ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ತಮಿಳುನಾಡು, ಕೇರಳದಲ್ಲಿ ಬಿಪಿನ್‌ ರಾವತ್‌ ಸಾವಿನ ಸಂಭ್ರಮ?

|
Google Oneindia Kannada News

ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಹಿತ 14 ಜನರಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿರುವ ಘಟನೆ ತಮಿಳುನಾಡಿನ ನೀಲ್‌ಗಿರಿ ಜಿಲ್ಲೆಯ ಕೂನೂರ್ ಬಳಿ ನಡೆದಿದೆ. ಐಎಎಫ್ ಎಂಐ-17ವಿ5 ಹೆಲಿಕಾಪ್ಟರ್ ಇದಾಗಿದ್ದು, ಹೆಲಿಕಾಪ್ಟರ್‌ನಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾಗಿರುವುದನ್ನು ಇರುವುದನ್ನು ಭಾರತೀಯ ಸೇನೆ ಈಗಾಗಲೇ ಖಚಿತಪಡಿಸಿದೆ. ಬಿಪಿನ್ ರಾವತ್‌ ನಿಧನಕ್ಕೆ ಇಡೀ ದೇಶವೇ ಸಂತಾಪ ಸೂಚಿಸಿದ್ದು ಮಾತ್ರವಲ್ಲದೇ ವಿದೇಶಗಳು ಕೂಡಾ ಸಿಡಿಎಸ್‌ ನಿಧನಕ್ಕೆ ಸಂತಾಪ ಸೂಚಿಸಿದೆ.

ಈ ನಡುವೆ ತಮಿಳುನಾಡು ಹಾಗೂ ಕೇರಳದ ಕೆಲವು ಕಾಲೇಜು ಹಾಸ್ಟೆಲ್‌ಗಳಲ್ಲಿ ಬಿಪಿನ್‌ ರಾವತ್‌ ಸಾವನ್ನು ಸಂಭ್ರಮಿಸಲಾಗುತ್ತಿದೆ ಎಂದು ಕೆಲವು ವಾಟ್ಸಾಪ್‌ ಮೆಸೇಜ್‌ಗಳು ವೈರಲ್‌ ಆಗುತ್ತಿದೆ. ಸಿಡಿಎಸ್‌ ಸಾವನ್ನಪ್ಪಿದ ಬೆನ್ನಲ್ಲೇ ಈ ಎರಡು ರಾಜ್ಯಗಳು ಹಾಸ್ಟೆಲ್‌ಗಳಲ್ಲಿ ಡಿಜೆಯನ್ನು ಹಾಕಿ ಕುಣಿದು ಸಂತೋಷ ಪಡಲಾಗಿದೆ ಎಂದು ಆರೋಪ ಮಾಡಿರುವ ಸಂದೇಶವು ಕೂಡಾ ಹರಿದಾಡುತ್ತಿದೆ.

ಬಿಪಿನ್ ರಾವತ್ ಸಾವಿಗೆ ಸಂಭ್ರಮಿಸಿದ್ದಕ್ಕೆ ಇಬ್ಬರ ವಿರುದ್ಧ ಪ್ರಕರಣ; ಬಂಧನ ಸಾಧ್ಯತೆಬಿಪಿನ್ ರಾವತ್ ಸಾವಿಗೆ ಸಂಭ್ರಮಿಸಿದ್ದಕ್ಕೆ ಇಬ್ಬರ ವಿರುದ್ಧ ಪ್ರಕರಣ; ಬಂಧನ ಸಾಧ್ಯತೆ

ಆದರೆ ತಮಿಳುನಾಡಿನಲ್ಲಿ ಸಿಡಿಎಸ್‌ ಬಿಪಿನ್‌ ರಾವತ್‌ ಮೃತ ದೇಹವನ್ನು ಆಂಬುಲೆನ್ಸ್‌ನಲ್ಲಿ ಕೊಂಡೊಯ್ಯುತ್ತಿರುವಾಗ ತಮಿಳುನಾಡಿನ ಜನರು ಹೂವನ್ನು ಹಾಕಿ ಸಂತಾಪ ಸೂಚಿಸಿದ್ದು, ಲಾಗ್‌ ಲಿವ್‌ ಸಿಡಿಎಸ್‌ ಎಂದು ಘೋಷಣೆಗಳನ್ನು ಕೂಡಾ ಕೂಗಿದ್ದಾರೆ. ಕೇರಳದಲ್ಲೂ ಕೂಡಾ ಸಿಡಿಎಸ್‌ ಮರಣಕ್ಕೆ ಸಂತಾಪ ಸಭೆಗಳು ನಡೆದಿದೆ. ಜನರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಕೇರಳ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಗಳು ಕೂಡಾ ಬಿಪಿನ್‌ ರಾವತ್‌ ಹಾಗೂ ಇತರೆ ಅಧಿಕಾರಿಗಳು ಹೆಲಿಕಾಪ್ಟರ್‌ ಪತನವಾಗಿ ಸಾವನ್ನಪ್ಪಿದ್ದಕ್ಕೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Fact Check: Were there celebrations in Tamil Nadu, Kerala following death of Bipin Rawat?

