ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ದೀಪಿಕಾ, ರಣವೀರ್ ಜೊತೆ ಇರುವುದು ದಾವೂದ್ ಇಬ್ರಾಹಿಂ ಅಲ್ಲ

|
Google Oneindia Kannada News

ನವದೆಹಲಿ, ಆಗಸ್ಟ್ 24: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಭಾಗವಹಿಸಿದ್ದ ಸಭೆಯಲ್ಲಿ ದಾವೂದ್ ಇಮ್ರಾಹಿಂ ಕೂಡ ಇದ್ದ ಎನ್ನುವ ವಿಷಯ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಅದಕ್ಕೆ ಕಾರಣವಾಗಿದ್ದು ಒಂದು ಫೋಟೊ, ಆ ಚಿತ್ರ ನೋಡಿ ದಾವೂದ್ ಕೂಡ ಭಾಗಿಯಾಗಿದ್ದರು ಎನ್ನಲಾಗಿತ್ತು, ಸುಶಾಂತ್ ಜಸ್ಟೀಸ್ ಗ್ರೂಪ್ ಎನ್ನುವ ಗ್ರೂಪ್ ಈ ಚಿತ್ರವನ್ನು ಅಪ್‌ಲೋಡ್ ಮಾಡಿತ್ತು.

ಆ ಚಿತ್ರದಲ್ಲಿ ಕೆಂಪು ಬಣ್ಣದಲ್ಲಿ ಮಾರ್ಕ್ ಮಾಡಿರುವ ವ್ಯಕ್ತಿ ದಾವೂದ್ ಇಬ್ರಾಹಿಂ ಎಂದು ಹೇಳಲಾಗಿತ್ತು. ಆ ಚಿತ್ರದಲ್ಲಿರುವವರು ದಾವೂದ್ ಇಬ್ರಾಹಿಂ ಅಲ್ಲ ಸಂಜಯ್ ಲೀಲಾ ಬನ್ಸಾಲಿ , ಈ ಫೋಟೊ 2013ರದ್ದು, ಗೋಲಿಯೋಂಕಿ ರಾಸ್‌ಲೀಲಾ ರಾಮ್‌ಲೀಲಾ ಶೂಟಿಂಗ್ ಸೆಟ್‌ನಲ್ಲಿ ತೆಗೆದಿರುವ ಚಿತ್ರವಿದು ಎಂದು ಸ್ಪಷ್ಟನೆ ನೀಡಿದ್ದಾರೆ.

Fake: Man Seen In Image With Deepika Padukone Is Not Dawood Ibrahim

ಸಂದೀಪ್ ಸಿಂಗ್ ಇನ್‌ಸ್ಟಾಗ್ರಾಂನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸಂಜಯ್ ಲೀಲಾ ಬನ್ಸಾಲಿ, ದೀಪಿಕಾ, ರಣವೀರ್, ಆರ್ ವರ್ಮನ್, ಸಿದ್ಧಾರ್ಥ್ ಹಾಗೂ ವಾಸಿಖ್ ಖಾನ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇಫ್ತಾರ್ ಕೂಟದಲ್ಲಿ ಆ ಚಿತ್ರವನ್ನು ತೆಗೆದಿದ್ದು ಎಂದು ನೆನಪಿಸಿಕೊಂಡಿದ್ದಾರೆ.

ಸಾಕಷ್ಟು ಮಂದಿ ಇನ್‌ಸ್ಟಾಗ್ರಾಂ ಬಳಕೆದಾರರು ಅವರು ದಾವೂದ್ ಅಲ್ಲವಾಸಿಖ್ ಖಾನ್ ಎಂದು ಹೇಳಿದ್ದರು. ವಾಸಿಖ್ ಖಾನ್ ರಾಮ್‌ಲೀಲಾ ಸೇರಿದಂತೆ ಸಾಕಷ್ಟು ಸಿನಿಮಾ ನಿರ್ದೇಶನ ಮಾಡಿದ್ದಾರೆ.

ದಾವೂದ್ ಇಬ್ರಾಹಿಂ ಪಾಕಿಸ್ತಾನದ ನೆಲದಲ್ಲೇ ಇದ್ದಾನೆ ಎಂದು ಪಾಕಿಸ್ತಾನ ಹೇಳಿಕೆ ನೀಡಿ, ಬಳಿಕ ಇಲ್ಲ ಇಲ್ಲ ದಾವೂದ್ ಇಲ್ಲಿಲ್ಲ ಎಂದು ಹೇಳಿತ್ತು. ಪಾಕಿಸ್ತಾನವು ಕಳೆದ 20 ವರ್ಷಗಳಿಂದ ದಾವೂದ್ ಇಬ್ರಾಹಿಂಗೆ ಆಶ್ರಯ ನೀಡಿದೆ ಎಂದು ಭಾರತೀಯ ಏಜೆನ್ಸಿಗಳು ಹೇಳುತ್ತಿವೆ.

Fact Check

ಕ್ಲೇಮು

ದೀಪಿಕಾ, ರಣವೀರ್ ಜೊತೆ ಇರುವುದು ದಾವೂದ್ ಇಬ್ರಾಹಿಂ

ಪರಿಸಮಾಪ್ತಿ

ನಟಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಅವರು ಭಾಗವಹಿಸಿದ್ದ ಸಭೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೂಡ ಇದ್ದರು ಎಂಬ ಸುಳ್ಳು ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳು ಎಂದು ಸಂದೀಪ್ ಸ್ಪಷ್ಟಪಡಿಸಿದ್ದಾರೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
An image claiming that Dawood Ibrahim was present at a meeting in which actors Ranveer Singh and Deepika Padukone are part of has gone viral on the social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X