ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದೇ?

|
Google Oneindia Kannada News

ನವದೆಹಲಿ, ಜೂನ್ 17: ದೇಶದಲ್ಲಿ ಕೊರೊನಾ ಎರಡನೇ ಅಲೆ ಮುಕ್ತಾಯಗೊಳ್ಳುವ ಹಂತದಲ್ಲಿದೆ, ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗುವ ಸಾಧ್ಯತೆ ಇದ್ದು ಅದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಆದರೆ ಈ ಸುದ್ದಿ ಸತ್ಯವೇ, ಕೊರೊನಾ ಮೂರನೇ ಅಲೆ ನಿಜವಾಗಿಯೂ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆಯೇ ಎನ್ನುವ ಮಾಹಿತಿಯನ್ನು ನಾವು ನೀಡಿದ್ದೇವೆ. ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಸಾಬೀತು ಪಡಿಸುವ ಯಾವುದೇ ಆಧಾರಗಳಿಲ್ಲ.

Fact Check: ಕೊರೊನಾ ಲಸಿಕೆ ಹಾಕಿಸಿಕೊಂಡವರು ಅನಸ್ತೇಶಿಯಾ ಪಡೆದರೆ ಸಾವು?Fact Check: ಕೊರೊನಾ ಲಸಿಕೆ ಹಾಕಿಸಿಕೊಂಡವರು ಅನಸ್ತೇಶಿಯಾ ಪಡೆದರೆ ಸಾವು?

ಭಾರತದಲ್ಲಿ ಪೀಡಿಯಾಟ್ರಿಕ್ ಕೋವಿಡ್ ಸಮಸ್ಯೆಗಳನ್ನು ಪರೀಕ್ಷಿಸಲು ಪ್ರಮುಖ ಶಿಶುವೈದ್ಯರನ್ನು ಒಳಗೊಂಡ ತಜ್ಞರ ಸಭೆಯಲ್ಲಿ ವರದಿಯನ್ನು ಸಿದ್ಧಪಡಿಸಲಾಗಿದೆ. ಭಾರತದ ಮಕ್ಕಳಲ್ಲಿನ ಕೊರೊನಾ ಲಕ್ಷಣಗಳನ್ನು ಇಡೀ ಜಗ್ಗತಿನ ಮಕ್ಕಳಿಗೆ ಹೋಲಿಕೆ ಮಾಡಲಾಗಿದೆ.

Fact Check: Will Corona Third Wave Affect Children More In India

ಕೋವಿಡ್ 19 ಹೊಂದಿರುವ ಬಹುತೇಕ ಮಕ್ಕಳು ಲಕ್ಷಣ ರಹಿತರಾಗಿದ್ದಾರೆ ಮತ್ತು ಸೌಮ್ಯ ಪ್ರಮಾಣದ ಸೋಂಕನ್ನು ಹೊಂದಿದ್ದಾರೆ. ಕೆಲವೊಂದು ಮಕ್ಕಳಿಗೆ ಉಸಿರಾಟದ ಸಮಸ್ಯೆಯೊಂದಿಗೆ ಜ್ವರವಿರುತ್ತದೆ. ಹಾಗೂ ಹೆಚ್ಚಾಗಿ ವಾಂತಿ, ಅತಿಸಾರ, ಹೊಟ್ಟೆನೋವು ಕೂಡ ಕಾಣಿಸಿಕೊಳ್ಳುತ್ತಿದೆ.

ದೇಶಾದ್ಯಂತ ಕೊವಿಡ್ -19 (Covid-19) ಸೋಂಕಿನ ಮೊದಲ ಮತ್ತು ಎರಡನೇ ಅಲೆಯಲ್ಲಿ ಎಷ್ಟು ಮಕ್ಕಳು ಈ ಸೋಂಕಿಗೆ ಗುರಿಯಾದರು ಹಾಗೂ ಅವರಲ್ಲಿ ಎಷ್ಟು ಜನರು ಆಸ್ಪತ್ರೆಗೆ ದಾಖಲಾದರು ಎಂಬುದರ ಮಾಹಿತಿ ರಾಷ್ಟ್ರೀಯ ಮಟ್ಟದಲ್ಲಿ ಸಂಗ್ರಹಿಸಲಾಗಿಲ್ಲ. ಹೀಗಾಗಿ ಅಧ್ಯಯನಕ್ಕಾಗಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ದೆಹಲಿ-NCR ಪ್ರಾಂತ್ಯದ ಒಟ್ಟು 10 ಆಸ್ಪತ್ರೆಗಳಲ್ಲಿ ಈ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 2600 ಮಕ್ಕಳಲ್ಲಿ ಕೊರೊನಾ ವೈರಸ್ ನಿಂದಾಗುವ ಮೃತ್ಯುದರವನ್ನು (ಪರಿಗಣಿಸಲಾಗಿ, ಅದು ಶೇ.2.4ರಷ್ಟಿದೆ ಎಂದು ತಿಳಿದು ಬಂದಿದೆ. ಈ ಮಕ್ಕಳಲ್ಲಿ ಶೇ.40 ರಷ್ಟು ಮಕ್ಕಳು ಯಾವುದಾದರೊಂದು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು.

ಲ್ಯಾನ್ಸೆಟ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಕೊರೊನಾ ವೈರಸ್ ನ ಎರಡೂ ಅಲೆಗಳಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು ಶೇ.9 ರಷ್ಟು ಮಕ್ಕಳಲ್ಲಿ ಸೋನಿನ ಗಂಭೀರ ಲಕ್ಷಣಗಳು ದೊರೆತಿವೆ. ಈ ಅಧ್ಯಯನದಲ್ಲಿ ಏಮ್ಸ್‌ನಲ್ಲಿ ಚಿಕ್ಕಮಕ್ಕಳ ಆರೋಗ್ಯ ತಜ್ಞರಾಗಿರುವ ಡಾ. ಶೆಫಾಲಿ ಗುಲಾಟಿ, ಡಾ. ಸುಶೀಲ್ ಕೆ. ಕಾಬರಾ ಹಾಗೂ ಡಾ. ರಾಕೇಶ ಲೋಧಾ ಭಾಗವಹಿಸಿದ್ದರು.

Recommended Video

ಮುಂಜಾಗ್ರತೆ ಕ್ರಮವಾಗಿ ಮಕ್ಕಳಿಗೆ ಬೆಡ್ ಹಾಗೂ ವೆಂಟಿ ಲೆಟರ್ ವ್ಯವಸ್ಥೆ ಮಾಡಲಾಗಿದೆ!

ಈ ಕುರಿತು ಹೇಳಿಕೆ ನೀಡಿರುವ ಡಾ. ಕಾಬರಾ, ''ಮಾಹಾಮಾರಿಯ ಸಂಭಾವ್ಯ ಮೂರನೇ ಅಲೆಯಲ್ಲಿ ಸೊಂಕಿತಕ್ಕೆ ಒಳಗಾಗುವ ಶೇ.5 ಕ್ಕಿಂತ ಕಡಿಮೆ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಅವಶ್ಯಕತೆ ಬೀಳಲಿದೆ ಮೃತ್ಯು ದರ ಕೂಡ ಶೇ.2ರವರೆಗೆ ಮಾತ್ರ ಇರುವ ಸಾದ್ಯತೆ ಇದೆ'' ಎಂದಿದ್ದಾರೆ.

Fact Check

ಕ್ಲೇಮು

ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ

ಪರಿಸಮಾಪ್ತಿ

ಕೊರೊನಾ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
With the second wave of COVID-19 receding gradually, there is already talk of a third wave. Many have reported that the third wave would affect the children more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X