ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಹುಬ್ಬಳ್ಳಿಯಲ್ಲಿ ಭಯೋತ್ಪಾದಕನ ಬಂಧನದ ಸುದ್ದಿ

By ವಿಕಾಶ್ ಅಯ್ಯಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 28: 'ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ಭಯೋತ್ಪಾದಕನ ಬಂಧನ'- ಹೀಗೊಂದು ಶೀರ್ಷಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ಉಗ್ರನೊಬ್ಬನನ್ನು ಹಿಡಿಯಲಾಗಿದೆ ಎಂದು ಅದರಲ್ಲಿ ಹೇಳಲಾಗಿದೆ. ಉಗ್ರನನ್ನು ಹಿಡಿದ, ಬಸ್ ನಿಲ್ದಾಣಗಳಲ್ಲಿ ಪೊಲೀಸರು ಭದ್ರತೆ ಹಾಕಿರುವ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ.

ಅಂದಹಾಗೆ, ಈ ಹಿಂದೆ ಕೂಡ ಇದೇ ರೀತಿಯ ವಿಡಿಯೋ ವೈರಲ್ ಆಗಿತ್ತು. ಈಗ ಮತ್ತೆ ಅಂತಹ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಇದು ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ಚಿತ್ರೀಕರಿಸಿದ ವಿಡಿಯೋ ಹೌದು. ಆದರೆ ನೆಟ್ಟಿಗರು ಹೇಳಿಕೊಂಡಿರುವಂತೆ ಭಯೋತ್ಪಾದಕನನ್ನು ಸೆರೆ ಹಿಡಿದಿರುವುದು ಸತ್ಯವಲ್ಲ. ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಕೆಲವು ಸಮಯದ ಹಿಂದೆ ಪೊಲೀಸರು ಅಣಕು ಕಾರ್ಯಾಚರಣೆ ನಡೆಸಿದ್ದರು. 'ಒನ್ ಇಂಡಿಯಾ' ಈ ವಿಡಿಯೋದ ಮೂಲವನ್ನು ಹುಡುಕಿ ಸತ್ಯವನ್ನು ಬಹಿರಂಗಪಡಿಸಿದೆ.

Fact Check: ಭಾರತದಲ್ಲಿ ಚೀನಾ ನಿರ್ಮಿತ ಪ್ಲಾಸ್ಟಿಕ್ ಮೊಟ್ಟೆಗಳ ಮಾರಾಟFact Check: ಭಾರತದಲ್ಲಿ ಚೀನಾ ನಿರ್ಮಿತ ಪ್ಲಾಸ್ಟಿಕ್ ಮೊಟ್ಟೆಗಳ ಮಾರಾಟ

ಹುಬ್ಬಳ್ಳಿ-ಧಾರವಾಡ ಪೊಲೀಸರು ಆಗಸ್ಟ್ 22ರಂದು ಜಂಟಿಯಾಗಿ ಬಸ್ ನಿಲ್ದಾಣದಲ್ಲಿ ಅಣಕು ಅಭ್ಯಾಸ ನಡೆಸಿದ್ದರು. ತಮ್ಮ ಸುತ್ತಲಿನ ಅನುಮಾನಾಸ್ಪದ ವಸ್ತುಗಳು ಹಾಗೂ ವ್ಯಕ್ತಿಗಳ ಬಗ್ಗೆ ಜಾಗರೂಕತೆ ವಹಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸರು ಮತ್ತು ತುರ್ತು ಸೇವೆಗಳ ಸಿಬ್ಬಂದಿ ಈ ಅಣಕು ಕಾರ್ಯಾಚರಣೆ ಮಾಡಿದ್ದರು.

Fake: A Terrorist Was Caught At Hubballi Bus Stant: The Truth Is Here

Fact Check: ಇದು ಬೆಂಗಳೂರು ಹಿಂಸಾಚಾರದ ವಿಡಿಯೋ ಅಲ್ಲ Fact Check: ಇದು ಬೆಂಗಳೂರು ಹಿಂಸಾಚಾರದ ವಿಡಿಯೋ ಅಲ್ಲ

ಒಂದು ವೇಳೆ ಇಂತಹ ಸನ್ನಿವೇಶ ಎದುರಾದರೆ ಜನರು ಆ ಸಮಯದಲ್ಲಿ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ಅರಿವು ಮೂಡಿಸುವ ಪ್ರಯತ್ನ ಇದಾಗಿತ್ತು. ಬಸ್ ನಿಲ್ದಾಣದ ಜತೆಗೆ ವಿಮಾನ ನಿಲ್ದಾಣದಲ್ಲಿ ಕೂಡ ಈ ರೀತಿಯ ಅಣಕು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಪೊಲೀಸರು ನಿಜವಾಗಿಯೂ ಉಗ್ರನನ್ನು ಬಂಧಿಸಿದ್ದಾರೆ ಎಂದೇ ನಂಬಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಇದನ್ನು ಹಂಚಿಕೊಳ್ಳುತ್ತಿದ್ದಾರೆ.

Fact Check

ಕ್ಲೇಮು

ಹುಬ್ಬಳ್ಳಿಯಲ್ಲಿ ಉಗ್ರನ ಬಂಧನ

ಪರಿಸಮಾಪ್ತಿ

ನಾಗರಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸರು ನಡೆಸಿದ ಅಣಕು ಕಾರ್ಯಾಚರಣೆ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: A viral video claiming that a terrorist has benn caught at Hubballi bus stand. But the reality is, that was a mock drill by police to alert citizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X