆ, ನಾನು ಅಂತಹ ಚಳವಳಿಯನ್ನು ವಿರೋಧಿಸುತ್ತೇನೆ. ಅಂತರ ರೈತರ ಚಳವಳಿ ನಾಚಿಕೆಗೇಡು. ಅವರು ದೇಶದ್ರೋಹಿಗಳು ಮತ್ತು ಅವರನ್ನು ಬಂಧಿಸಬೇಕು' ಎಂದು ವೈರಲ್ ಆಗಿರುವ ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಹಾಗಾದರೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ನಿಜಕ್ಕೂ ರಾಷ್ಟ್ರಧ್ವಜವನ್ನು ಈ ರೀತಿ ಅವಮಾನಿಸಿದ್ದಾರೆಯೇ?

Fact Check: ರೈತರ ಪ್ರತಿಭಟನೆಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದ ಮಹಿಳೆFact Check: ರೈತರ ಪ್ರತಿಭಟನೆಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದ ಮಹಿಳೆ

ರಿವರ್ಸ್ ಇಮೇಜ್ ಸರ್ಚ್ ಅವಕಾಶವನ್ನು ಬಳಸಿಕೊಂಡು 'ಒನ್ ಇಂಡಿಯಾ' ನಡೆಸಿದ ಹುಡುಕಾಟದಲ್ಲಿ ಈ ಫೋಟೊ ಬಹಳ ಹಳೆಯದು ಎನ್ನುವುದು ಗೊತ್ತಾಗಿದೆ. ಇದು 2013ರಲ್ಲಿ ಲಂಡನ್‌ನಲ್ಲಿ ತೆಗೆದ ಚಿತ್ರ. ದಳ್ ಖಾಸ್ಲಾ ಯುಕೆ ಎಂಬ ಬ್ಲಾಗ್‌ನಲ್ಲಿ ಈ ಫೋಟೊ ಕಂಡುಬಂದಿದೆ. ಆ ಪೋಸ್ಟ್‌ಅನ್ನು 2013ರ ಆಗಸ್ಟ್ 17ರಂದು ಬಳಸಲಾಗಿತ್ತು.

Fake News Buster: A Image Of Two Men Standing On National Flag Claims Off As Farmers Protest

'ಭಾರತದ ಸ್ವಾತಂತ್ರ್ಯ ದಿನ ಪ್ರತಿಭಟನೆ, ಭಾರತೀಯ ಹೈಕಮಿಷನ್ ಲಂಡನ್ 15ನೇ ಆಗಸ್ಟ್ 2013' ಎಂಬ ಶೀರ್ಷಿಕೆಯನ್ನು ಈ ಪೋಸ್ಟ್‌ಗೆ ನೀಡಲಾಗಿತ್ತು. 2013ರ ಆಗಸ್ಟ್ 15ರಂದು ಸಿಖ್ಖರು, ಕಾಶ್ಮೀರಿಗಳು ಮತ್ತು ಇತರೆ ಅಲ್ಪಸಂಖ್ಯಾತ ಗುಂಪುಗಳು ಭಾರತದ ಶೋಷಣೆ ಮತ್ತು ಅತಿಕ್ರಮಣದ ವಿರುದ್ಧ ಸೆಂಟ್ರಲ್ ಲಂಡನ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.

1947ರಿಂದಲೂ ಸಿಖ್ ರಾಷ್ಟ್ರವು ಭಾರತದ ಅತಿಕ್ರಮಣದಲ್ಲಿದ್ದು, ಪಂಜಾಬ್‌ನಲ್ಲಿನ ಸಿಖ್ ತಾಯ್ನೆಲವನ್ನು ನಾಶಪಡಿಸಲು ಅನೇಕ ಪ್ರಯತ್ನಗಳು ನಡೆದಿವೆ ಮತ್ತು 1984ರಲ್ಲಿ ಹತ್ಯಾಕಾಂಡದೊಂದಿಗೆ ಸಿಖ್ ರಾಷ್ಟ್ರವನ್ನು ನಿರ್ನಾಮ ಮಾಡಲಾಯಿತು. ಸಿಖ್ ದೇಶವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಮತ್ತು ಪರಿಸರವಾಗಿ ಕೂಡ ನಾಶಪಡಿಸಲು ಇನ್ನೇನೂ ಉಳಿದಿಲ್ಲ ಎಂದು ಆ ಪೋಸ್ಟ್‌ನಲ್ಲಿ ಬರೆಯಲಾಗಿದೆ.

Fact Check: ರೈತರ ಪ್ರತಿಭಟನೆಗೆ ಕಮಲಾ ಹ್ಯಾರಿಸ್ ಬೆಂಬಲFact Check: ರೈತರ ಪ್ರತಿಭಟನೆಗೆ ಕಮಲಾ ಹ್ಯಾರಿಸ್ ಬೆಂಬಲ

ಸುಮಾರು ಏಳು ವರ್ಷಗಳ ಹಿಂದೆ ಲಂಡನ್‌ನಲ್ಲಿ ನಡೆದ ಪ್ರತಿಭಟನೆಯ ಫೋಟೊವನ್ನು ಕೆದಕಿ ತೆಗೆದಿರುವ ಕೆಲವು ಕಿಡಿಗೇಡಿಗಳು, ಅದು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಚಿತ್ರ. ರೈತರು ರಾಷ್ಟ್ರಧ್ವಜವನ್ನು ತುಳಿದು ಅವಮಾನ ಮಾಡಿದ್ದಾರೆ ಎಂದು ಜನರನ್ನು ತಪ್ಪುದಾರಿಗೆ ಎಳೆಯುವಂತೆ ಬಿಂಬಿಸಿದೆ.

Fact Check

ಕ್ಲೇಮು

ಪ್ರತಿಭಟನಾ ನಿರತ ರೈತರು ರಾಷ್ಟ್ರಧ್ವಜವನ್ನು ಅವಮಾನಿಸಿದ್ದಾರೆ ಎಂಬಂತಹ ಫೋಟೊ.

ಪರಿಸಮಾಪ್ತಿ

ಇದು 2013ರಲ್ಲಿ ಲಂಡನ್‌ನಲ್ಲಿ ತೆಗೆದ ಚಿತ್ರ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A image being circulated in social media of two men standing on Indian National Flag. Post says during protest farmers disrespecting the flag. But it was an image from 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X