ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕಾಂಟ್ಯಾಕ್ಟ್‌ಲೆಸ್ ಥರ್ಮಾಮೀಟರ್‌ಗಳು ಆರೋಗ್ಯಕ್ಕೆ ಹಾನಿಕರವೇ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 4: ದೇಹದ ಉಷ್ಣಾಂಶ ಪರೀಕ್ಷಿಸುವ ಟೆಂಪರೇಚರ್ ಗನ್‌ಗಳು ಅಥವಾ ಕಾಂಟ್ಯಾಕ್ಟ್‌ಲೆಸ್ ಥರ್ಮಾಮೀಟರ್‌ಗಳು ಚರ್ಮಕ್ಕೆ ಹಾನಿಕರ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲದು ಎಂಬ ವಾಟ್ಸಾಪ್ ಸಂದೇಶಗಳು ಹರಿದಾಡುತ್ತಿವೆ.

Recommended Video

PM Care Fund ಗೆ ಪ್ರಧಾನಿ ಮೋದಿ ನೀಡಿದ ದೇಣಿಗೆ ಎಷ್ಟು? | Oneindia Kannada

ಕೋವಿಡ್-19ನ ಈ ಕಾಲದಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಈ ಕಾಂಟ್ಯಾಕ್ಟ್‌ಲೆಸ್ ಥರ್ಮಾಮೀಟರ್‌ಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎನ್ನುವುದನ್ನು ಮರೆಯುವಂತಿಲ್ಲ. ಈ ಥರ್ಮಾಮೀಟರ್‌ಗಳು ಸ್ಪರ್ಶರಹಿತ ತಂತ್ರಜ್ಞಾವನ್ನು ಹೊಂದಿದ್ದು, ದೇಶದ ಉಷ್ಣತೆಯನ್ನು ಅಳೆಯಲು ಇನ್‌ಫ್ರಾರೆಡ್ ತರಂಗಗಳನ್ನು ಬಳಸಿಕೊಳ್ಳುತ್ತವೆ.

Fact Check: ಮರೀನಾ ಬೀಚ್‌ನಲ್ಲಿ ಪೊಲೀಸ್ ಅಧಿಕಾರಿ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ?Fact Check: ಮರೀನಾ ಬೀಚ್‌ನಲ್ಲಿ ಪೊಲೀಸ್ ಅಧಿಕಾರಿ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ?

ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಬೆಳಕನ್ನು ಕೇಂದ್ರೀಕರಿಸಲು ಲೆನ್ಸ್ ಬಳಸಿದಾಗ ಈ ತಂತ್ರಜ್ಞಾನವು ತಾಪವನ್ನು ಸೃಷ್ಟಿಸುತ್ತದೆ. ಇನ್‌ಫ್ರಾರೆಡ್ ವಿಕಿರಣಗಳನ್ನು ಥರ್ಮಾಪೈಲ್ ಹೀರಿಕೊಳ್ಳುತ್ತದೆ ಹಾಗೂ ಅದನ್ನು ತಾಪಮಾನವಾಗಿ ಬದಲಿಸುತ್ತದೆ. ಇದರಿಂದ ನಿಮ್ಮ ಚರ್ಮದಲ್ಲಿನ ಉಷ್ಣತೆಯನ್ನು ತಿಳಿಯಲು ನೆರವಾಗುತ್ತದೆ.

Fake News: A Message Claims Contactless Thermometers Harmful To Your Health

ಈ ಥರ್ಮಾಮೀಟರ್ ಗನ್ ಅನ್ನು ನಿಮ್ಮ ತಲೆಗೆ ಗುರಿಯಾಗಿಸಿ ಹಿಡಿದಾಗ ಹೊರಡುವ ವಿಕಿರಣಗಳು ಚರ್ಮದ ಹಿಂದೆ ಇರುವ ಸಂವೇದನಾ ಗ್ರಾಹಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರಾಸಾಯನಿಕ ವಿಕಿರಣಗಳ ಅಪಾಯಗಳೂ ಉಂಟಾಗಬಹುದು ಎಂಬ ಸಂದೇಶಗಳು ಹರಿದಾಡುತ್ತಿದ್ದು, ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಯಾಗುತ್ತಿದೆ.

