ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಹುಷಾರ್ ! ನಕಲಿ ನೌಕರಿ ಕೊಡಿಸುವ ವಾಟ್ಸಾಪ್ ಸಂದೇಶಕ್ಕೆ ಬಲಿಯಾಗಬೇಡಿ

|
Google Oneindia Kannada News

ನವದೆಹಲಿ, ಡಿಸೆಂಬರ್ 18: ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ನೋಂದಣಿ ಮಾಡಿಕೊಳ್ಳಿ ನೀವು ಮನೆಯಲ್ಲೇ ಕುಳಿತು ಸಾವಿರಾರು ರೂಪಾಯಿ ಎಣಿಸಬಹುದು ಎಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದಿರಿ.

ಸಾಮಾನ್ಯವಾಗಿ ಗೃಹಿಣಿಯರಿಗೆ ಪಾರ್ಟ್ ಟೈಂ, ಫುಲ್ ಟೈಂ ಜಾಬ್ ಆಫರ್‌ಗಳು ಬರುತ್ತಲೇ ಇರುತ್ತವೆ. ಸಾಕಷ್ಟು ಮಂದಿ ಆನ್‌ಲೈನ್ ಫ್ರಾಡ್‌ಗಳನ್ನು ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ವಾಟ್ಸಾಪ್ ಬಳಕೆದಾರರು ಕೊಂಚ ಜಾಗೃತರಾಗಿರಿ, ಕೆಲವು ದಿನಗಳ ಹಿಂದೆ ವಾಟ್ಸಾಪ್‌ನಲ್ಲಿ ಒಂದು ಸಂದೇಶ ಹರಿದಾಡಿತ್ತು.ಈ ಲಿಂಕ್ ಕ್ಲಿಕ್ ಮಾಡಿ, ವರ್ಕ್ ಫ್ರಂ ಹೋಂ ಆಫರ್‌ನಿಂದ, ಪ್ರತಿನಿತ್ಯ ನೀವು 3 ಸಾವಿರ ರೂ ಗಳಿಸಬಹುದು ಎನ್ನುವ ಸಂದೇಶ ಅದಾಗಿತ್ತು.

Fact Check: WhatsApp Scam Message Offering Job With Rs 3000 Per Day Salary Is Hoax

ಅಂತೆಯೇ ಅದು ಪರಿಚಯವಿಲ್ಲದ ನಂಬರ್‌ನಿಂದ ಬಂದಿದ್ದರೂ, ಜನರು ನಂಬಿ ನೋಂದಣಿ ಎಂದು 50 ರೂ ಕಟ್ಟಿದ್ದರು. ಆ ಲಿಂಕ್ ಕ್ಲಿಕ್‌ ಮಾಡಿ ನಿಮಗೆ ಆಫರ್‌ಗಳು ಲಭ್ಯವಿರಲಿವೆ ಎಂದು ಬರೆದಿದ್ದಾಗ, ಸಾಮಾನ್ಯವಾಗಿ ಜನರು ಲಿಂಕ್ ಕ್ಲಿಕ್ ಮಾಡುತ್ತಾರೆ, ಆಗ ಹಣವು ಕಟ್ ಆಗುವುದಲ್ಲದೇ ನಿಮ್ಮ ಮೊಬೈಲ್ ಡಾಟಾ ಕೂಡ ಖಾಲಿಯಾಗಬಹುದು.

ಇದು ಪಾರ್ಟ್ ಟೈಂ ಕೆಲಸವಾಗಿದ್ದು, ಮನೆಯಲ್ಲಿಯೇ ಕುಳಿತು ಒಂದು ದಿನಕ್ಕೆ 200 ರಿಂದ 3 ಸಾವಿರ ರೂ ಗಳಿಸಬಹುದು, ನಿತ್ಯ 10 ರಿಂದ 30 ನಿಮಿಷಗಳು ಮಾತ್ರ ಇದಕ್ಕೆ ನೀವು ಮೀಸಲಿಡಬೇಕಾಗಿದೆ. ಕೆಲಸ ಬೇಕಾದವರು 50 ರೂ ನೀಡಿ ನೋಂದಣಿ ಮಾಡಿಕೊಳ್ಳಿ ಎಂದು ಸಂದೇಶದಲ್ಲಿ ಬರೆದಿರುತ್ತದೆ.

ಇಂತಹ ಸಂದೇಶಗಳು ಬಂದಾಗ ಜನರು ಹೆಚ್ಚು ಬಾರಿ ಆಲೋಚಿಸಬೇಕು.ಇದೆಲ್ಲಾ ಸಂದೇಶಗಳು ಸುಳ್ಳಾಗಿದ್ದು, ಅದು ಸೈಬರ್ ದಾಳಿಯಾಗಿರುತ್ತದೆ.ಒಂದೊಮ್ಮೆ ಅಂತಹ ಸಂದೇಶಗಳು ಬಂದಾಗ ಓಪನ್ ಮಾಡಬೇಡಿ ಅಲ್ಲವೇ ನಂಬರ್‌ನ್ನು ಬ್ಲಾಕ್ ಮಾಡಿಬಿಡಿ. ಇದರಿಂದ ನಿಮ್ಮ ಹಣ, ನಿಮ್ಮ ಸಮಯವೂ ಉಳಿತಾಯವಾಗುತ್ತದೆ.

Fact Check

ಕ್ಲೇಮು

ವಾಟ್ಸಾಪ್‌ನಲ್ಲಿ ಬರುವ ಜಾಬ್ ಆಫರ್ ಲಿಂಕ್ ಕ್ಲಿಕ್ ಮಾಡಿದರೆ ನಿತ್ಯ 3 ಸಾವಿರ ದುಡಿಯುವ ಅವಕಾಶ ನೀಮ್ಮದಾಗಲಿದೆ

ಪರಿಸಮಾಪ್ತಿ

ವಾಟ್ಸಾಪ್‌ನಲ್ಲಿ ಬರುವ ಸಂದೇಶದ ಬಗ್ಗೆ ಎಚ್ಚರಿಕೆಯಿಂದಿರಿ, ಉದ್ಯೋಗ ಕೊಡಿಸುವ ಸಂದೇಶಗಳೆಲ್ಲಾ ಸುಳ್ಳು

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Looks like scammers find a way to do online frauds and dupe people despite so many measures taken by social-media platforms to combat the same. In one such recent case, people have reported to be receiving messages offering them part-time work from home (WFH) jobs for a salary of Rs 3000 per day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X