ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಮತದಾನ ಮಾಡದವರ ಖಾತೆಯಿಂದ ಹಣ ಕಡಿತವಾಗುವುದೇ?

|
Google Oneindia Kannada News

ಲಕ್ನೋ ಫೆಬ್ರವರಿ 22: ಸದ್ಯ ಐದು ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಈ ಮಧ್ಯೆ ಕೆಲ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯವಾಗಿವೆ. ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ವದಂತಿಗಳನ್ನು ಹರಡಲಾಗುತ್ತಿದೆ. ಇದೀಗ ಪತ್ರಿಕೆಯೊಂದರ ಸ್ಕ್ರೀನ್ ಶಾಟ್ ವೇಗವಾಗಿ ಶೇರ್ ಆಗುತ್ತಿದೆ. ಇದರಲ್ಲಿ ಮತದಾನ ಮಾಡದವರಿಗೆ ಚುನಾವಣಾ ಆಯೋಗ ದಂಡ ವಿಧಿಸಲಿದೆ ಎಂದು ಹೇಳಲಾಗಿದೆ. ಜನರು ಭಯದಿಂದ ಅದನ್ನು ವೇಗವಾಗಿ ಹಂಚಿಕೊಳ್ಳುತ್ತಿದ್ದಾರೆ, ಆದರೆ ಅದರ ಸತ್ಯ ಬೇರೆಯೇ ಇದೆ.

ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಪತ್ರಿಕೆಯೊಂದರ ಕಟಿಂಗ್ ಇದೆ, ಅದರಲ್ಲಿ ನೀವು ಮತದಾನ ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂಪಾಯಿಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ಬರೆಯಲಾಗಿದೆ. ಮತದಾನ ಮಾಡದ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಈಗ ಮನಸ್ಸು ಮಾಡಿದೆ ಎಂದು ಈ ಸುದ್ದಿಯಲ್ಲಿ ಹೇಳಲಾಗಿದೆ.

Fact Check: Will money be deducted from the account of those who do not vote?

ಮತದಾನ ಮಾಡದವರಿಗೆ 350 ರೂ. ದಂಡ ವಿಧಿಸಲು ಆಯೋಗವು ಈಗಾಗಲೇ ನ್ಯಾಯಾಲಯದಿಂದ ಈ ನಿರ್ಧಾರಕ್ಕೆ ಅನುಮೋದನೆಯನ್ನು ತೆಗೆದುಕೊಂಡಿದೆ. ಜೊತಗೆ ಯಾರೊಬ್ಬರ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೆ, ಅದನ್ನು ಮೊಬೈಲ್ ರೀಚಾರ್ಜ್ ಸಮಯದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ಸುದ್ದಿಯಲ್ಲಿ ಹೇಳಲಾಗಿದೆ. ಸದ್ಯ ಐದು ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದೆ.

Recommended Video

ಹರ್ಷ ಕೊಲೆ ಪ್ರಕರಣದಲ್ಲಿ KS ಈಶ್ವರಪ್ಪ ಗಂಭೀರ ಆರೋಪ | Oneindia Kannada


ಇದೀಗ ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ಈ ಸುದ್ದಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದೆ. ಪತ್ರಿಕೆಯ ಕಟಿಂಗ್ ಅನ್ನು ಪೋಸ್ಟ್ ಮಾಡಿದ ಅವರು, ಮತದಾನ ಮಾಡದವರ ಖಾತೆಯಿಂದ 350 ರೂ.ಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಬರೆದಿದ್ದಾರೆ. ಇದು ಸಂಪೂರ್ಣ ನಕಲಿ ಸುದ್ದಿಯಾಗಿದೆ. ಚುನಾವಣಾ ಆಯೋಗ ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದುದರಿಂದ ಇಂತಹ ತಪ್ಪು ಸುದ್ದಿಗಳನ್ನು ಶೇರ್ ಮಾಡಬೇಡಿ. ಇದಲ್ಲದೇ ಚುನಾವಣಾ ಆಯೋಗದ ವಕ್ತಾರರೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ. ಅಂತಹ ಯಾವುದೇ ನಿರ್ಧಾರ ಚುನಾವಣಾ ಆಯೋಗ ಕೈಗೊಂಡಿಲ್ಲ. ಈ ಸುಳ್ಳು ಸುದ್ದಿಗಳನ್ನು ಹರಡದಂತೆ ಮನವಿ ಮಾಡಲಾಗಿದೆ.

Fact Check

ಕ್ಲೇಮು

ಮತದಾನ ಮಾಡದವರ ಖಾತೆಯಿಂದ ಹಣ ಕಡಿತ

ಪರಿಸಮಾಪ್ತಿ

ಚುನಾವಣಾ ಆಯೋಗ ಈ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಟ್ವೀಟ್ ಮಾಡಿದೆ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
The election process is going on in five states. Meanwhile, chaotic elements are also very active on social media, who are constantly spreading rumours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X