ಒಂದೆಡೆ ಜನರು ಸಂತಾಪ ವ್ಯಕ್ತಪಡಿಸಿರುವಾಗಲೇ ಇನ್ನೊಂದೆಡೆ ತಮಿಳುನಾಡು, ಕೇರಳ ರಾಜ್ಯದ ಕಾಲೇಜು ಹಾಸ್ಟೆಲ್‌ಗಳಲ್ಲಿ ಬಿಪಿನ್‌ ನಿಧನವನ್ನು ಸಂಭ್ರಮಿಸಲಾಗಿದೆ ಎಂದು ವಾಟ್ಸಾಪ್‌ನಲ್ಲಿ ಸಂದೇಶಗಳು ಹರಡುತ್ತಿದೆ. ಈ ನಿಟ್ಟಿನಲ್ಲಿ Oneindia ಎಲ್ಲ ಮೂಲಗಳನ್ನು ಪರಿಶೀಲನೆ ಮಾಡಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಪಿನ್‌ ರಾವತ್‌ ಸಾವನ್ನು ಸಂಭ್ರಮಿಸಿರುವುದು ನಿಜವೇ ಎಂದು ಫಾಕ್ಟ್‌ಚೆಕ್‌ ಮಾಡಲಾಗಿದೆ. ಆದರೆ ವಾಟ್ಸಾಪ್‌ನಲ್ಲಿ ಮಾಡಲಾದ ಆರೋಪವು ನಿಜ ಎಂದು ಸಾಬೀತು ಪಡಿಸುವ ಯಾವ ಮೂಲಗಳು ಕೂಡಾ ಕಂಡು ಬಂದಿಲ್ಲ. ಹಾಗಾಗಿ ಜನರು ಯಾವುದೇ ಈ ತರಹದ ಊಹಾಪೋಹಕ್ಕೆ ಬಲಿಯಾಗಿ ಈ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಎಲ್ಲಾ ಆಧಾರಗಳನ್ನು ಪರಿಶೀಲನೆ ಮಾಡಿದಾಗ ಈ ವಾಟ್ಸಾಪ್‌ ಸಂದೇಶವು ಸುಳ್ಳು ಎಂಬುವುದು ಖಚಿತವಾಗಿದೆ.

ಮಂಗಳೂರಿನಲ್ಲಿ ಸಿಡಿಎಸ್‌ ನಿಧನವನ್ನು ಸಂಭ್ರಮಿಸಿದ ಕಿಡಿಗೇಡಿಗಳು

ಸಿಡಿಎಸ್‌ ಸಾವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೇರಳದ ಕೆಲವು ಸಂಘಟನೆಗಳು ನಗುವಿನ ಇಮೋಜಿಯನ್ನು ಪೋಸ್ಟ್‌ ಮಾಡಿರುವುದು ನಿಜ. ಆದರೆ ಕೇರಳ ರಾಜ್ಯ ಸಂಪೂರ್ಣವಾಗಿ ಸಿಡಿಎಸ್‌ ನಿಧನವನ್ನು ಸಂಭ್ರಮಿಸಿಲ್ಲ. ಬದಲಾಗಿ ಕರ್ನಾಟಕದಲ್ಲಿ ಸಿಡಿಎಸ್‌ ನಿಧನವನ್ನು ಸಂಭ್ರಮಿಸಿದ ಘಟನೆ ನಡೆದಿದೆ. ಮಂಗಳೂರಿನ ಸ್ಥಳೀಯ ನಿವಾಸಿ ಸುಶಾಂತ್ ಪೂಜಾರಿ ಎಂಬುವರು ನೀಡಿದ ದೂರಿನ ಮೇಲೆ ಬೆಂಗಳೂರು ಮೂಲದ ವಸಂತ ಕುಮಾರ್ ಟಿ.ಕೆ ಹಾಗೂ ಶ್ರೀನಿವಾಸ ಕಾರ್ಕಳ ಎಂಬುವರ ಫೇಸ್‌ಬುಕ್ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದು ಖಾತೆ ಅಪರಿಚಿತ ವ್ಯಕ್ತಿಗೆ ಸೇರಿದ್ದಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಇನ್ನು ಈಗಾಗಲೇ ಈ ರೀತಿ ಸಾವನ್ನು ಸಂಭ್ರಮಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಕೇರಳ ಸಿನಿಮಾ ರಂಗದವರಾದ ಆಲಿ ಅಕ್ಬರ್‌, "ನಾನು ಹಿಂದೂ ಧರ್ಮಕ್ಕೆ ಮತಾಂತರವಾಗುತ್ತಿದ್ದೇನೆ. ಮುಸ್ಲಿಮರು ಜನರಲ್‌ ರಾವತ್‌ ಇಂಟರ್‌ನೆಟ್‌ನಲ್ಲಿ ಸಂಭ್ರಮಿಸಿದ್ದಕ್ಕೆ ನಾನು ಬೇಸರವಾಗಿದ್ದೇನೆ," ಎಂದು ಹೇಳಿಕೊಂಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

KL Rahul ಆಟದಿಂದ ಖತಂ ಆಗುತ್ತಾ ಈ ಮೂವರ ಕ್ರಿಕೆಟ್ ಕೆರಿಯರ್? | Oneindia Kannada

Fact Check

ಕ್ಲೇಮು

ಜನರಲ್‌ ರಾವತ್‌ ನಿಧನವನ್ನು ತಮಿಳುನಾಡು, ಚೆನ್ನೈನಲ್ಲಿ ಸಂಭ್ರಮಿಸಲಾಗಿದೆ.

ಪರಿಸಮಾಪ್ತಿ

ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Were there celebrations in Tamil Nadu, Kerala following death of Bipin Rawat?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X