ಆದರೆ ಈ ಹೇಳಿಕೆಗಳು ಸತ್ಯವಲ್ಲ. ಸ್ಪರ್ಶ ರಹಿತ ಇನ್‌ಫ್ರಾರೆಡ್ ಥರ್ಮಾಮೀಟರ್‌ಗಳು ವಿಕಿರಣಗಳನ್ನು ಹೊರಸೂಸಲು ಬಂದೂಕಲ್ಲ. ಅದು ಮಾನವ ದೇಹದಲ್ಲಿ ಹೊರಸೂಸುತ್ತಿರುವ ಉಷ್ಣವನ್ನು ಇನ್‌ಫ್ರಾರೆಡ್ ಕಿರಣಗಳ ರೂಪದಲ್ಲಿ ಗ್ರಹಿಸಿ ಸಂಗ್ರಹಿಸುತ್ತದೆ. ಬಳಿಕ ಅದನ್ನು ಎಲೆಕ್ಟ್ರಿಸಿಟಿಗೆ ಪರಿವರ್ತಿಸುತ್ತದೆ ಎಂದು ಮಲೇಷ್ಯಾದ ಆರೋಗ್ಯ ಸಚಿವಾಲಯ ಇತ್ತೀಚೆಗೆ ಸ್ಪಷ್ಟಪಡಿಸುತ್ತದೆ.

Fact Check: ಕಾನೂನು ಪದವಿ ಪ್ರವೇಶ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದಕ್ಕೆ?Fact Check: ಕಾನೂನು ಪದವಿ ಪ್ರವೇಶ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದಕ್ಕೆ?

ವಾಸ್ತವವಾಗಿ ಈ ರೀತಿಯ ಉಷ್ಣಾಂಶ ಮಾಪನಗಳು ಒಬ್ಬರಿಂದೊಬ್ಬರಿಗೆ ಹರಡುವ ಅಥವಾ ಸಮಸ್ಯೆ ಹೆಚ್ಚಾಗುವ ಭಯವಿಲ್ಲದೆಯೇ ಜ್ವರ ಇದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಇರುವ ಅತ್ಯಂತ ಉತ್ತಮ ಮಾರ್ಗ. ಹಾಗೆಯೇ ಈ ಉಷ್ಣಾಂಶ ಮಾಪನಗಳನ್ನು ಮಾನವರ ಬಳಕೆಗಾಗಿಯೇ ಉಪಯೋಗಿಸಲಾಗುತ್ತಿದೆಯೇ ವಿನಾ ಕೈಕಾರಿಕಾ ಬಳಕೆಗಲ್ಲ ಎನ್ನುವುದು ಕೂಡ ಜನರ ಮನದಲ್ಲಿ ಇರಬೇಕಿದೆ.

ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ಥರ್ಮಾಮೀಟರ್‌ಗಳನ್ನು ಸಮರ್ಪಕವಾಗಿ ಬಳಸಬೇಕು. ವ್ಯಕ್ತಿಯಿಂದ ಒಂದು ನಿರ್ದಿಷ್ಟ ದೂರದಲ್ಲಿ ನಿಂತು ಸರಿಯಾದ ಸಮಯದವರೆಗೆ ಗುರಿ ಇರಿಸಬೇಕು.

Fact Check

ಕ್ಲೇಮು

ಸ್ಪರ್ಶರಹಿತ ಥರ್ಮಾಮೀಟರ್‌ಗಳು ಆರೋಗ್ಯಕ್ಕೆ ಹಾನಿಕರ.

ಪರಿಸಮಾಪ್ತಿ

ಸ್ಪರ್ಶರಹಿತ (ಕಾಂಟ್ಯಾಕ್ಟ್ ಲೆಸ್) ಥರ್ಮಾಮೀಟರ್‌ಗಳು ನಿಮ್ಮ ಆರೋಗ್ಯಕ್ಕೆ ಹಾನಿಕರವಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A Whatsapp message claiming contactless thermometers of temperature guns are harmful to your health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X