ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಹಿಂದಿ ವಿರೋಧಿ ಅಭಿಯಾನಕ್ಕೆ ಕೆನಡಾ ಪ್ರಧಾನಿ ಬೆಂಬಲ

|
Google Oneindia Kannada News

ಹಿಂದಿ ವಿರೋಧಿ ಅಭಿಯಾನದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಭಾಗಿಯಾಗಿದ್ದಾರೆ ಎನ್ನುವ ಫೋಟೊ ಒಂದು ವೈರಲ್ ಆಗಿತ್ತು. ಅದು ಈಗ ಸುಳ್ಳು ಎಂಬುದು ಖಾತ್ರಿಯಾಗಿದೆ.

'ಹಿಂದಿ ತೆರಿಯಾದು, ಪೋಡಾ' (ಹಿಂದಿ ಗೊತ್ತಿಲ್ಲ, ಹೋಗಪ್ಪ) ಎನ್ನುವ ಸಾಲುಗಳಿರುವ ಟಿ ಶರ್ಟ್ ಒಂದನ್ನು ಜಸ್ಟಿನ್ ಟ್ರೂಡೋ ಹಿಡಿದುಕೊಂಡಿರುವ ಫೋಟೊ ವೈರಲ್ ಆಗಿತ್ತು.

Fact Check: ಅಕ್ಟೋಬರ್ 1ರಿಂದ ಚಿತ್ರ ಮಂದಿರಗಳು ತೆರೆಯಲಿವೆFact Check: ಅಕ್ಟೋಬರ್ 1ರಿಂದ ಚಿತ್ರ ಮಂದಿರಗಳು ತೆರೆಯಲಿವೆ

ಈ ಚಿತ್ರವನ್ನು ಬಳಸಿಕೊಂಡು ಟ್ರೂಡೋ ಕೂಡ ಹಿಂದಿ ವಿರೋಧಿ ಅಭಿಯಾನಕ್ಕೆ ಬೆಂಬಲ ನೀಡಿದ್ದು, ತಮಿಳರು ಭಾಷಾ ರಕ್ಷಣೆಗೆ ಒಗ್ಗಟ್ಟಾಗಬೇಕು ಎನ್ನುವ ಒಕ್ಕಣಿಕೆಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

Fact Check: Canada Prime Minister Justin Trudeau Has Not Supported The Hindi Theriyadu, Poda Movement

ಹಾಗೆಯೇ ತಮಿಳು ಭಾಷೆ ಅಥವಾ ತಮಿಳು ಭಾಷಿಕರಿಗೆ ಯಾವುದೇ ಸಮಸ್ಯೆಯಾದರೆ ನಾನು ಸುಮ್ಮನೆ ಕೂರಲಾಗದು ಎಂದು ಆ ಪೋಸ್ಟ್‌ನಲ್ಲಿ ವಾದಿಸಲಾಗಿತ್ತು.

ಆದರೆ ಈ ಚಿತ್ರವು ಫೋಟೊ ಶಾಪ್ ಎನ್ನುವುದು ಖಾತ್ರಿಯಾಗಿದ್ದು, 2019ರ ಮೇ 30ರಂದು ಟ್ರೂಡೋ ವ್ಯಾಕ್ಸಿನ್ ಒಂದರ ಪರವಾಗಿ ಪ್ರಚಾರ ಮಾಡುವಾಗ ವ್ಯಾಕ್ಸಿನ್ ಕಾಸ್ ಅಡಲ್ಟ್ಸ್ ಎನ್ನುವ ಬರಹವಿರುವ ಟಿ ಶರ್ಟ್ ಬಿಡುಗಡೆ ಮಾಡಿದ್ದರು. ಈ ಚಿತ್ರವನ್ನು ದುರುಪಯೋಗ ಪಡಿಸಿಕೊಂಡು ಹಿಂದಿ ವಿರೋಧಿಗಳು ಇಂತಹ ಕುಚೋದ್ಯದ ಪೋಸ್ಟ್‌ಗಳನ್ನು ಹಾಕಿದ್ದಾರೆ.

Fact Check

ಕ್ಲೇಮು

ಹಿಂದಿ ವಿರೋಧಿ ಅಭಿಯಾನಕ್ಕೆ ಕೆನಡಾ ಪ್ರಧಾನಿ ಬೆಂಬಲ

ಪರಿಸಮಾಪ್ತಿ

ಹಿಂದಿ ವಿರೋಧಿ ಅಭಿಯಾನಕ್ಕೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಬೆಂಬಲ ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊ ಸುಳ್ಳು

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
An image has gone viral on the social media which claims that Canadian Prime Minister, Justin Trudeau has supported Tamil Nadu's anti Hindi slur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X